ಚುನಾವಣೆ ಸಮೀಪಿಸುತ್ತಿದ್ದಂತೆ ಶುರುವಾದ ರಾಜಕೀಯ ಗುದ್ದಾಟ..!

By Girish Goudar  |  First Published Oct 27, 2022, 6:17 AM IST

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪ್ರಯತ್ನಗಳಾಗಿದ್ದು, ಘಟಾನುಘಟಿ ನಾಯಕರನ್ನು ಹೊಂದಿರುವ ಕಾಂಗ್ರೆಸ್ ಜಿಲ್ಲೆಯಲ್ಲಿ ಇನ್ನೂ ತನ್ನ ವರಸೆ ಆರಂಭಿಸಿಲ್ಲ. 


ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ(ಅ.27): ಚುನಾವಣೆ ಸಮೀಪಿಸುತ್ತಿದ್ದಂತೆ ಕೋಲಾರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರತೊಡಗಿವೆ. ಜೆಡಿಎಸ್ ಒಂದೆಡೆ ಪಂಚರತ್ನ ಯಾತ್ರೆಯನ್ನ ಜಿಲ್ಲೆಯಿಂದಲೇ ಆರಂಭಿಸುವ ಮೂಲಕ ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ಮೇಲೆ ಕಣ್ಣಿಟ್ಟಿದ್ದರೆ ಇತ್ತ ಆಡಳಿತಾರೂಢ ಬಿಜೆಪಿ ಕೂಡ ಜಿಲ್ಲೆಯಲ್ಲಿ ಕೆಂಪೇಗೌಡ ಯಾತ್ರೆ ಮೂಲಕ ರಾಜಕೀಯ ಆರಂಭಿಸಿದೆ. 

Latest Videos

undefined

ಹೌದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಂದ ಒಟ್ಟು ಹನ್ನೊಂದು ವಿಧಾನಸಭಾ ಕ್ಷೇತಗಳಿವೆ. ಈ ಕ್ಷೇತ್ರಗಳ ಮೇಲೆ ತಮ್ಮ ಕಣ್ಣು ನೆಟ್ಟಿರುವ ರಾಜಕೀಯ ಪಕ್ಷಗಳೀಗ ಜಿಲ್ಲೆಯಲ್ಲಿ ಯಾತ್ರೆಗಳ ಆಯೋಜನೆ‌ ಮಾಡಿ  ರಾಜಕೀಯ ಆರಂಭಿಸಿವೆ. ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಹಿಡಿತಹೊಂದಿರುವ ಜೆಡಿಎಸ್ ಪಕ್ಷ ಸದ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ‌ ಕ್ಷೇತ್ರದಿಂದ ಶ್ರೀನಿವಾಸಗೌಡ ಮಾತ್ರ‌ ಗೆಲುವು ಕಂಡಿದ್ದರು, ಅವರೂ ಕೂಡ ಈಗ ಕಾಂಗ್ರೆಸ್ ಪಾಲಾಗಿದ್ದಾರೆ. ಕಳೆದ‌ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವಿನ ಸಮೀಪದಲ್ಲಿ ಜೆಡಿಎಸ್ ಎಡವಿತ್ತು.ಹೀಗಾಗಿ ಈ ಬಾರಿ ಶತಾಯಗತಾಯ ಕ್ಷೇತ್ರಗಳನ್ನು ಗೆಲವು ಕಾಣಲು ಹವಣಿಸುತ್ತಿದೆ. ಹೀಗಾಗಿ ರಾಜ್ಯದ ಮೂಡಲ ಬಾಗಿಲು ಎಂತಲೇ ಹೆಸರಾದ ಮುಳಬಾಗಿಲು ತಾಲೂಕಿನಿಂದ ತನ್ನ ಪಂಚರತ್ನ ಯಾತ್ರೆ ಆರಂಭಿಸುತ್ತಿದೆ. ನವಂಬರ್ ಒಂದ ರಿಂದ ಕುರುಡುಮಲೆ ವಿನಾಯಕನ ಪೂಜೆ ಮುಖಾಂತರ ಈ ಯಾತ್ರೆಯನ್ನು ಆರಂಭಿಸಲಿದೆ. ಜೆಡಿಎಸ್ ವರಿಷ್ಠ ಮಾಜಿ ಪ್ರದಾನಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಿಎಂ ಇಬ್ರಾಹಿಂ ಸೇರಿದಂತೆ ಹಲವು ನಾಯಕರು ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಲವು ಗ್ರಾಮಗಳಲ್ಲಿ ಗ್ರಾಮವಾಸ್ಥವ್ಯವನ್ನೂ ಸಹ ಹೆಚ್‌ಡಿಕೆ ಮಾಡಲಿದ್ದಾರೆ. 

ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುತ್ತೆ: ಸಿ.ಎಂ.ಇಬ್ರಾಹಿಂ ಆರೋಪ

ಇನ್ನೂ ಆಡಳಿತಾರೂಡ ಬಿಜೆಪಿ ಪಕ್ಷ ಈಗ ಜಿಲ್ಲೆಯಲ್ಲಿ ತನ್ನ ಖಾತೆ ತೆರೆಯಲು ಇನ್ನಿಲ್ಲದ ಕಸರತ್ತು ಮುಂದುವರಸಿದೆ. ಕೋಲಾರ ಸಂಸದ ಮುನಿಸ್ವಾಮಿ ಇಲ್ಲಿಯ ಸಂಸದರೆನ್ನೋದು ಬಿಟ್ಟರೆ ಇನ್ನಾವುದೇ ಶಾಸಕರು ಇಲ್ಲಿ ಬಿಜೆಪಿಯಿಂದ ಗೆದ್ದಿಲ್ಲ.ಆದ್ರೆ ಮಾಜಿ ಶಾಸಕ ವರ್ತೂರು ಪ್ರಕಾಶ್, ಮಾಲೂರು ಮಾಜಿ ಶಾಸಕ ಕೋಡಿಹಳ್ಳಿ ಮಂಜುನಾಥ್ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರಿಸಿಕೊಂಡು ಪಕ್ಷವನ್ನು ಕೋಲಾರ ಜಿಲ್ಲೆಯಲ್ಲಿ ಬಲಪಡಿಸಲು ಪ್ರಯತ್ನಿಸಿದೆ. ಕೋಲಾರ ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಂದ ಜಿಲ್ಲೆಗಿರುವ ಬಿಜೆಪಿ ಶಾಸಕರೆಂದರೆ ಅದು ಸಚಿವ ಸುಧಾಕರ್ ಮಾತ್ರ. ಹೀಗಾಗಿ ಬಿಜೆಪಿ ಈ ಭಾರಿ ಇವರಡು ಜಿಲ್ಲೆಗಳಿಗೆ ತನ್ನ ಪ್ರಭಲ ಪೈಪೋಟಿಯನ್ನು ನೀಡುವುದು ಅನಿವಾರ್ಯ. ಹಾಗಾಗಿ ಜಿಲ್ಲೆಯಲ್ಲಿ ಮತದಾರ ಓಲೈಕೆಯನ್ನು ಮತ್ತು ತನ್ನ ರಾಜಕೀಯ ಪ್ರಯತ್ನಗಳನ್ನು ಮುಂದುವರೆಸಿದೆ.ಇದೇ ಪ್ರಯತ್ನಗಳ ಅಂಗವಾಗಿ ಜಿಲ್ಲೆಯಾದ್ಯಂತ ಕೆಂಪೇಗೌಡ ಯಾತ್ರೆಯನ್ನ ಹಮ್ಮಿಕೊಂಡಿದೆ.

ಇದೆಲ್ಲ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪ್ರಯತ್ನಗಳಾಗಿದ್ದು, ಘಟಾನುಘಟಿ ನಾಯಕರನ್ನು ಹೊಂದಿರುವ ಕಾಂಗ್ರೆಸ್ ಜಿಲ್ಲೆಯಲ್ಲಿ ಇನ್ನೂ ತನ್ನ ವರಸೆ ಆರಂಭಿಸಿಲ್ಲ. ಒಟ್ಟಿನಲ್ಲಿ ಚುನಾವಣೆಗಳಿನ್ನು ಕೆಲವೇ ತಿಂಗಳುಗಳಿದ್ದು ಈ ಭಾರಿ ವಿಧಾನಪತಿಷತ್ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿರುವ ಎಲ್ಲ‌ ಲಕ್ಷಣಗಳು ಗೋಚರಿಸುತ್ತಿದೆ.
 

click me!