ನಾಳೆ ಬೆಣ್ಣೆನಗರಿಗೆ ಮೋದಿ ಆಗಮನ: ಮಹಾಸಂಗಮಕ್ಕೆ ಬಿಜೆಪಿ ಭಾರೀ ಸಿದ್ಧತೆ!

By Kannadaprabha News  |  First Published Mar 24, 2023, 8:08 AM IST

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಶ್ವಮೇಧ ಯಾಗಕ್ಕೆ ಹೊರಟಂತೆ ರಾಜ್ಯ ನಾಲ್ಕೂ ಕಡೆಯಿಂದ ಬಿಜೆಪಿ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆಯ ಮಹಾ ಸಂಗಮ ಸಮಾವೇಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕಣ್ತುಂಬಿಕೊಳ್ಳಲು ಮಧ್ಯ ಕರ್ನಾಟಕದ ಜನತೆ ತುದಿಗಾಲ ಮೇಲೆ ನಿಂತಿದ್ದಾರೆ.


ದಾವಣಗೆರೆ (ಮಾ.24) : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಶ್ವಮೇಧ ಯಾಗಕ್ಕೆ ಹೊರಟಂತೆ ರಾಜ್ಯ ನಾಲ್ಕೂ ಕಡೆಯಿಂದ ಬಿಜೆಪಿ ಹಮ್ಮಿಕೊಂಡ ವಿಜಯ ಸಂಕಲ್ಪ ಯಾತ್ರೆಯ ಮಹಾ ಸಂಗಮ ಸಮಾವೇಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ(PM Narendra Modi) ಕಣ್ತುಂಬಿಕೊಳ್ಳಲು ಮಧ್ಯ ಕರ್ನಾಟಕದ ಜನತೆ ತುದಿಗಾಲ ಮೇಲೆ ನಿಂತಿದ್ದಾರೆ.

ಮಿಷನ್‌ 150 ಗುರಿಯೊಂದಿಗೆ ರಾಜ್ಯದ 4 ದಿಕ್ಕುಗಳಿಂದ ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿತ್ತು. ಮಾ.1ರಂದು ಮಲೆ ಮಾದೇಶ್ವರ ಬೆಟ್ಟ, ಮಾ.2ರಂದು ಸಂಗೊಳ್ಳಿ ರಾಯಣ್ಣನ ಸ್ಮಾರಕದ ನಂದಗಢದಿಂದ, ಮಾ.3ಕ್ಕೆ ಬಸವ ಕಲ್ಯಾಣದಿಂದ, ಅದೇ ದಿನ ಕೆಂಪೇಗೌಡರ ಜನ್ಮಸ್ಥಳ ಅವತಿ ದೇವನಹಳ್ಳಿಯಿಂದ ರಥಯಾತ್ರೆ ಆರಂಭವಾಗಿದ್ದು, ಸುಮಾರು 5,600 ಕಿಮೀ ಕ್ರಮಿಸಿ ರಥಯಾತ್ರೆಗಳು ದಾವಣಗೆರೆಯಲ್ಲಿ ಮಹಾ ಸಂಗಮವಾಗಲಿವೆ.

Tap to resize

Latest Videos

ಐತಿಹಾಸಿಕ ವಿಜಯ ಸಂಕಲ್ಪ ಸಮಾರೋಪ ಸಮಾವೇಶಕ್ಕೆ ಪ್ರಧಾನಿ ಮೋದಿ, ಭರ್ಜರಿ ಸಿದ್ಧತೆ

45 ವಿಭಾಗಗಳ ರಚನೆ:

