ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಪ್ರಚಾರ ಮಾಡಿ: ಮಾಜಿ ಸಚಿವ ಎಚ್‌.ವೈ.ಮೇಟಿ

By Kannadaprabha News  |  First Published Apr 2, 2023, 10:42 PM IST

ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಬಗ್ಗೆ ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ಮಾಡಬೇಕು ಎಂದು ಮಾಜಿ ಸಚಿವ ಎಚ್‌.ವೈ.ಮೇಟಿ ತಿಳಿಸಿದರು. ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಹಾಗೂ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳ ನೇಮಕ ಪತ್ರ ವಿತರಿಸಿ ಮಾತನಾಡಿ, ಈಗಾಗಲೇ ಕಾಂಗ್ರೆಸ್‌ ಹಲವು ಯೋಜನೆಗಳ ಗ್ಯಾರಂಟಿ ಕಾರ್ಡ್‌ ನೀಡಿದೆ.


ಬಾಗಲಕೋಟೆ (ಏ.02): ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಬಗ್ಗೆ ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ಮಾಡಬೇಕು ಎಂದು ಮಾಜಿ ಸಚಿವ ಎಚ್‌.ವೈ.ಮೇಟಿ ತಿಳಿಸಿದರು. ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಹಾಗೂ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳ ನೇಮಕ ಪತ್ರ ವಿತರಿಸಿ ಮಾತನಾಡಿ, ಈಗಾಗಲೇ ಕಾಂಗ್ರೆಸ್‌ ಹಲವು ಯೋಜನೆಗಳ ಗ್ಯಾರಂಟಿ ಕಾರ್ಡ್‌ ನೀಡಿದೆ, ಈ ಬಗ್ಗೆ ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು. ಪಕ್ಷದ ಸಿದ್ಧಾಂತ ಮತ್ತು ಹಿಂದಿನ ಕಾಂಗ್ರೆಸ್‌ ಸರ್ಕಾರದ ಸಾಧನೆಗಳ ಬಗ್ಗೆ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರ ನೀಡಿದ ಭಾಗ್ಯಗಳಿಂದ ಆಗಿರುವ ಅನುಕೂಲಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನಿಂಗನಗೌಡ ಪಾಟೀಲ್‌, ಬ್ಲಾಕ್‌ ಅಧ್ಯಕ್ಷ ಅಬ್ದುಲ್‌ ರಜಾಕ ಬೇನೂರ್‌, ಎಸ್‌.ಎನ್‌.ರಾಂಪುರ್‌, ಎಸ್ಟಿಘಟಕದ ಜಿಲ್ಲಾಧ್ಯಕ್ಷ ಹನಮಂತ ಡೋಣಿ ಇದ್ದರು. ಹಿಂದುಳಿದ ವರ್ಗದ ಘಟಕದ ಬ್ಲಾಕ್‌ ಅಧ್ಯಕ್ಷ ಅಜೇಯ ಕಪಾಟೆ ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ಸದಸ್ಯ ಚೆನ್ನವೀರ ಅಂಗಡಿ, ಅಮಿನಸಾಬ ನದಾಫ್‌, ಮುತ್ತು ಜೋಳದ, ದಾನೇಶ ತಡಸಲೂರ, ರಂಗಪ್ಪ ಮೆಳ್ಳಿ, ಅಮರೇಶ ಮಡ್ಡಿಕಟ್ಟಿ, ವಿಜಯ ಮುಳ್ಳುರ, ಗೋಪಾಲ ಹಳಪೇಟ, ಸಂದೀಪ ಬೆಳಗಲ್ಲ, ಆಕಾಶ ನೀಲನಾಯಕ, ಮುಧೋಳ ಪುರಸಭೆ ಸದಸ್ಯ ಸಂತೋಷ ಪಾಲೋಜೆ, ಲಂಕೇಶ ಚಿನಿವಾಲರ, ಮುಂತಾದವರು ಪಾಲ್ಗೊಂಡಿದ್ದರು.

Tap to resize

Latest Videos

undefined

ಕಾರ್ಮಿಕರ ಹಿತಕಾಯುವುದೇ ಕಾಂಗ್ರೆಸ್‌ ಧ್ಯೇಯ: ಮಾಜಿ ಸಚಿವ ಎಚ್‌.ವೈ.ಮೇಟಿ

ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿಗೆ ನೇಮಕ: ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿಗೆ ಜಂಟಿ ಸಂಯೋಜಕರಾಗಿ ಸಿದ್ದರಾಯಪ್ಪ ದಾನಪ್ಪಗೋಳ, ಸಿದ್ದಣ್ಣ ಗೋಡಿ, ಸಂತೋಷ ಶಿವಪ್ಪ ಲಮಾಣಿ, ಶ್ರೀಧರ್‌ ನೀಲನಾಯಕ್‌, ಸೈಯದ್‌ ಭಾಗವಾನ್‌, ಭೀಮಪ್ಪ ಶೆಟ್ಟಪ್ಪನವರ್‌ ಅನುಷಾ ಮಾಗಿ ಇವರನ್ನು ನೇಮಕ ಮಾಡಲಾಗಿದೆ. ಬಾಗಲಕೋಟ ಕ್ಷೇತ್ರದ ಕಾಂಗ್ರೆಸ್‌ ಪ್ರಚಾರ ಸಮಿತಿಗೆ ಸಂಗಮೇಶ ದೊಡಮನಿ ಅವರನ್ನು ಸಂಯೋಜಕರನ್ನಾಗಿ, ಜಂಟಿ ಸಂಯೋಜಕರನ್ನಾಗಿ ನೀಲಪ್ಪ ದೇಸಾಯಿ, ಪ್ರಭಾಕರ್‌ ನಾಗರಾಳ, ಬಸವರಾಜ ನಾಗಶೆಟ್ಟಿ, ಜಟ್ಟೆಪ್ಪ ಮಾದಾಪೂರ್‌, ಅನ್ನಪೂರ್ಣ ಜುಮ್ನಾಳ್‌, ಫಕೀರ್‌ ಸಾಬ್‌ ನದಾಫ್‌, ಬಾಬು ಭಜಂತ್ರಿ ಕೃಷ್ಣ ಗೌಡರವರನ್ನು ನೇಮಿಸಲಾಗಿದೆ.

ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಇದ್ದೇ ಇದೆ: ಜಗದೀಶ್‌ ಶೆಟ್ಟರ್‌

ಮುಧೋಳ ಕಾಂಗ್ರೆಸ್‌ ಪ್ರಚಾರ ಸಮಿತಿಗೆ ಸಂಯೋಜಕರನ್ನಾಗಿ ಮಂಜುನಾಥ ಅರಳಿಕಟ್ಟಿ, ಜಂಟಿ ಸಂಯೋಜಕರನ್ನಾಗಿ ಗುರುಬಸಯ್ಯ ಮಠದ, ರಮೇಶ್‌ ಪಾಟೀಲ್‌, ಹನಮಂತ ಶಿರೂರ, ನಾಜಿನಿನ್‌ ಜಮಾದಾರ್‌, ವಿಠ್ಠಲ್‌ ಮಾದರ, ಅಶೋಕ್‌ ಬಿಲ್ಲಣ್ಣವರ, ಮೋಹಿನ ಅಂಬಿ ಅವರನ್ನು ನೇಮಿಸಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!