
ಕೊಪ್ಪಳ (ಮಾ.21): ಪ್ರತಾಪಗೌಡ ಅವರಂತಹವರು ತಮ್ಮ ಶಾಸಕ ಸ್ಥಾನವನ್ನು ತ್ಯಾಗ ಮಾಡಿದ್ದರಿಂದಲೇ ಇಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
"
ಮಸ್ಕಿಗೆ ತೆರಳುವ ಮುನ್ನ ಕನಕಗಿರಿಯಲ್ಲಿ ಶನಿವಾರ ಕನಕಾಚಲ ಲಕ್ಷ್ಮೀ ನರಸಿಂಹ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ಯಾಗ ಮಾಡಿದವರನ್ನು ಸ್ಮರಿಸಬೇಕು ಮತ್ತು ಅವರ ಗೆಲುವಿಗಾಗಿ ಶ್ರಮಿಸಬೇಕು.
ಕೆ.ಆರ್.ಪೇಟೆ, ಶಿರಾ ಆಯ್ತು ಈಗ ವಿಜಯೇಂದ್ರನ ಮಸ್ಕಿ ದಂಡಯಾತ್ರೆ ...
ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರಲು ಮೊದಲ ಹೆಜ್ಜೆಯನ್ನು ಇಟ್ಟಿದ್ದೇ ಪ್ರತಾಪಗೌಡ. ಯಡಿಯೂರಪ್ಪ ಸರ್ಕಾರವನ್ನು ಮತ್ತಷ್ಟುಬಲಗೊಳಿಸಲು ಪ್ರತಾಪಗೌಡರನ್ನು ಭರ್ಜರಿಯಾಗಿಯೇ ಜನ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರನ್ನು ನಾನು ಒಂದು ಸಮುದಾಯದ ನಾಯಕ ಎಂದು ಹೇಳುವುದಿಲ್ಲ. ಅವರು ಎಲ್ಲ ಸಮುದಾಯದ ನಾಯಕರಾಗಿದ್ದಾರೆ. ಹೀಗಾಗಿ, ಅವರು ಪಕ್ಷಕ್ಕೆ ಬಂದಿದ್ದು ಆನೆ ಬಲಬಂದಂತಾಗಿದೆ. ಇದು ಪ್ರತಾಪಗೌಡ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸಿ.ಡಿ. ವಿಚಾರ ಮಾತನಾಡುವುದು ಬೇಡ. ನಾವು ಚುನಾವಣೆ ಎಂಬ ಯುದ್ಧಕ್ಕೆ ತೆರಳುತ್ತಿದ್ದೇವೆ. ಹೀಗಾಗಿ, ಆ ವಿಷಯದ ಮಾತುಕತೆ ಬೇಡ ಎಂದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಕುರಿತು ಕೇಳಿದ ಪ್ರಶ್ನೆಗೂ ಉತ್ತರಿಸದೆ ಮುಂದೆ ಸಾಗಿದರು.
ಈಗಾಗಲೇ ಈ ಹಿಂದೆ ನಡೆದ 12 ಉಪ ಚುನಾವಣೆಯಲ್ಲಿಯೂ ಬಿಜೆಪಿ ಜಯ ಸಾಧಿಸಿದೆ. ಹೀಗಾಗಿ, ಈ ಬಾರಿಯೂ ಉಪ ಚುನಾವಣೆಯಲ್ಲಿ ಗೆಲವು ನಿಶ್ಚಿತ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.