ಸಮಾವೇಶದ ಮುನ್ನಾ ದಿನವಾದ ಮಾ.24ರಂದು ನಾಲ್ಕೂ ರಥಯಾತ್ರೆಗಳು ದಾವಣಗೆರೆ(Davanagere)ಯಲ್ಲಿ ಸೇರುವ ಸ್ಥಳದಿಂದ ಶೋಭಾಯಾತ್ರೆ ಹಾಗೂ ಚಿಕ್ಕ ರೋಡ್‌ ಶೋ(Road show) ಮಾಡುವ ಬಗ್ಗೆ ಪಕ್ಷದ ವರಿಷ್ಠರು ಚರ್ಚೆ ನಡೆಸಿದ್ದಾರೆ. ನಾಲ್ಕೂ ಯಾತ್ರೆಯುದ್ದಕ್ಕೂ 49 ಸಾರ್ವಜನಿಕ ಸಮಾವೇಶ, 132 ರೋಡ್‌ ಶೋ ಮುಗಿಸಿ, 224 ಕ್ಷೇತ್ರಗಳಲ್ಲಿ ಸುತ್ತಾಡಿ ದಾವಣಗೆರೆಯತ್ತ ಯಾತ್ರೆ ಆಗಮಿಸುತ್ತಿವೆ. ಇತ್ತ ಜಿಎಂಐಟಿ ಪಕ್ಕದ ಸುಮಾರು 400 ಎಕರೆ ಪ್ರದೇಶವು ಬಿಜೆಪಿ ಮಹಾ ಸಂಗಮ ಸಮಾವೇಶಕ್ಕೆ ಸರ್ವ ಸನ್ನದ್ಧವಾಗಿದ್ದು, ಐತಿಹಾಸಿಕ ಕಾರ್ಯಕ್ರಮಕ್ಕಾಗಿ ವಿಶಾಲವಾದ ಪೆಂಡಾಲ್‌ಗಳನ್ನು ಅಳವಡಿಸಲಾಗಿದೆ. ಸಮಾವೇಶಕ್ಕಾಗಿ ಕಳೆದೊಂದು ತಿಂಗಳಿನಿಂದಲೂ ಸಿದ್ಧತೆ ಕಾರ್ಯ ಸಾಗಿದ್ದು, ಊಟ, ನೀರು, ಸ್ವಚ್ಛತೆ, ರಕ್ಷಣೆ , ವಸತಿ ಹೀಗೆ 45 ವಿಭಾಗ ರಚಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yadiyurappa), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM basavaraj bommai), ಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌(Nalin kumar kateel) ಇತರರು ಪಾಲ್ಗೊಳ್ಳುವ ಮುಖ್ಯ ವೇದಿಕೆ-1ರಲ್ಲಿ 100 ಜನರಿಗೆ ಅವಕಾಶ ಕಲ್ಪಿಸಲಾಗಿದೆ. 2ನೇ ವೇದಿಕೆಯಲ್ಲಿ ವಿಧಾನ ಪರಿಷತ್‌ ಸದಸ್ಯರು, ಶಾಸಕರು, ಸಂಸದರು ಹಾಗೂ 3ನೇ ವೇದಿಕೆಯಲ್ಲಿ ಮಾಜಿ ವಿಪ ಸದಸ್ಯರು, ಮಾಜಿ ಶಾಸಕರು, ಮಾಜಿ ಸಂಸದರು, 39 ಜಿಲ್ಲಾಧ್ಯಕ್ಷರಿಗೆ ಆಸನದ ವ್ಯವಸ್ಥೆ ಇರುತ್ತದೆ. ಸಮಾರಂಭಕ್ಕೆ ಮಾ.25ರಂದು ಮಧ್ಯಾಹ್ನ 3ಕ್ಕೆ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸ್ಥಳೀಯ ಕಲಾವಿದರಿಂದ ಬೆಳಿಗ್ಗೆಯಿಂದ ಮಧ್ಯಾಹ್ನ 2ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶವಿದೆ. ಮಧ್ಯಾಹ್ನ 2ರಿಂದ ಮುಖ್ಯ ಸಮಾವೇಶಕ್ಕೆ ವೇದಿಕೆ ಸಿದ್ಧಪಡಿಸಲಾಗುತ್ತದೆ.

400 ಊಟದ ಕೌಂಟರ್‌, 1 ಸಾವಿರ ಬಾಣಸಿಗರು

ಮಹಾ ಸಂಗಮ ಸಮಾವೇಶಕ್ಕೆ ಬಂದ ಜನರಿಗಾಗಿ ಉಪಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 400 ಕೌಂಟರ್‌ ವ್ಯವಸ್ಥೆ ಮಾಡಿದೆ. ಎಲ್ಲರಿಗೂ ಊಟ, ತಿಂಡಿ ವ್ಯವಸ್ಥೆ ಮಾಡಿದ್ದು, 1 ಸಾವಿರ ಮಂದಿ ಬಾಣಸಿಗರು ಅಡುಗೆಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು-ಕೇಸರಿ ಬಾತ್‌, ಮಧ್ಯಾಹ್ನದ ಊಟಕ್ಕೆ ಗೋಧಿ ಪಾಯಸ, ಪಲಾವ್‌, ಮೊಸರನ್ನದ ವ್ಯವಸ್ಥೆ ಇರುತ್ತದೆ. ಬೇಸಿಗೆಯಾದ್ದರಿಂದ 8-10 ಲಕ್ಷ ಜನರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ವಾಹನಗಳ ನಿಲುಗಡೆಗೆ ಸುಮಾರು 44 ಸ್ಥಳಗಳ ಗುರುತಿಸಲಾಗಿದ್ದು, 500 ಎಕರೆ ಜಾಗದಲ್ಲಿ ಪಾರ್ಕಿಂಗ್‌ಗೆ ಅನುಕೂಲ ಮಾಡಿಕೊಡಲಾಗಿದೆ.

