ರಾಜ್ಯದಲ್ಲಿ ಈಡಿಗ ಸಮುದಾಯ ತನ್ನದೇ ರಾಜಕೀಯ ಪ್ರಾಬಲ್ಯ ಹೊಂದಿದೆ. ಸಿಎಂ ಸ್ಥಾನ ಬದಲಾವಣೆ ಮಾಡುವುದಾದರೆ ಬಿಕೆ ಹರಿಪ್ರಸಾದ್ ಅವರನ್ನೇ ಸಿಎಂ ಅಥವಾ ಡಿಸಿಎಂ ಎಂದು ಘೋಷಿಸುವಂತೆ ಪ್ರಣವಾನಂದಶ್ರೀ ಒತ್ತಾಯಿಸಿದರು.
ಯಾದಗಿರಿ (ಜೂ.30): ರಾಜ್ಯದಲ್ಲಿ ಈಡಿಗ ಸಮುದಾಯ ತನ್ನದೇ ರಾಜಕೀಯ ಪ್ರಾಬಲ್ಯ ಹೊಂದಿದೆ. ಸಿಎಂ ಸ್ಥಾನ ಬದಲಾವಣೆ ಮಾಡುವುದಾದರೆ ಬಿಕೆ ಹರಿಪ್ರಸಾದ್ ಅವರನ್ನೇ ಸಿಎಂ ಅಥವಾ ಡಿಸಿಎಂ ಎಂದು ಘೋಷಿಸುವಂತೆ ಪ್ರಣವಾನಂದಶ್ರೀ ಒತ್ತಾಯಿಸಿದರು.
ಇಂದು ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಬಿಕೆ ಹರಿಪ್ರಸಾದ(BK Hariprasad) ಅವರ ಹಿಂದೆ ಇಡೀ ಹಿಂದುಳಿದ ಸಮಾಜವಿದೆ. ಹರಿಪ್ರಸಾದ್ ಅವರ ಪರವಾಗಿ ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದೇನೆ ಸಿಎಂ ಡಿಸಿಎಂ ಸ್ಥಾನ ಬದಲಾದರೆ ಬಿಕೆ ಹರಿಪ್ರಸಾದ್ ಅವರಿಗೆ ಸಿಎಂ ಅಥವಾ ಡಿಸಿಎಂ ಸ್ಥಾನ ನೀಡಬೇಕು. ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಾದ್ರೂ ಹರಿಪ್ರಸಾದ್ ಅವರಿಗೆ ನೀಡಬೇಕು ಎಂದು ಒತ್ತಾಯಿಸಿದರು.
undefined
ಸಿಎಂ-ಡಿಸಿಎಂ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಇದ್ದಂತೆ: ವಚನಾನಂದ ಶ್ರೀ
ಹರಿಪ್ರಸಾದ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತರು. ಮೂಲತಃ ಕಾಂಗ್ರೆಸ್‌ನವರು ಯಾವುದೇ ಪಕ್ಷದಿಂದ ವಲಸೆ ಬಂದ ನಾಯಕರಲ್ಲ. ಇಂತಹ ನಿಷ್ಠಾವಂತರಿಗೆ ಸ್ಥಾನಮಾನ ನೀಡಬೇಕು ಎಂದರು.
ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಗಾಳಿ ಜೋರಾಗಿ ಬಿಸುತ್ತಿದೆ. ಸಿಎಂ ಬದಲಾವಣೆಯ ಮಾಡಬೇಕೋ ಬೇಡವೋ ಹೈಕಮಾಂಡ್ ಚರ್ಚೆಯಲ್ಲಿದೆ. ಒಂದು ವೇಳೆ ಸಿಎಂ ಬದಲಾವಣೆ ಮಾಡಿದ್ರೆ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಎದುರಾಗಿದೆ. ಲಿಂಗಾಯತರೇ ಸಿಎಂ ಆಗಬೇಕು ಎಂಬ ಕೂಗು ಎದ್ದಿದೆ. ಇತ್ತ ದಲಿತರಿಗೆ ಪ್ರಾತಿನಿಧ್ಯ ನೀಡಬೇಕು. ದಲಿತರಿಗೆ ಸಿಎಂ ಅವಕಾಶ ನೀಡಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಮುಂದಿನ ಸಿಎಂ ಬಗ್ಗೆ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.