ರಾಜ್ಯದ ಅಭಿವೃದ್ಧಿಯಲ್ಲಿ ರಾಜಕಾರಣಿಗಳ ಭಾವನೆ ಒಂದೇ ಆಗಿರಬೇಕು: ಸಚಿವ ಕೆ.ಜೆ.ಜಾರ್ಜ್‌

By Kannadaprabha News  |  First Published Dec 28, 2023, 10:43 PM IST

ರಾಜಕೀಯ, ರಾಜಕಾರಣದಲ್ಲಿ ಪರಸ್ಪರ ಸೈದ್ಧಾಂತಿಕ ಸಂಘರ್ಷಗಳಿದ್ದರೂ ರಾಜ್ಯ, ದೇಶದ ಅಬಿವೃದ್ಧಿ ವಿಚಾರದಲ್ಲಿ ಎಲ್ಲಾ ರಾಜಕಾರಣಿಗಳ ಭಾವನೆಗಳು ಒಂದೇ ಆಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. 


ಶೃಂಗೇರಿ (ಡಿ.28): ರಾಜಕೀಯ, ರಾಜಕಾರಣದಲ್ಲಿ ಪರಸ್ಪರ ಸೈದ್ಧಾಂತಿಕ ಸಂಘರ್ಷಗಳಿದ್ದರೂ ರಾಜ್ಯ, ದೇಶದ ಅಬಿವೃದ್ಧಿ ವಿಚಾರದಲ್ಲಿ ಎಲ್ಲಾ ರಾಜಕಾರಣಿಗಳ ಭಾವನೆಗಳು ಒಂದೇ ಆಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಪಟ್ಠಣದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆಯುತ್ತಿರುವ 50 ನೇ ಸುವರ್ಣ ಮಹೋತ್ಸವ ಕಾರ್ಯಕ್ರಮ ದಲ್ಲಿ ಮಾತನಾಡಿ, ನಾವು ಧರ್ಮಕ್ಕೆ ಒಳಿತು ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಧರ್ಮಗಳು ಬೇರೆ ಬೇರೆ ಯಾಗಿದ್ದರೂ ಎಲ್ಲಾ ಧರ್ಮಗಳ ತಿರುಳು ಒಂದೇ ಆಗಿದೆ. ನಾವು ಇತರ ಧರ್ಮವನ್ನು ಗೌರವಿಸಿದರೆ, ಅನ್ಯಧರ್ಮ ನಮ್ಮನ್ನು ಗೌರವಿಸುತ್ತದೆ.

ನಮಗೆ ರಾಮ, ಆಂಜನೇಯನ ಮೇಲೆ ಭಕ್ತಿಯಿದೆ. ರಾಮ ರಾಜ್ಯ ಗಾಂಧಿಜಿಯವರ ಪರಿಕಲ್ಪನೆಯಾಗಿತ್ತು. ಶಾಂತಿ , ಸೌಹಾರ್ದತೆ ಮೂಲಮಂತ್ರವಾಗಿತ್ತು. ಒಕ್ಕಲಿಗರು ಕೃಷಿಕರು ಅನ್ನ ದಾನಿಗಳು, ಅವರ ಕೊಡುಗೆ ಅಪಾರವಾಗಿದೆ. ಸರ್ಕಾರ ಅನೇಕ ಗ್ಯಾರಂಟಿಗಳನ್ನು ನೀಡಿದೆ. ಕಷ್ಟದಲ್ಲಿರುವ ಸಾಮಾನ್ಯ ಜನರಿಗೆ ಸ್ಪಂದಿಸುವುದು ಮುಖ್ಯ ಗುರಿಯಾಗಿದೆ. ಅಧಿಕಾರ ಕೇವಲ ಜನಪ್ರತಿನಿದಿಗಳ ಕೆಲಸವಲ್ಲ. ಜನಹಿತ ಕೆಲಸಗಳು ಮುಖ್ಯ ಎಂದರು. ಮಾಜಿ ಸಚಿವರಾದ ಸಿ.ಟಿ.ರವಿ, ಅರಗ ಜ್ಞಾನೇಂದ್ರ, ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಸಚಿವ ಡಿ.ಎನ್‌.ಜೀವರಾಜ್‌, ಕಡೂರು ಶಾಸಕ ಆನಂದ್‌ ಉಪಸ್ಥಿತರಿದ್ದರು.

