ಬಣ ರಾಜಕೀಯ ಮತ್ತೆ ಮುನ್ನೆಲೆಗೆ: ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದ ಪರಂ

By Suvarna News  |  First Published Jan 20, 2020, 9:05 PM IST

ಬಣ ರಾಜಕೀಯದಲ್ಲಿ ನಲುಗಿರುವ ರಾಜ್ಯ ಕಾಂಗ್ರೆಸ್ ಗೆ ಇನ್ನೂ ನಾಯಕ ಸಿಕ್ಕಿಲ್ಲ. ಇಂದಾದರೂ ಕೆಪಿಸಿಸಿ ಅದ್ಯಕ್ಷ ಹುದ್ದೆಗೆ ಹೆಸರು ಘೋಷಣೆ ಯಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಸಿದ್ದು ಬಣ ಮತ್ತು ಡಿಕೆ ಬಣಗಳ ಹಠದಲ್ಲಿ ರಾಜ್ಯ ಕಾಂಗ್ರಸ್ ನಾವಿಕನಿಲ್ಲದ ನೌಕೆಯಂತಾಗಿದೆ. ಇದರ ಮಧ್ಯೆ ಡಾ ಜಿ. ಪರಮೇಶ್ವರ್ ಸಿದ್ದರಾಮಯ್ಯಗೆ ತೊಡೆತಟ್ಟಿದ್ದಾರೆ.


ಬೆಂಗಳೂರು, [ಜ.20]:  ಕರ್ನಾಟಕ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಮತ್ತೆ ಮುನ್ನೆಲೆಗೆ ಬಂದಿದೆ. ಇಷ್ಟು ದಿನ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಇದೀಗ ಡಾ. ಜಿ. ಪರಮೇಶ್ವರ್ ಅವರು ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ್ದಾರೆ.

 ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಪರಮೇಶ್ವರ್ ವ್ಯಕ್ತಪಡಿಸುವ ಮೂಲಕ ಸಿದ್ದರಾಮಯ್ಯ ವಿರುದ್ಧ ಎದ್ದು ನಿಂತಂತಿದೆ. 

Tap to resize

Latest Videos

ಮಹಾರಾಷ್ಟ್ರ ಮಾಡೆಲನ್ನು ಕರ್ನಾಟಕ ಕಾಂಗ್ರೆಸ್‌ನಲ್ಲಿ ಜಾರಿಗೆ ತರಲು ಸಿದ್ದು ವಿರೋಧ

ಪಕ್ಷದ ಹಿತದೃಷ್ಟಿಯಿಂದ ಸಿಎಲ್ಪಿ, ಎಲ್ಓಪಿ ಪ್ರತ್ಯೇಕವಾದರೆ ತಪ್ಪೇನಿಲ್ಲ. ಸಿಎಲ್ಪಿ ಹೆಚ್ಚಿನದಲ್ಲ, ಎಲ್ಓಪಿ ಹೆಚ್ಚಿನದಲ್ಲ. ಎರಡೂ ಸ್ಥಾನ ಪ್ರತ್ಯೇಕಿಸಿದರೆ ಇಬ್ಬರು ನಾಯಕರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. ಅದು ಆಯಾಯ ನಾಯಕರ ಮನಸ್ಥಿತಿಯ ಮೇಲೆ ಹೋಗುತ್ತದೆ ಎಂದರು.

ಪ್ರತ್ಯೇಕ ಮಾಡಿದರೆ ರಾಜೀನಾಮೆ ಕೊಡ್ತೀನಿ ಅನ್ನೋದು ಸಿದ್ದರಾಮಯ್ಯ ವೈಯಕ್ತಿಕ ಅಭಿಪ್ರಾಯ ಇರಬಹುದು. ಅದಕ್ಕೆ ಸಿದ್ದರಾಮಯ್ಯಗೆ ಅವರದೇ ಆದ ಕಾರಣಗಳಿರಬಹುದು. ಆದರೆ ಮಹಾರಾಷ್ಟ್ರದಲ್ಲೂ ಮಾಡಿದ್ದಾರೆ. ಇಲ್ಲೂ ಮಾಡಿದರೆ ತಪ್ಪೇನಿಲ್ಲ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಹುದ್ದೆ: ಡಿಕೆಶಿ ಸುತ್ತ 4 ಗೋಡೆ ಕಟ್ಟಿದ ಸಿದ್ದರಾಮಯ್ಯ 

