ರಾಮನಗರದಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ : ಜನ ಹಾಲು ಕೊಡ್ತಾರಾ ವಿಷ ಕೊಡ್ತಾರ ಕೊಡ್ಲಿ ಎಂದ ನಿಖಿಲ್ ಕುಮಾರಸ್ವಾಮಿ

By Sathish Kumar KH  |  First Published Mar 14, 2023, 4:09 PM IST

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ರೈತಸಂಘ ಸೇರಿ ನನಗೆ ಚಕ್ರವ್ಯೂಹ ಸಿದ್ಧಪಡಿಸಿ ಸೋಲಿಸಿದರು. ರಾಮನಗರದಲ್ಲೂ ಬಿಜೆಪಿ, ಕಾಂಗ್ರೆಸ್ ಒಗ್ಗಟ್ಟಾಗಿ ರಾಜಕೀಯ ಲೆಕ್ಕಾಚಾರ ಮಾಡ್ತಿದ್ದಾರೆ.


ರಾಮನಗರ (ಮಾ.14): ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ರೈತಸಂಘ ಸೇರಿ ನನಗೆ ಚಕ್ರವ್ಯೂಹ ಸಿದ್ಧಪಡಿಸಿ ಸೋಲಿಸಿದರು. ರಾಮನಗರದಲ್ಲೂ ಬಿಜೆಪಿ, ಕಾಂಗ್ರೆಸ್ ಒಗ್ಗಟ್ಟಾಗಿ ರಾಜಕೀಯ ಲೆಕ್ಕಾಚಾರ ಮಾಡ್ತಿದ್ದಾರೆ. ಜನ ನನಗೆ ಹಾಲು ಕೊಡುತ್ತಾರಾ ಅಥವಾ ವಿಷ ಕೊಡುತ್ತಾರಾ ಅದು ಅವರಿಗೆ ಬಿಟ್ಟಿದ್ದು ಎಂದು ರಾಮನಗರ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸಂಸದ ಡಿ.ಕೆ. ಸುರೇಶ್ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು, ಎಲ್ಲಿ ಬೇಕಾದರೂ ಸ್ಪರ್ಧೆ ಮಾಡಬಹುದು. ಸ್ಪರ್ಧೆ ಮಾಡುವ ಅಭ್ಯರ್ಥಿಗಳ ಬಗ್ಗೆ ಅವರ ಪಕ್ಷದ ಹೈಕಮಾಂಡ್ ಹಾಗೂ ಪ್ರಮುಖ ನಾಯಕರು ತೀರ್ಮಾನ ಮಾಡುತ್ತಾರೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ನನಗೆ ಅವಕಾಶ ಕೊಟ್ಟಿದ್ದಾರೆ‌. ನನ್ನ ಪಕ್ಷದ ಬಗ್ಗೆ ನಾನು ಮಾತನಾಡಬಹುದು. ಆದರೆ ಬೇರೆ ಪಕ್ಷದ ಬಗ್ಗೆ ಮಾತನಾಡುವ ಸೂಕ್ತ ವ್ಯಕ್ತಿ ನಾನಲ್ಲ. ಸೋಲಿಸೋದು, ಟಾರ್ಗೆಟ್ ಮಾಡೋದು ನಮ್ಮ ಕೈಯಲ್ಲಿಲ್ಲ ಎಂದು ಹೇಳಿದ್ದಾರೆ. 

Tap to resize

Latest Videos

ರಣಾಂಗಣವಾದ ರಾಮನಗರ: ನಿಖಿಲ್‌ ಕುಮಾರಸ್ವಾಮಿಗೆ ಠಕ್ಕರ್‌ ಕೊಡಲು ಡಿ.ಕೆ. ಸುರೇಶ್ ಕಣಕ್ಕೆ?

5 ಲಕ್ಷ ಮತಗಳನ್ನು ಪಡೆದು ಟೆಕ್ನಿಕಲ್‌ ಆಗಿ ಸೋತಿದ್ದೆನು: ಲೋಕಸಭಾ ಚುನಾವಣೆಯ ವೇಳೆ ಮಂಡ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ರೈತಸಂಘಗಳು ಸೇರಿಕೊಂಡು ಚಕ್ರವ್ಯೂಹ ರಚಿಸಿ ನನ್ನನ್ನು ಸೋಲಿಸಿದ್ದರು. ಅಲ್ಲಿ ನಾನು ಟೆಕ್ನಿಕಲ್ ಆಗಿ ಸೋತಿದ್ದೇನೆ. ಆದರೆ, ಮೂವರು ಪ್ರಬಲರ ಪೈಪೋಟಿಯ ನಡುವೆಯೂ 5 ಲಕ್ಷಕ್ಕೂ ಅಧಿಕ ಮತ ಪಡೆದಿದ್ದೆನು. ರಾಮನಗರದಲ್ಲಿಯೂ ಕೂಡಾ ಅದೇ ರೀತಿಯ ಸಂಚು ನಡೆಯುತ್ತಿದೆ. ರಾಮನಗರದಲ್ಲಿ ನನ್ನನ್ನು ಸೋಲಿಸುವ ಉದ್ದೇಶದಿಂದಲೇ ಬಿಜೆಪಿ ಹಾಗೂ ಕಾಂಗ್ರೆಸ್ ಒಗ್ಗಟ್ಟಾಗಿ ರಾಜಕೀಯ ಲೆಕ್ಕಾಚಾರ ಮಾಡಿಕೊಂಡಿವೆ. ಆದರೆ ಅಂತಿಮ ತೀರ್ಮಾನ ಮತದಾರರು‌ ಮಾಡ್ತಾರೆ ಎಂದು ತಿಳಿಸಿದರು. 

