ಐಕ್ಯತಾ ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ಆಗಮನ ಸಾಧ್ಯತೆ : ಪಿ.ಟಿ.ಪರಮೇಶ್ವರ ನಾಯ್ಕ್

By Kannadaprabha NewsFirst Published Dec 30, 2022, 9:35 AM IST
Highlights

ಜನವರಿ 8 ರಂದು ಚಿತ್ರದುರ್ಗದಲ್ಲಿ ನಡೆಲಿರುವ ಎಸ್ಸಿ, ಎಸ್ಟಿಗಳ ರಾಜ್ಯಮಟ್ಟದ ಐಕ್ಯತಾ ಸಮಾವೇಶಕ್ಕೆ ಸೋನಿಯಾ ಇಲ್ಲವೇ ಪ್ರಿಯಾಂಕ ಗಾಂಧಿ ಆಗಮಿಸುವ ಸಾಧ್ಯತೆಗಳು ಇವೆ ಎಂದು ಸಮಾವೇಶದ ಪ್ರಚಾರ ಸಮಿತಿ ಅಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು.

ಚಿತ್ರದುರ್ಗ (ಡಿ.30) : ಜನವರಿ 8 ರಂದು ಚಿತ್ರದುರ್ಗದಲ್ಲಿ ನಡೆಲಿರುವ ಎಸ್ಸಿ, ಎಸ್ಟಿಗಳ ರಾಜ್ಯಮಟ್ಟದ ಐಕ್ಯತಾ ಸಮಾವೇಶಕ್ಕೆ ಸೋನಿಯಾ ಇಲ್ಲವೇ ಪ್ರಿಯಾಂಕ ಗಾಂಧಿ ಆಗಮಿಸುವ ಸಾಧ್ಯತೆಗಳು ಇವೆ ಎಂದು ಸಮಾವೇಶದ ಪ್ರಚಾರ ಸಮಿತಿ ಅಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ (AICC President )ಮಲ್ಲಿಕಾರ್ಜುನ ಖರ್ಗೆ(Mallikarjun kharge) ಸಮಾವೇಶ ಉದ್ಘಾಟಿಸಲಿದ್ದು, ರಾಹುಲ್‌ಗಾಂಧಿ(Rahul gandhi), ಪ್ರಿಯಾಂಕಾ ಗಾಂಧಿ(Priyanka gandhi), ಸೋನಿಯಾ ಗಾಂಧಿ(Soniya gandhi) ಈ ಮೂವರನ್ನು ಆಹ್ವಾನಿಸಲಾಗಿದ್ದು ಯಾರಾದರೂ ಒಬ್ಬರು ಬರಬಹುದು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದ ಕಾಂಗ್ರೆಸ್‌(Congress) ಕಾರ್ಯಕರ್ತರು ಹಾಗೂ ಪರಿಶಿಷ್ಟಜಾತಿ ಪರಿಶಿಷ್ಟಪಂಗಡದವರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು.

ಜ.8ಕ್ಕೆ ಚಿತ್ರದುರ್ಗದಲ್ಲಿ ಕಾಂಗ್ರೆಸ್‌ ದಲಿತ ರ್‍ಯಾಲಿ

ಡಾ.ಜಿ.ಪರಮೇಶ್ವರ್‌(Dr G Parameshwar), ಎಚ್‌.ಸಿ.ಮಹದೇವಪ್ಪ(HC Mahadevappa), ಉಗ್ರಪ್ಪ, ಸತೀಶ್‌ ಜಾರಕಿಹೊಳಿ(Satish jarkiholi) ಇನ್ನು ಅನೇಕರು ಈಗಾಗಲೆ ಚಿತ್ರದುರ್ಗದಲ್ಲಿ ಸಮಾವೇಶ ನಡೆಯುವ ಸ್ಥಳ ವೀಕ್ಷಣೆ ಮಾಡಿ ಹೋಗಿದ್ದಾರೆ. ಸುಮಾರು ಐದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಎಸ್ಸಿ, ಎಸ್ಟಿ.ಗಳ ಸಮಸ್ಯೆ, ನೂನ್ಯತೆಗಳನ್ನು ಸರಿಪಡಿಸಿ ನ್ಯಾಯಯುತವಾದ ಸವಲತ್ತು ಒದಗಿಸಲು ಹತ್ತು ಅಂಶಗಳ ಕಾಯ ರ್‍ಕ್ರಮಗಳನ್ನು ಸಮಾವೇಶದಲ್ಲಿ ಘೋಷಿಸಲಾಗುವುದು ಎಂದರು.

ಬೆಂಗಳೂರಿನಲ್ಲಿ ಸಮಾವೇಶ ನಡೆಸುವುದು ಕಷ್ಟವಾಗುತ್ತದೆ ಎನ್ನುವುದನ್ನು ಅರಿತು ಮಧ್ಯಕರ್ನಾಟಕದ ಚಿತ್ರದುರ್ಗದಲ್ಲಿ ನಡೆಸಲು ನಾಯಕರು ತೀರ್ಮಾನಿಸಿದ್ದಾರೆ. ಉತ್ತರ ಕರ್ನಾಟಕ, ಮಧ್ಯಕರ್ನಾಟಕ, ಕರಾವಳಿ ಭಾಗಗಳಿಂದ ಕಾರ್ಯಕರ್ತರು ಬರಲು ಸುಲಭವಾಗುತ್ತದೆ. ಪರಿಶಿಷ್ಟಜಾತಿಯಲ್ಲಿನ 101 ಹಾಗೂ ಪರಿಶಿಷ್ಟವರ್ಗದಲ್ಲಿನ 52 ಜಾತಿಗಳನ್ನು ಒಡೆದಾಳಬಾರದು ಎನ್ನುವ ಉದ್ದೇಶವಿಟ್ಟುಕೊಂಡು ಒಂದೆಡೆ ಸೇರಿಸುವುದು ಐಕ್ಯತಾ ಸಮಾವೇಶದ ಉದ್ದೇಶ. ನಾವುಗಳು ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸುತ್ತಿಲ್ಲ. ಪರಿಶಿಷ್ಟಜಾತಿಯಲ್ಲಿನ ಎಲ್ಲಾ ಒಳಜಾತಿಗಳಿಗೂ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಸಿಗಬೇಕು ಎನ್ನುವುದು ನಮ್ಮ ವಾದ ಎಂದರು.

ಜನವರಿಗೆ ಕಾಂಗ್ರೆಸ್‌ನಿಂದ ದಲಿತ ಸಮಾವೇಶ: ಪರಂಗೆ ಸಂಪೂರ್ಣ ಜವಾಬ್ದಾರಿ

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ಕುಮಾರ್‌, ಡಿ.ಎನ್‌.ಮೈಲಾರಪ್ಪ, ಪರಿಶಿಷ್ಟಜಾತಿ ವಿಭಾಗದ ಅಧ್ಯಕ್ಷ ಜಯಣ್ಣ, ಪರಿಶಿಷ್ಟಪಂಗಡ ವಿಭಾಗದ ಅಧ್ಯಕ್ಷ ಎಚ್‌.ಅಂಜಿನಪ್ಪ, ನಾಗೇಂದ್ರನಾಯ್ಕ, ಲೋಕೇಶ್‌ನಾಯ್ಕ, ಪ್ರಕಾಶ್‌ನಾಯ್ಕ, ಚಿತ್ರದುರ್ಗ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಪ್ರಕಾಶ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

click me!