ರಾಜಕಾರಣವೇ ಬೇರೆ, ಸ್ನೇಹವೇ ಬೇರೆ.. ಕಟೀಲ್ ಮನೆಯಲ್ಲಿ ಸುರೇಶ್

Published : Apr 09, 2021, 10:15 PM ISTUpdated : Apr 09, 2021, 10:29 PM IST
ರಾಜಕಾರಣವೇ ಬೇರೆ, ಸ್ನೇಹವೇ ಬೇರೆ.. ಕಟೀಲ್ ಮನೆಯಲ್ಲಿ ಸುರೇಶ್

ಸಾರಾಂಶ

ರಾಜಕಾರಣ ಬೇರೆ ಸ್ನೇಹ ಬೇರೆ/ ಕರ್ನಾಟಕದಲ್ಲಿ ಹಲವು ಉದಾಹರಣೆಗಳಿವೆ/ ಬಿಜೆಪಿ ರಾಜ್ಯ ಅಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲ್ ಮನೆಯಲ್ಲಿ ನಡೆದ ದೈವದ ಕಾರ್ಯಕ್ರಮದಲ್ಲಿ ಸಂಸದ ಡಿಕೆ ಸುರೇಶ್ 

ಮಂಗಳೂರು(ಏ.  09)  ರಾಜಕಾರಣ ಬೇರೆ ಸ್ನೇಹ ಬೇರೆ.. ಹೌದು ಇಂಥ ಉದಾಹರಣೆಗಳನ್ನು ಹಲವು ಕಡೆ ಕಾಣುತ್ತಲೇ ಇರುತ್ತೇವೆ. ದಕ್ಷಿಣ ಭಾರತದ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಸೌಹಾರ್ದ ಜಾಸ್ತಿಯೇ ಇದೆ.

ಬಿಜೆಪಿ ರಾಜ್ಯ ಅಧ್ಯಕ್ಷ, ಸಂಸದ ನಳೀನ್ ಕುಮಾರ್ ಕಟೀಲ್ ಮನೆಯಲ್ಲಿ ನಡೆದ ದೈವದ ಕಾರ್ಯಕ್ರಮದಲ್ಲಿ ಸಂಸದ ಡಿಕೆ ಸುರೇಶ್ ಭಾಗವಹಿಸಿದ್ದರು.  ಒಂದು ಕಡೆ ಉಪಚುನಾವಣಾ ಸಮರದಲ್ಲಿ ಎರಡು ಪಕ್ಷದ ನಾಯಕರು ವಾಕ್ ಸಮರದಲ್ಲಿ ತೊಡಗಿದ್ದರೆ ಇಲ್ಲಿ ವಾತಾವರಣ ಬೇರೆಯದ್ದೇ ಇತ್ತು.

ಕುಮಾರಸ್ವಾಮಿಗೆ ಜಮೀರ್ ಕರೆದ ಆ ಪದ

ಹಿಂದೊಮ್ಮೆ ಸಂಸತ್ ಭವನದಲ್ಲಿ  ಒಟ್ಟಿಗೆ ಕುಳಿತ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಲಡಾಕ್ ಎಂಪಿ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಮತ್ತು ಡಿಕೆ ಸುರೇಶ್ ಚಿತ್ರವೂ ಹರಿದಾಡಿತ್ತು. ಕನ್ನಡ ಕಲಿತ ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ನೀವು ಯಾಕೆ ಬಿಜೆಪಿ ಸೇರಬಾರದು ಎಂಧು ಸುರೇಶ್ ರನ್ನು ಕೇಳಿದ್ದರು!

ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ಇದ್ದಾಗ ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪಮಾತನಾಡಿಸಿಕೊಂಡು ಬಂದಿದ್ದರು. ದೇವೇಗೌಡರಿಗೆ ಕೊರೋನಾ ಎಂಬ ಸುದ್ದಿ ಕೇಳಿದ ತಕ್ಷಣ ಖುದ್ದು ಪ್ರಧಾನಿ ನರೇಂದ್ರ ಮೋದಿ ಗೌಡರಿಗೆ ಕರೆ ಮಾಡಿ ವಿಚಾರಿಸಿಕೊಂಡಿದ್ದರು. ಅಧಿವೇಶನ ಬಾಯ್ಕಾಟ್ ಮಾಡಿದ್ದ ಸಿದ್ದರಾಮಯ್ಯ  ಮದುವೆ ಸಮಾರಂಭವೊಂದಕ್ಕೆ ತೆರಳಿದ್ದಾಗ ಎದುರಾದ ಯಡಿಯೂರಪ್ಪ  ಮತ್ತು ಅವರ ಮಾತು ವೈರಲ್ ಆಗಿತ್ತು.

ಯಡಿಯೂರಪ್ಪ ಅವರಗಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗ ಸಿದ್ದರಾಮಯ್ಯ ಆಗಮಿಸಿ ಬಿಎಸ್‌ವೈ ಜೀವನದ ಹೋರಾಟಗಳನ್ನು  ಹೇಳಿದ್ದರು.  ಕರ್ನಾಟಕ ರಾಜಕಾರಣದಲ್ಲಿ ಇಂಥ ಉದಾಹರಣೆಗಳು ಆಗಾಗ ಕಂಡುಬರುತ್ತಿರುತ್ತವೆ.. ರಾಜಕಾರಣವೇ ಬೇರೆ ..ಸ್ನೇಹ-ಬಾಂಧವ್ಯವೇ ಬೇರೆ... 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!