ಪೊಲೀಸರ ಥರ್ಡ್ ಡಿಗ್ರಿ ಶಿಕ್ಷೆಗೆ ಗಂಭೀರ ಗಾಯಗೊಂಡ ಹಿಂದು ಕಾರ್ಯಕರ್ತರು : ಶಾಸಕ ಹರೀಶ್ ಪೂಂಜಾ, ಪುತ್ತಿಲ ಆಸ್ಪತ್ರೆಗೆ ಭೇಟಿ

By Ravi Janekal  |  First Published May 18, 2023, 8:48 AM IST

ಬಿಜೆಪಿ ನಾಯಕರ ಫೋಟೊಗಳಿಗೆ ಚಪ್ಪಲಿಹಾರ ಹಾಕಿದರೆಂಬ ಕಾರಣಕ್ಕೆ ಹಿಂದು ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು, ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಟ್ಟು ಅಮಾನವಿಯವಾಗಿ ವರ್ತಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಪುತ್ತೂರು (ಮೇ.18) ಬಿಜೆಪಿ ನಾಯಕರ ಫೋಟೊಗಳಿಗೆ ಚಪ್ಪಲಿಹಾರ ಹಾಕಿದರೆಂಬ ಕಾರಣಕ್ಕೆ ಹಿಂದು ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು, ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಟ್ಟು ಅಮಾನವಿಯವಾಗಿ ವರ್ತಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಗೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಗಾಯಾಳು ಹಿಂದು ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಿಂದು ಕಾರ್ಯಕರ್ತರ ಮೇಲಿನ ಪೊಲೀಸರ ದೌರ್ಜನ್ಯ ಖಂಡಿಸುತ್ತೇನೆ. ಯುವಕರು ಮಾಡಿದ ತಪ್ಪಿಗೆ ಪೊಲೀಸರು ಈ ರೀತಿ ವರ್ತಿಸಿರುವುದು ಅಕ್ಷಮ್ಯ ಅಪರಾಧ. ಕಾಂಗ್ರೆಸ್ ಸರ್ಕಾರ ಬಂದ ಬೆನ್ನಲ್ಲೇ ಪೊಲೀಸ್ ಇಲಾಖೆ ಮಾನಸಿಕತೆ ಹೇಗಿದೆ ಅನ್ನೋದಕ್ಕೆ ಇದು ಸ್ಯಾಂಪಲ್ ಎಂದರು.

Tap to resize

Latest Videos

ಹಿಂದೂ ಕಾರ್ಯಕರ್ತರ ಚರ್ಮ ಸುಲಿದ ಪೊಲೀಸರಿಗೆ ಶಿಕ್ಷೆ ಗ್ಯಾರಂಟಿ: ಇಲಾಖಾ ತನಿಖೆಗೆ ಆದೇಶ

ಹಿಂದೂ‌ ಸಮಾಜದ ಯುವಕರಿಗೆ ದೌರ್ಜನ್ಯ ಆದ್ರೆ ಶಾಸಕನಾಗಿ ಹೋರಾಟ ಮಾಡ್ತೇನೆ. ಯಾವ ಕಾರಣಕ್ಕೂ ಹಿಂದೂ ಸಮಾಜದ ಕಾರ್ಯಕರ್ತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಈಗಾಗಲೇ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿರುವ ಪೊಲಿಸರ ವಿರುದ್ಧ ಶಿಸ್ತು ಕ್ರಮಕ್ಕೆ ಎಸ್ಪಿಗೆ ಹೇಳಿದ್ದೇನೆ. ಸಂಜೆಯೊಳಗೆ ಕ್ರಮ ತೆಗೆದುಕೊಳ್ಳುವ ವಿಶ್ವಾಸ ಇದೆ ಎಂದರು. 

ಒಂದು ವೇಳೆ ಕ್ರಮ ಇಲ್ಲದಿದ್ದರೆ ಬಿಜೆಪಿ, ಹಿಂದೂ ಸಮಾಜ ಹಾಗೂ ಪರಿವಾರ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ಮಾಡಲಿವೆ ಎಂದು ಎಚ್ಚರಿಕೆ ನೀಡಿದರು. ಏಟು ತಿಂದ ಯುವಕರು ಹೊಡೆದ ಪೊಲೀಸರ ಹೆಸರನ್ನು ಪೊಲೀಸ್ ವರದಿಯಲ್ಲಿ ಉಲ್ಲೇಖ ಮಾಡ್ತಾರೆ. ಈ ಮೂಲಕ ಸತ್ಯಾಸತ್ಯತೆ ಹೊರಗೆ ಬರಲಿದೆ ಎಂದರು.

ಕಾರ್ಯಕರ್ತರ ಮೇಲೆ ಪೊಲಿಸ್ ದೌರ್ಜನ್ಯಕ್ಕೆ ಅರುಣ್ ಪುತ್ತಿಲ ಆಕ್ರೋಶ

ರಕ್ಷಣೆ ಕೊಡಬೇಕಾದ ಪೊಲೀಸರು ಇನ್ನೊಂದು ಮುಖ ತೋರಿಸಿದ್ದಾರೆ. ಹಿಂದು ಕಾರ್ಯಕರ್ತರ ಮೇಲೆ ಪೊಲಿಸ್ ದೌರ್ಜನ್ಯಕ್ಕೆ ಅರುಣ್ ಪುತ್ತಿಲ  ಆಕ್ರೋಶ ವ್ಯಕ್ತಪಡಿಸಿದರು 

ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ ಪೊಲೀಸರು ಮಾಡಿದ್ದಾರೆ. ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆ ಚಿಕಿತ್ಸೆ ಪಡೀತಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ಕೆಲವೇ ಗಂಟೆಗಳಲ್ಲಿ ಹಿಂದೂ ಸಮಾಜದ ಮೇಲೆ ಹಲ್ಲೆಗಳು ನಡೀತಿವೆ. ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಈ ಪ್ರಕರಣದ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥ ಪೊಲೀಸರ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

 

Puttur News: ನಳಿನ್-ಡಿವಿಎಸ್ ಬ್ಯಾನರ್‌ಗ ಚಪ್ಪಲಿಹಾರ ಹಾಕಿದ ಪ್ರಕರಣ ಇಬ್ಬರ ಬಂಧನ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ(harish poonja belthangady MLA) ಬಂದು ಯುವಕರ ಯೋಗ ಕ್ಷೇಮ ವಿಚಾರಿಸಿದ್ದಾರೆ. ಅದೇ ರೀತಿ ಪುತ್ತೂರಿನ ಬಿಜೆಪಿ ಪದಾಧಿಕಾರಿಗಳು ಕೂಡ ಕಾರ್ಯಕರ್ತರ ಪರ ನಿಲ್ಲಬೇಕು ಎಂದರು.

click me!