ವಿಭಜನೆಗೆ ಸಿದ್ದು ವಿರೋಧ
 ಕೆಪಿಸಿಸಿ ಅಧ್ಯಕ್ಷ ಜತೆಗೆ ನಾಲ್ವರನ್ನು ಕಾರ್ಯಧ್ಯಕ್ಷರ ನೇಮಕವಾಗಬೇಕೆಂದು ಸಿದ್ದರಾಮಯ್ಯ ಹೈಕಮಾಂಡ್ ಗೆ ಹೇಳಿ ಬಂದಿದ್ದಾರೆ. ಅಷ್ಟೇ ಅಲ್ಲದೇ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಹುದ್ದೆಯನ್ನು ಬೇರೆ-ಬೇರೆ ಮಾಡುವುದು ಬೇಡ ಅಂತಲೂ ತಿಳಿದ್ದಾರೆ.

ಸಿಎಲ್ಪಿ ಹುದ್ದೆ, ವಿಪಕ್ಷ ಸ್ಥಾನ ಪ್ರತ್ಯೇಕಿಸಲು ಹೈಕಮಾಂಡ್ ಚಿಂತನೆ ನಡೆಸಿದ್ದು, ಮಹಾರಾಷ್ಟ್ರ ಮಾದರಿಯಲ್ಲಿ ಸ್ಥಾನ ಪ್ರತ್ಯೇಕಿಸಲು ವಿರೋಧಿ ಬಣ ಒತ್ತಾಯ ಮಾಡ್ತಿದೆ. ಆದ್ರೆ, ಇದಕ್ಕೆ ಸಿದ್ದರಾಮಯ್ಯ ತೀವ್ರ ವಿರೋಧಿಸಿದ್ದಾರೆ.

ಎರಡು ಹುದ್ದೆಗಳನ್ನು ವಿಭಜಿಸಿ ವಿರೋಧ ಪಕ್ಷಕ್ಕೆ ಸಿದ್ದರಾಮಯ್ಯ ಅವರನ್ನು ಮುಂದುವರಿಸಿ, ಶಾಸಕಾಂಗ ಪಕ್ಷದ ನಾಯಕ ಹುದ್ದೆಯನ್ನು ಡಾ ಜಿ. ಪರಮೇಶ್ವರ್ ಗೆ ಕೊಡಲು ಹೈಕಮಾಂಡ್ ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಪರಂ ಹುದ್ದೆ ವಿಭಜನೆ ಧ್ವನಿ ಎತ್ತಿದ್ದಾರೆ. ಆದ್ರೆ, ಇದೀಗ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. 

 ಸಿಎಲ್ಪಿ ಹಾಗೂ ವಿಪಕ್ಷ ನಾಯಕ ಹುದ್ದೆ ನನಗೇ ಬೇಕು. ಹುದ್ದೆ ಪ್ರತ್ಯೇಕಿಸಿದ್ರೆ ಎರಡು ಸ್ಥಾನ ತೊರೆಯುತ್ತೇನೆ ಎಂದು ಮೊನ್ನೆ ದೆಹಲಿಯಲ್ಲಿ ಹೈಕಮಾಂಡ್ ಗೆ ಖಡಕ್ ಆಗಿ ಹೇಳಿಬಂದಿದ್ದಾರೆ. ಆದ್ರೆ, ಇದೀಗ ಪರಮೇಶ್ವರ್ ಎದ್ದು ನಿಂತಿರುವುದು ಸಿದ್ದರಾಮಯ್ಯಗೆ ಮತ್ತಷ್ಟು ಕಣ್ಣುಕೆಂಪಾಗಿಸಿದೆ.

click me!