ಖಾತೆ ಹಂಚಿಕೆ ಲಿಸ್ಟ್ ರೆಡಿ ಎಂದ BSY: ಯಾರಿಗೆ ಯಾವ ಖಾತೆ...?

Published : Feb 08, 2020, 11:47 AM ISTUpdated : Feb 08, 2020, 04:07 PM IST
ಖಾತೆ ಹಂಚಿಕೆ ಲಿಸ್ಟ್ ರೆಡಿ ಎಂದ BSY: ಯಾರಿಗೆ ಯಾವ ಖಾತೆ...?

ಸಾರಾಂಶ

ಕೊನೆಗೂ ರಾಜ್ಯ ಸಂಪುಟ ವಿಸ್ತರಣೆಯಾಗಿದ್ದು, 10 ಜನರು ಸಚಿವರಾಗಿ ಗುರುವಾರ ರಾಜಭನವದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.  ಆದ್ರೆ, ಇದೀಗ ಖಾತೆ ಕ್ಯಾತೆ ಶುರುವಾಗಿದ್ದು, ಇದಕ್ಕೆ ಶನಿವಾರ ಬೆಳಗ್ಗೆ ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಹಾಗಾದ್ರೆ ಕಾತೆ ಬಗ್ಗೆ ಬಿಎಸ್‌ವೈ ಏನು ಹೇಳಿದ್ರು ಎನ್ನುವುದು ಈ ಕೆಳಗಿನಂತಿದೆ ನೋಡಿ. 

ಬೆಂಗಳೂರು, (ಫೆ.08): ಸಿಎಂ ಹೇಳಿದಂತೆ ಇಂದು (ಶನಿವಾರ) ಸಂಜೆಯೊಳಗೆ ನೂತನ ಸಚಿವರುಗಳಿಗೆ ಖಾತೆ ಹಂಚಿಕೆಯಾಗಬೇಕಿತ್ತು. ಆದ್ರೆ, ಇದೀಗ ಅದು ಸೋಮವಾರಕ್ಕೆ ಮುಂದೂಡಲಾಗಿದೆ.

"

ನೂತನ 10 ಸಚಿವರುಗಳಿಗೆ ಖಾತೆ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು (ಶನಿವಾರ) ಬೆಳಗ್ಗೆ ಪ್ರತಿಕ್ರಿಯಿಸಿದ್ದು, ಖಾತೆಯ ಲಿಸ್ಟ್ ರೆಡಿಯಾಗಿದೆ ಎಂದು ಸ್ಪಷ್ಟಪಡಿಸಿದರು.

ಖಾತೆ ಹಂಚಿಕೆ: ಉಸ್ತುವಾರಿ ವಿಜಯೇಂದ್ರ ಹೆಗಲಿಗೆ

ದೆಹಲಿಗೆ ಹೋಗುವುದಿಲ್ಲ. ಇವತ್ತು ರಜೆ ಇರುವುದರಿಂದ ಸೋಮವಾರ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಹೇಳಿದರು.  ಶನಿವಾರ ಖಾತೆ ಹಂಚಿಕೆ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರು ನೂತನ ಸಚಿವರುಗಳ ಗುರುವಾರ ಪ್ರಮಾಣವಚನ ಸ್ವೀಕರಿಸಿದ ಬಳಿಕ ಹೇಳಿದ್ದರು.

 ಅಷ್ಟೇ ಅಲ್ಲದೇ ಅಗತ್ಯಬಿದ್ದರೆ ದೆಹಲಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ. ಆದ್ರೆ, ಇದೀಗ ದೆಹಲಿಗೆ ತೆರಳುವುದಿಲ್ಲ. ಸೋಮವಾರವೇ ಖಾತೆ ಹಂಚಿಕೆ ಮಾಡುತ್ತೇನೆ ಎಂದು ತಿಳಿಸಿದರು.

ನೂತನ ಸಚಿವರಿಗೆ ಖಾತೆ ಹಂಚಿಕೆ ಕುತೂಹಲ

ಮತ್ತೊಂದೆಡೆ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಸಚಿವರ ನಡುವೆ ಖಾತೆಗಾಗಿ ಕ್ಯಾತೆ ಶುರುವಾಗಿದ್ದು, ಕೆಲ ನೂತನ ಶಾಸಕರಂತೂ ನಮಗೆ ಇಂಥದ್ದೇ ಖಾತೆ ಬೇಕೆಂದು ಪಟ್ಟು ಹಿಡಿದು ಕೂತಿದ್ರೆ, ಮತ್ತೆ ಕೆಲವರು ಪ್ರಬಲ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಕೆಲವರು ಹಾಲಿ ಸಚಿವರ ಕುರ್ಚಿಗಳತ್ತ ಚಿತ್ತ ಹರಿಸಿದ್ದಾರೆ. ಇನ್ನು ಸೋಮವಾರ ಯಾರಿಗೆ ಯಾವ ಖಾತೆ ಸಿಗಲಿದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಅದರಲ್ಲೂ ರಮೇಶ್ ಜಾರಕಿಹೊಳಿ ಪ್ರಮುಖ ಜಲಸಂಪನ್ಮೂಲ ಖಾತೆ ಬೇಕೆಂದು ಹಠ ಹಿಡಿದಿದ್ರೆ, ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಗೋಪಾಲಯ್ಯ, ಬೈರತಿ ಬಸವರಾಜ್, ಎಸ್‌.ಟಿ.ಸೋಮಶೇಖರ್ ನಡುವೆ ಪೈಪೋಟಿ ನಡೆದಿದೆ.

ಬಿಎಸ್‌ವೈ ಸಂಪುಟಕ್ಕೆ ಸೇರ್ಪಡೆಯಾದ 10 ನೂತನ ಸಚಿವರ ಒಂದಿಷ್ಟು ಮಾಹಿತಿ ನಿಮಗಾಗಿ 

ಬಿ.ಸಿ.ಪಾಟೀಲ್ ಗೃಹ ಖಾತೆ ಕೊಟ್ಟರೆ ಚೆನ್ನಾಗಿರುತ್ತೆ ಎಂದು ಹೇಳಿಕೊಂಡಿದ್ದು, ಅಂತಿಮವಾಗಿ  ಯಾರಿಗೆ ಯಾವ ಖಾತೆ ಸಿಗುತ್ತೆ ಎನ್ನುವುದು ಸೋಮವಾರದವರೆಗೆ ಕಾದುನೋಡಬೇಕಿದೆ.

ಫೆಬ್ರವರಿ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದತ್ತಪೀಠ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯ ಒದಗಿಸಲಿ: ಸಿ.ಟಿ.ರವಿ ಆಗ್ರಹ
ಕರಾವಳಿಯಲ್ಲಿ ಶಿವಗಿರಿ ಮಠ ಶಾಖೆಗೆ 5 ಎಕರೆ: ಸಿಎಂ ಸಿದ್ದರಾಮಯ್ಯ ಭರವಸೆ