ಸ್ವಾವಲಂಬಿ ಭಾರತಕ್ಕೆ ಪ್ರಧಾನಿ ಮೋದಿ ಕೊಡುಗೆ ಅಪಾರ: ಸಚಿವ ಹಾಲಪ್ಪ ಆಚಾರ್

By Kannadaprabha NewsFirst Published Apr 14, 2023, 1:42 PM IST
Highlights

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾವಲಂಬಿ ಹಾಗು ಸ್ವಾಭಿಮಾನ ಭಾರತ ಮಾಡುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಸಚಿವ ಹಾಲಪ್ಪ ಆಚಾರ ಹೇಳಿದರು.

ಕುಕನೂರು (ಏ.14) : ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾವಲಂಬಿ ಹಾಗು ಸ್ವಾಭಿಮಾನ ಭಾರತ ಮಾಡುವಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಸಚಿವ ಹಾಲಪ್ಪ ಆಚಾರ(Halappa Achar) ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ತಳಬಾಳ ಹಾಗು ಸಂಗನಾಳ ಗ್ರಾಮದ ನಾನಾ ಪಕ್ಷದ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಮಕ್ಕಳಿಗೆ ಹಾಕುವ ದಡಾರ, ಪೊಲೀಯೋ ಲಸಿಕೆಗಳನ್ನು 2014ರ ಮೊದಲು ಭಾರತ ವಿದೇಶಗಳಿಗೆ ಕೈಯೊಡ್ಡಿ ಕೇಳುವ ಪರಿಸ್ಥಿತಿ ಇತ್ತು.ಅಲ್ಲದೆ ಸೈನಿಕರಿಗೆ ಯುದ್ಧ ವಿಮಾನ,ಯುದ್ಧ ಪರಿಕರ ಹಾಗು ಜಾಕೆಟ್‌ಗಳನ್ನು ಸಹ ಪಡೆಯಲು ಸಹ ವಿದೇಶಗಳ ಮೊರೆ ಹೋಗಬೇಕಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರ ಬಂದು ನರೇಂದ್ರ ಮೋದಿ(PM Narendra Modi) ಪ್ರಧಾನ ಮಂತ್ರಿಗಳಾದ ಮೇಲೆ ಆತ್ಮ ನಿರ್ಭರ ಭಾರತ ಯೋಜನೆಯಲ್ಲಿ ಭಾರತದಲ್ಲಿಯೇ ಎಲ್ಲ ಲಸಿಕೆ ತಯಾರಿಸಲಾಗುತ್ತಿದೆ. ಈ ಹಿಂದೆ ಸೈನಿಕರಿಗೆ ಕಾಂಗ್ರೆಸ್‌ ಸರ್ಕಾರ ಒಂದು ಜಾಕೆಟ್‌ ಸಹ ನೀಡುತ್ತಿರಲಿಲ್ಲ. ಪ್ರಧಾನಿ ಮೋದಿ ಜಾಕೆಟ್‌ ನೀಡಿದ್ದಾರೆ. ವಿಶೇಷ ಹಬ್ಬಗಳನ್ನು ಸೈನಿಕರೊಂದಿಗೆ ಆಚರಿಸಿ ಅವರಿಗೆ ಭದ್ರತಾ ವಿಚಾರದಲ್ಲಿ ಹಲವಾರು ತಾಂತ್ರಿಕ ಹಾಗು ಭದ್ರತಾ ಸವಲತ್ತು ನೀಡಿ ಶಕ್ತಿ ತುಂಬಿದ್ದಾರೆ ಎಂದರು.

ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು: ಪಟ್ಟು ಬಿಡದ ಸಂಗಣ್ಣ ಕರಡಿ, ಸಿವಿ ಚಂದ್ರಶೇಖರ!