1994ರಿಂದ ಸತತವಾಗಿ ಗೆದ್ದಿದ್ದೇವೆ:  ರಾಮನಗರದಲ್ಲಿ 1994ರಲ್ಲಿ ಕ್ಷೇತ್ರದ ಜನತೆ ದೇವೇಗೌಡರನ್ನ ಆಯ್ಕೆ ಮಾಡಿದ್ದರು. 2004ರಲ್ಲಿ ಕುಮಾರಸ್ವಾಮಿ ಅವರನ್ನ ಆಯ್ಕೆ ಮಾಡಿದ್ದರು. ಅಲ್ಲಿಂದ ಸತತವಾಗಿ ನಾವು ರಾಮನಗರದಲ್ಲಿ ಗೆಲುವು ಸಾಧಿಸಿದ್ದೇವೆ. ಇದರಲ್ಲಿ ಪ್ರಮುಖವಾಗಿ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯನ್ನು ಮಾಡಿದ್ದಾರೆ. ಇಲ್ಲಿನ ಅಭಿವೃದ್ಧಿ ವಿಚಾರದಲ್ಲಿ ನಾವು ಕ್ಷೇತ್ರದ ಜನರಿಗೆ ಅನ್ಯಾಯ ಮಾಡಿಲ್ಲ. ನಮ್ಮ ಸೇವೆಯನ್ನ ಜನ ಗುರ್ತಿಸಿದ್ದಾರೆ. ಜನ ನನಗೆ ಹಾಲು ಕೊಡುತ್ತಾರಾ ಅಥವಾ ವಿಷ ಕೊಡ್ತಾರಾ ಅದು ಅವರಿಗೆ ಬಿಟ್ಟಿದ್ದು ಎಂದು ರಾಮನಗರ ಜೆಡಿಎಸ್‌ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.

Karnataka election: ರಾಮನಗರದಲ್ಲಿ ನಿಖಿಲ್‌ ವಿರುದ್ಧ ಡಿಕೆಸು ಸ್ಪರ್ಧೆ: ಎಚ್‌ಡಿಕೆಗೆ ಹೊಸ ತಲೆನೋವು ತಂದಿಟ್ಟ ಡಿಕೆಶಿ

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ರಾಮನಗರದಿಂದ ಡಿ.ಕೆ. ಸುರೇಶ್ ಸ್ಪರ್ಧೆಗೆ ಹೈ ಕಮಾಂಡ್ ಸೂಚನೆ ವಿಚಾರವನ್ನು ತಳ್ಳಿ ಹಾಕುವುದಕ್ಕೆ ಆಗುವುದಿಲ್ಲ. ಈ ಬಗ್ಗೆ ಈಗಾಗಲೇ ಪ್ರಪೋಸಲ್ ಕೂಡ ಇದೆ. ಅವರನ್ನು ನಿಲ್ಲಿಸಬೇಕು ಎಂಬ ಸಣ್ಣ ಸಂದೇಶ ಇದೆ. ಆದರೆ, ಈ ಬಗ್ಗೆ ನಾನು ಯಾರ ಬಳಿಯು ಮಾತನಾಡಿಲ್ಲ. ಸುರೇಶ್ ಬಳಿ ಸೇರಿ ಕಾರ್ಯಕರ್ತರ ಬಳಿಯೂ ಈ ಬಗ್ಗೆ ಮಾತನಾಡಿಲ್ಲ. ಇದು ಮೇಜರ್ ಡಿಸಿಷನ್ ಆಲೋಚನೆ ಮಾಡುತ್ತೇವೆ. ನಾನೇ ಪಿಸಿಸಿ ಪ್ರೆಸಿಡೆಂಟ್ ಕೆಲ ಪ್ರಪೋಸಲ್ ಇದೆ. ನಾನು ಇಲ್ಲ ಎನ್ನುವುದಿಲ್ಲ. ರಾಮನಗರದ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರು ಬಹಳ ದಿನದಿಂದ ಒತ್ತಾಯ ಮಾಡುತ್ತಿದ್ದಾರೆ. ನನಗೆ ಬೈ ಎಲೆಕ್ಷನ್ ಮಾಡುವುದು ಇಷ್ಟ ಇಲ್ಲ. ಈಗ ಪಾರ್ಟಿ ಕೂಡ ಈ ವಿಚಾರವನ್ನು ಹೇಳುತ್ತಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಈ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ ಎಂದು ಹೇಳಿದರು.

click me!