ಕೋವಿಡ್ ನೆಪ ಮಾಡಿಕೊಂಡು ಅವಧಿ ಪೂರ್ವದಲ್ಲಿಯೇ ಚುನಾವಣೆ ನಡೆಸುವ ಹುನ್ನಾರವನ್ನು ಸರ್ಕಾರ ಮಾಡಿದೆ. ಯಾವಾಗ ಚುನಾವನೆ ನಡೆಸಿದರೂ ಕಾಂಗ್ರೆಸ್ ಸಿದ್ಧವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿ (ಡಿ.22): ಕೋವಿಡ್ ನೆಪ ಮಾಡಿಕೊಂಡು ಅವಧಿ ಪೂರ್ವದಲ್ಲಿಯೇ ಚುನಾವಣೆ ನಡೆಸುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡಿದೆ. ಯಾವಾಗ ಬೇಕಾದರೂ ರಾಜ್ಯ ವಿಧಾನಸಭೆ ಚುನಾವಣೆ ಮಾಡಲಿ. ಕಾಂಗ್ರೆಸ್ ಚುನಾವಣೆಗೆ ಸಿದ್ಧವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಕೋವಿಡ್ ನೆಪದಲ್ಲಿ ಅವಧಿಪೂರ್ವ ಚುನಾವಣೆ (Election Prepone) ಮಾಡೋಕೆ ನೋಡ್ತಿದಾರೆ ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಿನ್ನೆ ಡಿಜಿ ಜೊತೆ ಎಲ್ಲ ಮಾತಾಡಿ ಚುನಾಚಣೆಗೆ ಸಿದ್ಧತೆ ಮಾಡೋಕೆ ಹೇಳಿದಾರೆ. ಇವತ್ತು ಕ್ಯಾಬಿನೆಟ್ ನಲ್ಲಿ ಮಾತಾಡ್ತಾರೆ ಅನ್ನೋ ಮಾಹಿತಿ ನನಗಿದೆ. ಇದು ಅಫೀಷಿಯಲ್ ಮಾಹಿತಿ ಅಲ್ಲ. ಅನ್ ಅಫೀಷಿಯಲ್ ಮಾಹಿತಿಯಾಗಿದೆ ಎಂದರು.
Karnataka Assembly Election 2023: ಕಾಂಗ್ರೆಸ್ ಅಭ್ಯರ್ಥಿ ಘೋಷಣೆ: ಸಿದ್ದು ಟೀಂಗೆ ಡಿಕೆಶಿ ಖಡಕ್ ವಾರ್ನಿಂಗ್
ದೆಹಲಿಯ ಪ್ರಧಾನಿ ಕಛೇರಿಯಿಂದಲೇ ರಾಜ್ಯ ಬಿಜೆಪಿಗೆ ಫೋನ್ ಬಂದಿದೆ. ಅವರು ಚುನಾಚಣೆ ಯಾವಾಗಲೇ ಮಾಡಲಿ ನಾವು ಸಿದ್ದರಿದ್ದೇವೆ. ಆದರೆ ರಾಜ್ಯದಲ್ಲಿ ಭ್ರಷ್ಟಾಚಾರ ಜಾಸ್ತಿ ಆಗುತ್ತಿದೆ. ಕೋವಿಡ್ ನೆಪ ಇಟ್ಕೊಂಡು ರಾಹುಲ್ ಗಾಂಧಿ ಯಾತ್ರೆಗೆ ಜನ ಹೋಗಬಾರದು ಅಂತ ಪಿತೂರಿ ಮಾಡ್ತಿದಾರೆ. ಮೇಕೆದಾಟು ವಿಚಾರದಲ್ಲಿ ನನ್ನನ್ನು ತಡೆದಿದ್ದರು. ನನ್ನ ಮೇಲೆ ಹಾಗೂ ಸಿದ್ದರಾಮಯ್ಯ ಮೇಲೆ 4 - 5 ಕೇಸ್ ಹಾಕಿದ್ದಾರೆ ಎಂದು ಕಿಡಿಕಾರಿದರು.