ಅಲ್ಲದೆ ಕೊರೋನಾ(Corona) ವೇಳೆಯಲ್ಲಿ ಭಾರತದಲ್ಲಿ ಹೆಣಗಳ ರಾಶಿ ಬೀಳುತ್ತದೆ ಎಂದು ವಿದೇಶಗಳು ವ್ಯಂಗ್ಯವಾಡುತ್ತಿದ್ದವು.ಆದರೆ ಮೋದಿ ಅವರು ಭಾರತದಲ್ಲಿ ಕೊರೋನಾ ಲಸಿಕೆ ತಯಾರಿಸಿ ಭಾರತೀಯರಿಗೆ ಮೂರು ಡೋಸ್‌ ಉಚಿತವಾಗಿ ನೀಡಿದರು. ವಿದೇಶದಲ್ಲಿ ಲಸಿಕೆ ಜನರು ಹಣ ನೀಡಿ ಹಾಕಿಸಿಕೊಳ್ಳುವ ಪ್ರಮೇಯ ಇತ್ತು.ಆದರೆ ಭಾರತೀಯರಿಗೆ ಪ್ರಧಾನಿ ಮೋದಿ ಉಚಿತವಾಗಿ ನೀಡಿದರು. ಭಾರತ ಮಾತ್ರವಲ್ಲದೆ ವಿದೇಶಗಳಿಗೂ ಕೊರೋನಾ ಲಸಿಕೆ ನೀಡಿ ವಿದೇಶಿಗರ ಪ್ರಾಣ ಉಳಿಸಿದರು.ಉಕ್ರೇನ್‌-ರಷ್ಯಾ ಯುದ್ಧ ಸಂದರ್ಭದಲ್ಲಿ ವಿದೇಶದಲ್ಲಿ ಇದ್ದ ಭಾರತೀಯ ವಿದ್ಯಾರ್ಥಿಗಳನ್ನು ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ಅವರು 6 ತಾಸು ಉಕ್ರೇನ್‌-ರಷ್ಯಾ ಯುದ್ಧ ನಿಲ್ಲಿಸಿದರು.ಅಂತಹ ಶಕ್ತಿ ಹಾಗು ಚೈತನ್ಯದಾಯಕ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ ಎಂದರು.

ರಾಷ್ಟ್ರ ಹಾಗು ರಾಜ್ಯದಲ್ಲಿ ಬಿಜೆಪಿ ಸರ್ಕಾರ(BJP Governmeent)ದಿಂದ ಹಲವಾರು ಅಭಿವೃದ್ಧಿ ಕಾರ್ಯ ಆಗಿವೆ.ಬಿಜೆಪಿ ಸರ್ಕಾರದ ಜನಮಾನಸ ಕಾರ್ಯ ಮೆಚ್ಚಿ ಹಲವಾರು ಕಾರ್ಯಕರ್ತರು ಅನ್ಯ ಪಕ್ಷ ತೊರೆದು ಬಿಜೆಪಿಗೆ ಬರುತ್ತಿದ್ದಾರೆ. ಯಲಬುರ್ಗಾ ಕ್ಷೇತ್ರದ ಜನರು ವಿಚಾರವಂತರು.ಅಳೆದು ತೂಗಿ ಮತ ನೀಡುತ್ತಾರೆ. ಮತ್ತೊಮ್ಮೆ ಅವರ ಆಶೀರ್ವಾದ ಬಿಜೆಪಿಗೆ ಹಾಗು ನನಗೆ ಶಕ್ತಿ ತುಂಬಲಿದೆ. ಕ್ಷೇತ್ರದ ಜನತೆಯ ಸೇವೆಗೆ ನಾನು ಸದಾ ಅಣಿಯಾಗಿರುತ್ತೇನೆ ಎಂದರು.

ಮತ್ತೆ 71 ಸಾವಿರ ಮಂದಿಗೆ ಉದ್ಯೋಗ: ನೇಮಕ ಪತ್ರ ವಿತರಣೆಗೆ ಮೋದಿ ಚಾಲನೆ

ಹಲವಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಲಂಬಾಣಿ ಸಮಾಜದ ಮುಖಂಡ ಯಲ್ಲಪ್ಪ ಲಮಾಣಿ ಸಹ ಬಿಜೆಪಿ ಸೇರ್ಪಡೆಯಾದರು.ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಶಿವಕುಮಾರ ನಾಗಲಾಪೂರಮಠ, ಬಸವನಗೌಡ ತೊಂಡಿಹಾಳ ಇತರರಿದ್ದರು.

click me!