Karnataka election 2023: ಮೇ 3ಕ್ಕೆ ಬೀದರ್‌ಗೆ ಪ್ರಿಯಾಂಕಾ ಗಾಂಧಿ : ಈಶ್ವರ ಖಂಡ್ರೆ

By Kannadaprabha News  |  First Published Apr 27, 2023, 8:38 AM IST

ಎಐಸಿಸಿ ಪ್ರಧಾನ ಕಾರ್ಯದರ್ಶಿ, ಯುವ ನಾಯಕಿ ಪ್ರಿಯಾಂಕಾ ಗಾಂಧಿ ಮೇ 3ರಂದು ಬೀದರ್‌ಗೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.


ಬೀದರ್‌ (ಏ.27) : ಎಐಸಿಸಿ ಪ್ರಧಾನ ಕಾರ್ಯದರ್ಶಿ, ಯುವ ನಾಯಕಿ ಪ್ರಿಯಾಂಕಾ ಗಾಂಧಿ ಮೇ 3ರಂದು ಬೀದರ್‌ಗೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಬುಧ​ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ​ರು, ಪ್ರಿಯಾಂಕಾ ಗಾಂಧಿ ಅವರ ಕಾರ್ಯಕ್ರಮ ಬೀದರ್‌ ನಗರದಲ್ಲಿ ಮಾಡಬೇಕು ಅಥವಾ ಬೀದರ್‌ ದಕ್ಷಿಣ ಕ್ಷೇತ್ರ(Bidar south constituency)ದಲ್ಲಿ ಮಾಡಬೇಕು ಎಂಬುದನ್ನು ಇನ್ನು ನಿರ್ಧರಿಸಿಲ್ಲ. ಇದರ ಬಗ್ಗೆ ಕೆಪಿಸಿಸಿ (KPCC)ನಿರ್ಣಯ ಕೈಗೊಳ್ಳುತ್ತದೆ. ಆದರೂ ಕೂಡ ಇವರ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಜನರನ್ನು ಸೇರಿಸಲಾಗುವುದು ಎಂದು ಖಂಡ್ರೆ ಹೇಳಿದರು.

Tap to resize

Latest Videos

undefined

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತ್ಯ: ಒಟ್ಟು 3632 ಮಂದಿ ಕಣಕ್ಕೆ

ಪ್ರಿಯಾಂಕಾ ಗಾಂಧಿ(Priyanka gandhi) ಅವರೊಂದಿಗೆ ಕೆ.ಸಿ ವೇಣುಗೋಪಾಲ್‌(KC Venugopal), ಸುರ್ಜೆವಾಲಾ, ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah), ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ(KPCC President DK Shivakumar) ಸೇರಿದಂತೆ ಇನ್ನಿತರರು ಬರಲಿದ್ದಾರೆ. ಇದಲ್ಲದೇ ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ (Mallikarjun kharge)ಅವರನ್ನು ಕೂಡ ಆಹ್ವಾನಿಸಿದ್ದೇವೆ. ಅವರ ವೇಳಾಪಟ್ಟಿಇನ್ನು ಬಂದಿಲ್ಲ. ಭಾರತೀಯ ಜನತಾ ಪಕ್ಷವು ಸೋಲಿನ ಭಯದಿಂದ ಕಂಗೆಟ್ಟು ಭಾಲ್ಕಿ ಮತ್ತು ಹುಮನಾಬಾದ ಕ್ಷೇತ್ರದಲ್ಲಿ ಗುಂಡಾವರ್ತನೆಗೆ ಇಳಿದಿದೆ. ಅಧಿಕಾರದ ಮದದಲ್ಲಿ ನಮ್ಮ ಪರವಾಗಿ ಇರುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಹೆದರಿಸುತಿದ್ದಾರೆ ಎಂದು ಖಂಡ್ರೆ ಆರೋಪಿಸಿದರು.

ಜಿಲ್ಲೆಯಲ್ಲಿ 527 ಜನ ಗೂಂಡಾ ಪಟ್ಟಿಯಲ್ಲಿರುವವರ ಬಿಡುಗಡೆ:

