Asianet Suvarna News Asianet Suvarna News

Covid19: ಬೆಳಗಾವಿ ಕಲಾಪಕ್ಕೆ ಹೊಸ ತಳಿ ಒಮಿಕ್ರೋನ್‌ ಕಂಟಕ?

*  ಮಹಾರಾಷ್ಟ್ರ ಗಡಿಯಲ್ಲೇ ಬೆಳಗಾವಿ
*  ಕೇಸ್‌ ಹೆಚ್ಚಿದರೆ ಮುಂದೂಡಿಕೆ/ಸ್ಥಳಾಂತರ?
* ಇನ್ನೂ 1 ವಾರ ಸೋಂಕು ಹೆಚ್ಚದಿದ್ದರೆ ಅಧಿವೇಶನ ಅಬಾಧಿತವಾಗಿ ನಡೆವ ನಿರೀಕ್ಷೆ
 

Omicron Likely Barrier to Belagavi Session grg
Author
Bengaluru, First Published Nov 28, 2021, 12:45 PM IST

ಬೆಂಗಳೂರು(ನ.28):  ‘ಒಮಿಕ್ರೋನ್‌’(Omicron) ತಳಿಯ ಕೊರೋನಾ(Coronavirus) ಸೋಂಕಿನ ಬಗ್ಗೆ ರಾಜ್ಯದಲ್ಲೂ ಆತಂಕ ಎದುರಾಗಿರುವ ಹಿನ್ನೆಲೆಯಲ್ಲಿ ಮುಂಬರುವ ಬೆಳಗಾವಿ(Belagavi) ಅಧಿವೇಶನದ(Session) ಬಗ್ಗೆ ಅನುಮಾನ ಶುರುವಾಗಿದೆ.

ಡಿ.13ರಿಂದ 24ರವರೆಗೆ ಬೆಳಗಾವಿಯಲ್ಲಿ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ನಡೆಸಲು ಈಗಾಗಲೇ ನಿರ್ಧರಿಸಲಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಸಿದ್ಧತೆಗಳನ್ನೂ ಆರಂಭಿಸಲಾಗಿದೆ. ಆದರೆ, ಇದೀಗ ಏಕಾಏಕಿ ‘ಒಮಿಕ್ರೋನ್‌’ ತಳಿಯ ಕೊರೋನಾ ಸೋಂಕಿನ ಬಗ್ಗೆ ಜಗತ್ತಿನಾದ್ಯಂತ ಭೀತಿ ಉಂಟಾಗಿರುವುದರಿಂದ ರಾಜ್ಯದ ಮಹಾರಾಷ್ಟ್ರ(Maharashtra) ಮತ್ತು ಕೇರಳ(Keral) ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲು ಶನಿವಾರ ನಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬೆಳಗಾವಿ ಮಹಾರಾಷ್ಟ್ರದ ಗಡಿ ಭಾಗದಲ್ಲೇ ಇರುವುದರಿಂದ ಸಹಜವಾಗಿಯೇ ಅಧಿವೇಶನ ಬಗ್ಗೆ ಚರ್ಚೆ ನಡೆದಿದ್ದು, ರಾಜ್ಯದಲ್ಲಿನ(Karnataka) ಪ್ರಕರಣದ ತೀವ್ರತೆ ನೋಡಿ ಮುಂದಿನ ತೀರ್ಮಾನ ಕೈಗೊಳ್ಳಲು ರಾಜ್ಯ ಸರ್ಕಾರ(Government of Karnataka) ಉದ್ದೇಶಿಸಿದೆ ಎಂದು ತಿಳಿದು ಬಂದಿದೆ.

Omicron Variant: ಇನ್ಮುಂದೆ ಶಾಲಾ, ಕಾಲೇಜಲ್ಲಿ ರ‍್ಯಾಂಡಮ್‌ ಟೆಸ್ಟ್‌

ವಾಸ್ತವವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ಸಭಾಧ್ಯಕ್ಷ ಬಸವರಾಜ ಹೊರಟ್ಟಿ(Basvaraj Horatti) ಅವರು ಉತ್ತರ ಕರ್ನಾಟಕ(North Karnataka) ಭಾಗಕ್ಕೆ ಸೇರಿರುವುದರಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಸಲು ಆಸಕ್ತಿ ತೋರಿ ನಿರ್ಧಾರ ಕೈಗೊಂಡಿದ್ದರು. ಇನ್ನೊಂದು ವಾರದಲ್ಲಿ ಕೋವಿಡ್‌(Covid19) ಪ್ರಕರಣಗಳು ಹೆಚ್ಚದಿದ್ದರೆ ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸಲಿದ್ದು, ಪ್ರಕರಣಗಳು ಹೆಚ್ಚಿದರೆ ಮಾತ್ರ ಅಧಿವೇಶನ ಮುಂದೂಡುವ ಅಥವಾ ಬೆಂಗಳೂರಿಗೆ(Bengaluru) ಸ್ಥಳಾಂತರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಒಮಿಕ್ರೋನ್‌ ನಿಯಂತ್ರಣಕ್ಕೆ ರಾಜ್ಯ ಸಜ್ಜು: ಸಚಿವ ಸುಧಾಕರ್‌