Tap to resize

Latest Videos

undefined

ಬರಗಾಲದ ಸಮಸ್ಯೆ ಜಿಲ್ಲೆಯಲ್ಲಿ ಯಾವ ಪ್ರಮಾಣದಲ್ಲಿದೆ?: ಕೋಲಾರ ಜಿಲ್ಲಾಧಿಕಾರಿಗೆ ಸಿಎಂ ಪ್ರಶ್ನೆ

ಮಾನವೀಯ ಮೌಲ್ಯ ಎಲ್ಲ ಧರ್ಮಗಳ ಸಾರ: ಯಾವುದೇ ಸೇವೆಯಲ್ಲಿ ಮಾನವೀಯತೆಯೇ ಹೆಗ್ಗುರುತು. ಮಾನವೀಯ ಮೌಲ್ಯ ಎಲ್ಲ ಧರ್ಮಗಳ ಸಾರ. ಧರ್ಮವೆಂದರೆ ಕೇವಲ ಆಧ್ಯಾತ್ಮಿಕತೆ ಮಾತ್ರವಲ್ಲ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾ ನಂದನಾಥ ಸ್ವಾಮೀಜಿ ಹೇಳಿದರು. ಪಟ್ಟಣದ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ 50 ನೇ ಸುವರ್ಣ ಮಹೋತ್ಸವ, ಸುವರ್ಣ ಪಟ್ಟಾಭಿ ಷೇಕದಲ್ಲಿ ಸತ್ಸಂಗ ಕಾರ್ಯಕ್ರಮ, ಚುಂಚೋತ್ಸವ ಹಾಗೂ ಸಾಂಸ್ಕೃತಿಕ ಸಮಾಗಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜನ, ಸಾಮಾಜಿಕ ಉನ್ನತಿ ಹಾಗೂ ದೇಶದ ಉನ್ನತಿ ಬಯಸುವುದೇ ನಿಜವಾದ ಧರ್ಮ. ಮಾನವೀಯ, ನೈತಿಕ ಮೌಲ್ಯ ಗಳನ್ನು ಎತ್ತಿ ಹಿಡಿಯಬೇಕು. ಹಿಂದಿನ ಋಷಿಮುನಿಗಳು ನೀಡಿದ ಜ್ಞಾನದ ಮಾರ್ಗದಲ್ಲೆ ಮುನ್ನಡೆಯಬೇಕು. ಇಲ್ಲದಿದ್ದರೆ ಸಾಧನೆ ಮಾಡಲು ಸಾದ್ಯವಿಲ್ಲ. ಯುವಪೀಳಿಗೆ ಶಿಸ್ತಿನ ಜೊತೆಗೆ ಅಗತ್ಯವಾಗಿ ಧಾರ್ಮಿಕ ಮೌಲ್ಯಗಳನ್ನು ತಿಳಿದು ಕೊಳ್ಳಬೇಕು. ಹಿರಿಯರು ಇದರ ಬಗ್ಗೆ ಮಾರ್ಗದರ್ಶನ ನೀಡಿ ಹೇಳಿ ಕೊಡಬೇಕು. ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸಬೇಕು. ಅವರಲ್ಲಿ ಜ್ಞಾನದ ಅರಿವು ಮೂಡಿಸಬೇಕು. ನಾಟ್ಯ ಪರಂಪರೆ ಅದ್ವೈತ ಪರಂಪರೆ ಹಿನ್ನೆಲೆಯ ಮೂಲಕ ಬಂದಿದೆ. ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳಲ್ಲಿ ಭಿನ್ನತೆಯಿದ್ದರೂ ಎಲ್ಲವು ಒಂದೇ. ನಮ್ಮ ಧರ್ಮ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದರು.

ಲೋಕಸಭೆ ಚುನಾವಣೆಯಲ್ಲಿ ಕೋಲಾರದಿಂದ ಬಿಜೆಪಿಯನ್ನು ಗೆಲ್ಲಿಸಿ: ಸಂಸದ ಮುನಿಸ್ವಾಮಿ

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಾ.ಶಮಿತಾ ಮಲ್ನಾಡ್‌ ಮತ್ತು ಬಿಜಿಎಸ್‌ ನಾಟ್ಯಶಾಲೆ ಮಕ್ಕಳಿಂದ ಸಂಗೀತ ಮತ್ತು ನೃತ್ಯ ರಸ ಸಂಜೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಶಿವಪುತ್ರನಾಥ ಸ್ವಾಮೀಜಿ, ಶ್ರೀ ಶೈಲನಾಥ ಸ್ವಾಮೀಜಿ ಉಪಸ್ಥಿತರಿದ್ದರು.

click me!