ದಿಲ್ಲಿ ಬಂಗಲೆ ಖಾಲಿ ಮಾಡಿ ಲಖನೌಗೆ ಪ್ರಿಯಾಂಕಾ ಗಾಂಧಿ!

Published : Jul 10, 2020, 11:24 AM ISTUpdated : Jul 10, 2020, 11:26 AM IST
ದಿಲ್ಲಿ ಬಂಗಲೆ ಖಾಲಿ  ಮಾಡಿ ಲಖನೌಗೆ ಪ್ರಿಯಾಂಕಾ ಗಾಂಧಿ!

ಸಾರಾಂಶ

ದಿಲ್ಲಿ ಬಂಗಲೆ ಖಾಲಿ ಮಾಡಿ ಲಖನೌಗೆ| ಪ್ರಿಯಾಂಕಾ ಸಿದ್ಧತೆ| ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ದೆಹಲಿಯ ಲ್ಯೂಟೆನ್ಸ್‌ ಪ್ರದೇಶದಲ್ಲಿರುವ ಸರ್ಕಾರಿ ಬಂಗಲೆಯನ್ನು ಈ ತಿಂಗಳ ಅಂತ್ಯಕ್ಕೆ ತೆರವು

ನವದೆಹಲಿ(ಜು.10): ಬಂಗಲೆ ತೆರವುಗೊಳಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಾಸಾಂತ್ಯದೊಳಗೆ ಲ್ಯೂಟನ್ಸ್‌ ದೆಹಲಿಯ ಮನೆ ಖಾಲಿ ಮಾಡಲು ಮುಂದಾಗಿದ್ದಾರೆ.

'Z ಇಲ್ಲ SPGನೂ ಇಲ್ಲ, ಬಂಗಲೆ ಖಾಲಿ ಮಾಡಿ' ಪ್ರಿಯಾಂಕಾಗೆ ಕೇಂದ್ರದ ಲೆಟರ್

ಕೊರೋನಾ ಪರಿಸ್ಥಿತಿ ಸುಧಾರಣೆಯಾದ ಬಳಿಕ ಅವರು ಲಖನೌಗೆ ತಮ್ಮ ನೆಲೆ ಸ್ಥಳಾಂತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಪ್ರಧಾನಿ ಜವಾಹರ ಲಾಲ್‌ ನೆಹರು ಅವರ ಅತ್ತಿಗೆ ಶೀಲಾ ಕೌಲ್‌ ನೆಲೆಸಿದ್ದ ಲಖನೌ ಮನೆಗೆ ಪ್ರಿಯಾಂಕಾ ವಾಸ್ತವ್ಯ ಬದಲಿಸಲಿದ್ದಾರೆ ಎನ್ನಲಾಗುತ್ತಿದೆ.

2015ರಲ್ಲಿ ಕೌಲ್‌ ಮೃತಪಟ್ಟಿದ್ದು, ಆ ಮನೆ ಸದ್ಯ ಖಾಲಿ ಇದೆ. ಈ ನಡುವೆ ಹಳೆಯ ವಸ್ತುಗಳನ್ನು ತಮ್ಮ ತಾಯಿ ಸೋನಿಯಾ ಅವರ 10 ಜನಪಥ್‌ ನಿವಾಸದಲ್ಲಿಡಲು ಪ್ರಿಯಾಂಕಾ ಉದ್ದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಧರ್ಮಸ್ಥಳ ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌: ಬಿಜೆಪಿ ನಾಯಕರ ತೀವ್ರ ಆರೋಪ
ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