ಡಿಸಿಸಿ ಬ್ಯಾಂಕ್ ಎಲ್ಲ ಹಣ ಸಕ್ಕರೆ ಕಾರ್ಖಾನೆಗೆ : ಇನ್ನು ರಾಜ್ಯದಲ್ಲಿ ಸಂಸತ್ ಸದಸ್ಯರೇ ಕೋಟಿ ಗಟ್ಟಲೆ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಿದಾರೆ. ಪ್ರತಾಪ್ ಸಿಂಹ, ಶ್ರೀನಿವಾಸ ಪ್ರಸಾದ್ ಕೋಟಿ ಗಟ್ಟಲೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿರುವುದು ಬಹಿರಂಗವಾಗಿದೆ. ಸಹಕಾರಿ ಸಚಿವರು ಡಮ್ಮಿ ಆಗಿದ್ದಾರೆ. ಅವರು ಒಂದು ಸೊಸೈಟಿಗೆ ದುಡ್ಡು ಕೊಟ್ಟಿಲ್ಲ, ಎಪಿಎಂಸಿಗೂ ದುಡ್ಡು ಕೊಟ್ಟಿಲ್ಲ. ಡಿಸಿಸಿ ಬ್ಯಾಂಕ್ ಎಲ್ಲ ಹಣವನ್ನೂ ಸಕ್ಕರೆ ಕಾರ್ಖಾನೆಗೆ ಕೊಟ್ಟಿದ್ದಾರೆ. ಅಂಡರಸ್ಟ್ಯಾಂಡಿಗ್ ಮೇಲೆ ಸಕ್ಕರೇ ಕಾರ್ಖಾನೆಗೆ ಸಾಲ ಕೊಟ್ಟಿದ್ದಾರೆ. ಇದಕ್ಕೆಲ್ಲ ಮಿನಿಸ್ಟರ್, ಶಾಸಕರ ಕುಮ್ಮಕ್ಕು ಇದೆ. ಸುಮ್ನೆ ನಮ್ಮಂಥವರ ಮೇಲೆ ತನಿಖೆ ಮಾಡ್ತಿದಾರೆ. ತನಿಖೆ ಹೆಸರಲ್ಲಿ ಕಿರಿ ಕಿರಿ ಮಾಡ್ತಿದಾರೆ. ಮಾಡಲಿ ಏನ್ ಬೇಕಾದ್ರೂ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೀಘ್ರ ಕೋವಿಡ್ ಮಾರ್ಗಸೂಚಿ ಬಿಡುಗಡೆ: ಸಚಿವ ಸುಧಾಕರ್
ಸೌಹಾರ್ದ ಬ್ಯಾಂಕ್ ರಕ್ಷಣೆಗೆ ಸಿಎಂ ಬೊಮ್ಮಾಯಿ ಬೆಂಬಲ: ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಎಲ್ಲರೂ ಸೌಹಾರ್ದ ಬ್ಯಾಂಕ್ ರಕ್ಷಣೆಗೆ ನಿಂತಿದ್ದಾರೆ. ಕಾನೂನು ಮೀರಿ ದುಡ್ಡು ಕೊಡ್ತಿದಾರೆ. ಇದುವರೆಗೂ ಯಾರೊಬ್ಬರ ಮೇಲೂ ಕ್ರಿಮಿನಲ್ ಕೇಸ್ ಹಾಕಿಲ್ಲ. ನಾನು ಹೇಳೋದು ತಪ್ಪಿದ್ರೆ ನನ್ನ ಮೇಲೆ ಮಾನಹಾನಿ ಮೂಕದ್ದಮೆ ಹಾಕಲಿ. ಎಲ್ಲ ಪರ್ಸೆಂಟೇಜ್ ವ್ಯವಹಾರ ಮಾಡಲಾಗುತ್ತಿದೆ. ಬಿಜೆಪಿ ಭ್ರಷ್ಟಾಚಾರದ ಗಂಗೋತ್ರಿ ಪಾರ್ಟಿಯಾಗಿದೆ. ಇಲೆಕ್ಷನ್ ಗಾಗಿ ಎಲ್ಲ ಅರ್ಜೆಂಟ್ ನಲ್ಲಿದಾರೆ. ಮೀಸಲಾತಿ ಹೆಚ್ಚಳ ವಿಚಾರ ಬರೀ ಪೇಪರ್‌ಗೆ ಸೀಮಿತವಾಗಿದೆ ಎಂದು ತಿಳಿಸಿದರು.