ಗೂಂಡಾ ಪಟ್ಟಿಯಲ್ಲಿರುವ ಅನೇಕ ಜನರನ್ನು ಪಟ್ಟಿಯಿಂದ ತೆಗೆದು ಹಾಕಿ ಅವರನ್ನು ಬಿಡುಗಡೆ ಮಾಡಲಾಗಿದೆ. ಇಂತಹವರಲ್ಲಿ ಸುಮಾರು 527 ಜನ ಸೇರಿದ್ದಾರೆ. ಹೀಗಾಗಿ ಚುನಾವಣೆ ಸಮಯದಲ್ಲಿ ಗೂಂಡಾ ರಾಜ್ಯದಲ್ಲಿ ಪರಿವರ್ತನೆ ಮಾಡಲು ಹೊರಟಿದ್ದಾರೆ. ಅನೇಕ ಯುವಕರಿಗೆ ಸಾರಾಯಿ ಕುಡಿಸಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಬೆದರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ ಪ್ರೇಕ್ಷಕರಿಲ್ಲದ ನಾಟಕ ಕಂಪನಿಯಾಗಿದೆ ಎಂಬ ಹೇಳಿಕೆಗೆ ಉತ್ತರಿಸಿದ ಖಂಡ್ರೆ, ನಮ್ಮ ನೀರಿಕ್ಷೆಗೂ ಮೀರಿ ಜನ ಬರುತ್ತಿದ್ದಾರೆ. ಬಿಜೆಪಿಯವರು ಹಣ ಕೊಟ್ಟು ಜನರನ್ನು ಕರೆದುಕೊಂಡು ಬರುತಿದ್ದಾರೆ. ಈ ಮಾತು ಬಿಜೆಪಿಗೆ ಅನ್ವಯವಾಗುತ್ತದೆ ಎಂದರು.

ಯೋಗಿ ಬರಲಿ, ಜೋಗಿ ಬರಲಿ ಏನಾಗಲ್ಲ:

ಭಾಲ್ಕಿ ಪಟ್ಟಣಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬರಲಿದ್ದಾರೆ ಎಂಬ ಪ್ರಶ್ನೆಗೆ ಯೋಗಿ ಬರಲಿ, ಜೋಗಿ ಬರಲಿ ನಮಗೆ ಏನೂ ಆಗಲ್ಲ ಎಂದು ಉತ್ತರಿಸಿದರು. 2008, 2018ರಲ್ಲಿ ನಮ್ಮ ನಾಯಕ ರಾಹುಲ್‌ ಗಾಂಧಿ ಬಂದಿದ್ದರು. ಹೀಗಾಗಿ ಈ ಸಲ ಕೂಡ ಭಾಲ್ಕಿ ಮತ್ತು ಹುಮನಾಬಾದ್‌ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಹೀಗಾಗಿ ಈ ಸಲವು ನಮ್ಮದೇ ಗೆಲವು. ಬಿಜೆಪಿಯ ದುರಾಡಳಿತದಿಂದ ಜನ ಬೇಸತ್ತಿದ್ದು, ಹೀಗಾಗಿ ಬೀದರ್‌ ಜಿಲ್ಲೆಯ 6ಕ್ಕೆ 6 ಸ್ಥಾನಗಳು ಕಾಂಗ್ರೆಸ್‌ನ ಪಾಲಾಗಲಿವೆ ಎಂದರು.

 

ಅಚ್ಛೆ ದಿನ್‌ಗಳು ಹೋಗಿ ಕೆಟ್ಟ ದಿನಗಳು ಬಂದಿವೆ: ಈಶ್ವರ ಖಂಡ್ರೆ

ಭಗವಂತ ಖೂಬಾ ಶೂನ್ಯ ಸಾಧನೆ:

ಭಗವಂತ ಖೂಬಾ ಕೇಂದ್ರ ಸಚಿವರಾಗಿ ಶೂನ್ಯ ಸಾಧನೆ ಮಾಡಿದ್ದಾರೆ. ಅವರು ಮತದಾರರ ಬಳಿ ಯಾವ ಮುಖ ತೆಗೆದುಕೊಂಡು ಹೊಗುತ್ತಿದ್ದಾರೆ ಗೊತ್ತಿಲ್ಲ ಎಂದು ವ್ಯಂಗವಾಡಿದರು. ಬಿಜೆಪಿಯಲ್ಲಿ ಲಿಂಗಾಯತರಿಗೆ ಸಿಎಂ ಇಲ್ಲ. ಇದರ ಬಗ್ಗೆ ಬಿಜೆಪಿ ಹೈಕಮಾಂಡ್‌ ನಿರ್ಣಯ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ. ಇದರಿಂದ ಅವರೆ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಬಹುದು. ಕಾಂಗ್ರೆಸ್‌ನಲ್ಲಿ ಬಹುಮತ ಬಂದ ಮೇಲೆ ಮುಖ್ಯಮಂತ್ರಿ ಬಗ್ಗೆ ನಿರ್ಣಯ ಕೈಗೊಳ್ಳಲಿದೆ. ಹೀಗಾಗಿ ಸಧ್ಯ ಲಿಂಗಾಯತ ಆಗಲಿ ಯಾವುದೇ ಜಾತಿ ಬಗ್ಗೆ ಮಾತನಾಡೋದು ಸರಿಯಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರಾಜಶೇಖರ ಪಾಟೀಲ್‌, ಅರವಿಂದ ಅರಳಿ, ರಹೀಮ್‌ ಖಾನ್‌, ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪೂಜಾ ಜಾಜ್‌ರ್‍, ಪ್ರಚಾರ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಬಸವರಾಜ ಬುಳ್ಳಾ, ಎಂಎ ಸಮೀ ಇದ್ದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

 

click me!