ಪೆಂಡಾಲ್‌ನಲ್ಲೇ ಮೋದಿ ರೋಡ್‌ ಶೋ

ಸದ್ಯಕ್ಕೆ ಮೋದಿ ಪಾಲ್ಗೊಳ್ಳುವ ಮುಖ್ಯ ವೇದಿಕೆ ಮುಂಭಾಗ, ಅಕ್ಕಪಕ್ಕದಲ್ಲಿ ವಿಶಾಲ ಪೆಂಡಾಲ್‌ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೂ್ನ ಪೆಂಡಾಲ್‌ ವಿಸ್ತರಣೆ ಕಾರ್ಯ ಸಾಗಿದ್ದು, ಎಷ್ಟುಸಾಧ್ಯವೋ ಅಷ್ಟುಪೆಂಡಾಲ್‌ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪೆಂಡಾಲ್‌ನಲ್ಲಿರುವ ಜನರಿಗೆ, ಪೆಂಡಾಲ್‌ ಹೊರಗಿದ್ದವರಿಗೆ ಸಮಾವೇಶ ವೀಕ್ಷಿಸಲು, ಮೋದಿ ಸೇರಿದಂತೆ ರಾಜ್ಯ ನಾಯಕ ಭಾಷಣ ಆಲಿಸಲು, ದೃಶ್ಯ ವೀಕ್ಷಿಸಲು ಅನುಕೂಲವಾಗುವಂತೆ 50 ಎಲ್‌ಇಡಿ ಹಾಗೂ ಸ್ಪೀಕರ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. 3 ಲಕ್ಷಕ್ಕೂ ಅಧಿಕ ಕುರ್ಚಿಗಳ ವ್ಯವಸ್ಥೆ ಮಾಡಿದ್ದು, ಪೆಂಡಾಲ್‌ ಒಳಗೆಯೇ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಮಾಡುವ ಆಲೋಚನೆ ಪಕ್ಷದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ಜನರ ಮಧ್ಯದಿಂದಲೇ ವೇದಿಕೆಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದಾಗಿ ಮೊನ್ನೆ ಅರುಣ್‌ ಸಿಂಗ್‌ ಹೇಳಿದ್ದರು. ಅದರಂತೆ ಪೆಂಡಾಲ್‌ ಒಳಗೆ ವಿಶೇಷ ವಾಹನದ ಮೂಲಕ ಪೆಂಡಾಲ್‌ ಒಳಗೆಯೇ ಮೋದಿ ರೋಡ್‌ ಶೋ ನಡೆಯಲಿದೆ.

ಸಿದ್ದರಾಮಯ್ಯಗೆ ಕ್ಷೇತ್ರ ಸಿಗದಂತ ಪರಿಸ್ಥಿತಿ ಬರಬಾರದಿತ್ತು: ನಳಿನ್‌ ಕುಮಾರ್‌ ಕಟೀಲ್‌

10 ಸಾವಿರ ಬಸ್‌, ಲಕ್ಷಾಂತರ ಲಘು ವಾಹನ

ಮೋದಿ ಸಮಾವೇಶದ ಹಿನ್ನೆಲೆಯಲ್ಲಿ ದಾವಣಗೆರೆ, ಹರಿಹರದ ಬಹುತೇಕ ಎಲ್ಲಾ ಲಾಡ್ಜ್‌ಗಳು ಬುಕ್‌ ಆಗಿವೆ. ಬಿಐಇಟಿ ಗೆಸ್ಟ್‌ ಹೌಸ್‌ ವಿವಿಐಪಿಗಳಿಗೆ ಕಾಯ್ದಿರಿಸಿದೆ. ಪ್ರತಿಷ್ಠಿತ ಹೋಟೆಲ್‌ಗಳು, ಪ್ರವಾಸಿ ಮಂದಿರ, ಸಕ್ರ್ಯೂಟ್‌ ಹೌಸ್‌ಗಳು ಸಚಿವರು, ನಾಯಕರ ಹೆಸರಿಗೆ ಬುಕ್‌ ಆಗಿವೆ. ಬಂದಂತಹ ಕಾರ್ಯಕರ್ತರಿಗೆ ಕಲ್ಯಾಣ ಮಂಟಪಗಳಲ್ಲಿ ವಸತಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 10 ಸಾವಿರಕ್ಕೂ ಅಧಿಕ ಬಸ್‌ಗಳು, ಇನ್ನೋವಾ, ಕ್ರೂಸರ್‌, ಟಿಟಿ, ಕ್ರೂಸರ್‌, ಮಿನಿ ಬಸ್‌, ಖಾಸಗಿ ಬಸ್‌ಗಳು, ಖಾಸಗಿ ವಾಹನಗಳ ಮೂಲಕ, ರೈಲುಗಳ ಮೂಲಕವೂ ಜನ ಸಾಗರವೇ ದಶ ದಿಕ್ಕುಗಳಿಂದ ದಾವಣಗೆರೆಯತ್ತ ಹರಿದು ಬರಲಿದೆ. 25-30 ಸಾವಿರಕ್ಕೂ ಅಧಿಕ ಬೈಕ್‌ಗಳಲ್ಲಿ 45-50 ಸಾವಿರಕ್ಕೂ ಅಧಿಕ ಜನರು ಬರುವ ಸಾಧ್ಯತೆ ಇದೆ. ಇಡೀ ಕಾರ್ಯಕ್ರಮವು ಬಿಜೆಪಿ ರಾಜ್ಯ, ಜಿಲ್ಲಾ ಸಮಿತಿಗಳಡಿ ನಡೆದಿದೆ.

click me!