ಹೊಸ ರೂಪಾಂತರಿ ಕೊರೋನಾ ವೈರಾಣು ರಾಜ್ಯದಲ್ಲಿ ಹರಡದಂತೆ ಕ್ರಮ ಕೈಗೊಳ್ಳಲಾಗಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌(Dr K Sudhakar) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೋಟ್ಸ್‌ವಾನಾ(Botswana), ದಕ್ಷಿಣ ಆಫ್ರಿಕಾ(South Africa) ಮುಂತಾದ ದೇಶಗಳಲ್ಲಿ ಪತ್ತೆಯಾಗಿರುವ ಕೋವಿಡ್‌ನ ಹೊಸ ಪ್ರಭೇದ ‘ಒಮಿಕ್ರೋನ್‌ ವೇಗವಾಗಿ ಹರಡುತ್ತದೆ ಎಂದು ತಜ್ಞರು ಹೇಳಿರುವುದರಿಂದ ಜನರಿಗೆ ಆತಂಕವಾಗುವುದು ಸಹಜ. ಆದರೆ ರಾಜ್ಯದಲ್ಲಿ ಕೊರೋನಾದ ಹೊಸ ತಳಿ ಪತ್ತೆಯಾಗಿಲ್ಲ. ಆದರೂ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ದಕ್ಷಿಣ ಆಫ್ರಿಕಾದಿಂದ ಬರುವವರ ಮೇಲೆ ವಿಶೇಷ ನಿಗಾ ಇಡಲಾಗಿದೆ. ನೆಗೆಟಿವ್‌ ವರದಿ ಬರುವವರೆಗೆ ವಿಮಾನ ನಿಲ್ದಾಣದಲ್ಲಿ ಇರಬೇಕು. ಏಳು ದಿನದ ಹೋಮ್‌ ಕ್ವಾರಂಟೈನ್‌(Home Quarantine) ಕೂಡ ಕಡ್ಡಾಯ ಮಾಡಲಾಗಿದೆ ಎಂದು ಅವರು ಹೇಳಿದರು.

Covid19: ಕೊರೋನಾ ಅಲೆ ಭೀತಿ: 6 ಜಿನೋಮಿಕ್‌ ಲ್ಯಾಬ್‌ ಇನ್ನೂ ಆರಂಭವೇ ಆಗಿಲ್ಲ

ಡೆಲ್ಟಾತಳಿ ದೇಶದಲ್ಲಿ 9 ತಿಂಗಳು ಇದ್ದ ಕಾರಣ ಅದರ ನಿರ್ವಹಣೆ ಮಾಡುವುದು ತಿಳಿದಿತ್ತು. ಹೊಸ ರೂಪಾಂತರದಲ್ಲಿ ವೈರಾಣುವಿನ ಕೊಂಬಿನಂತಹ ರಚನೆಯಲ್ಲಿ 25 ರೂಪಾಂತರಗಳಾಗಿವೆ ಎಂಬ ಮಾಹಿತಿ ಇದೆ. ‘ಒಮಿಕ್ರೋನ್‌’ ವೈರಾಣುವಿನ ತೀವ್ರತೆ ಮತ್ತು ಇದರ ಮೇಲೆ ಈಗಿನ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದರ ಬಗ್ಗೆಯೂ ಅಧ್ಯಯನಗಳು ನಡೆಯಬೇಕಿದೆ ಎಂದರು.

ರಾಜ್ಯದಲ್ಲಿ ಕೋವಿಡ್‌ ಏರಿಕೆ: 322 ಕೇಸ್‌

ರಾಜ್ಯದಲ್ಲಿ ಶನಿವಾರ 322 ಮಂದಿಯಲ್ಲಿ ಕೋವಿಡ್‌-19 ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ(Death). 176 ಮಂದಿ ಗುಣಮುಖರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ 60 ಸಾವಿರ ಅಸುಪಾಸಿನಲ್ಲಿದ್ದ ಕೋವಿಡ್‌ ಪರೀಕ್ಷೆಯ(Covid Test)ಪ್ರಮಾಣ ಕ್ಲಸ್ಟರ್‌ಗಳಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾಗುತ್ತಿದ್ದಂತೆ ತುಸು ಏರಿಕೆ ಕಂಡಿದ್ದು 94,651ಕ್ಕೆ ತಲುಪಿದೆ. ಶೇ. 0.34 ಪಾಸಿಟಿವಿಟಿ ದರ ದಾಖಲಾಗಿದೆ. ಶುಕ್ರವಾರ 402 ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ತುಸು ಇಳಿಕೆ ವರದಿಯಾಗಿದೆ. ಬೆಂಗಳೂರು ನಗರದಲ್ಲಿ 149, ಧಾರವಾಡ 76, ಮೈಸೂರು 27 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 13 ಪ್ರಕರಣ ಪತ್ತೆಯಾಗಿವೆ.
 

Follow Us:
Download App:
  • android
  • ios