ಉಪಮುಖ್ಯಂತ್ರಿ ಗೋವಿಂದ್ ಕಾರಜೋಳ ಅವರಿಗೆ ಮತ್ತೆ ಕೊರೋನಾ ವೈರಸ್ ತಗುಲಿದೆ. ಈ ಹಿಂದೆಯೂ ಅವರಿಗೆ ಸೋಂಕು ತಗುಲಿತ್ತು.
ಬೆಂಗಳೂರು, (ಏ.09): ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಕೋವಿಡ್ ಸೋಂಕು ತಗುಲಿದೆ. ಈ ಬಗ್ಗೆ ಟ್ವೀಟ್ ಮೂಲಕ ಅವರು ಮಾಹಿತಿ ನೀಡಿದ್ದಾರೆ.
ಗೋವಿಂದ ಕಾರಜೋಳ ಅವರು ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದರು. ಏಪ್ರಿಲ್ 10 ಮತ್ತು 11ರಂದು ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಅವರು ಪ್ರಚಾರ ನಡೆಸಬೇಕಿತ್ತು.ಆದರೆ, ಕೋವಿಡ್ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
undefined
ಡಿಸಿಎಂ ಕಾರಜೋಳಗೆ ಕೊರೋನಾ, ಆಸ್ಪತ್ರೆಗೆ ದಾಖಲು
ನನಗಿರುವ ಕೋವಿಡ್ ಸೋಂಕು ಇತರರಿಗೆ ಹರಡಬಾರದೆಂಬ ಕಾರಣಕ್ಕೆ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಶ್ರೀ ಗೋವಿಂದ ಎಂ ಕಾರಜೋಳ ಅವರಿಗೆ ಕೋವಿಡ್ pic.twitter.com/OdKP8kMmcs
— Deputy Chief Minister (@GovindKarjol)ಅನುಭವಿ ವೈದ್ಯರು ನನಗೆ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯ ಸುಧಾರಿಸುತ್ತಿದೆ. ಮಸ್ಕಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೊಟ್ಟ ಮಾತನ್ನು ಇಂದಿನ ಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಲಿಲ್ಲ. ಇದಕ್ಕಾಗಿ ವಿಷಾದಿಸಿ, ಮತದಾರರ ಕ್ಷಮೆ ಕೋರುತ್ತೇನೆ ಎಂದು ಎಂದಿದ್ದಾರೆ.
ಇನ್ನು ಕಾರಜೋಳ ಅವರಿಗೆ ಹಿಂದೆ ಕೊರೋನಾ ದೃಢಪಟ್ಟಿತ್ತು. ಇದೀಗ ಮತ್ತೆ ಎರಡನೇ ಬಾರಿಗೆ ಕೊರೋನಾ ಸೋಂಕು ತಗುಲಿರುವುದು ಕೊಂಚ ಆತಂಕಕ್ಕೆ ಕಾರಣವಾಗಿದೆ.