ದೇಶದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದಲ್ಲಿ ಶೇ.75ರಷ್ಟು ಭಯೋತ್ಪಾದನೆ ಕಡಿಮೆಯಾಗಿದೆ. ಮೋದಿ ಅವರ ಸಂಕಲ್ಪವೇ ಜೀರೋ ಭಯೋತ್ಪಾದನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಧಾರವಾಡ (ಫೆ.17): ದೇಶದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ದೇಶದಲ್ಲಿ ಶೇ.75ರಷ್ಟು ಭಯೋತ್ಪಾದನೆ ಕಡಿಮೆಯಾಗಿದೆ. ಮೋದಿ ಅವರ ಸಂಕಲ್ಪವೇ ಜೀರೋ ಭಯೋತ್ಪಾದನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಫುಲ್ವಾಮಾ ದಾಳಿಗೆ ಐದು ವರ್ಷಗಳಾದ ಹಿನ್ನೆಲೆಯಲ್ಲಿ ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪಕ್ಕೆ ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸಿದ ಅವರು, 2014ರ ಮೊದಲು ದೇಶದ ಅನೇಕ ಕಡೆ ಬಾಂಬ್ ಸ್ಫೋಟಗಳು ಆಗುತಿದ್ದವು. ಅವು ಈಗಿಲ್ಲ. ಸದ್ಯ ದೇಶ ಸುರಕ್ಷಿತವಾಗಿದ್ದು, ಅಭಿವೃದ್ಧಿಯಾಗುತ್ತಿದೆ. ದೇಶವು ಸಮೃದ್ಧಿ ಹೊಂದುತ್ತಿದೆ ಎಂದರು.
ಬಿಜೆಪಿಯೇ ದೇಶ ಒಡೆಯಿತು ಎನ್ನುವ ವೀರಪ್ಪ ಮೊಯ್ಲಿ ಆರೋಪ ವಿಚಾರವಾಗಿ ಮಾತನಾಡಿದ ಜೋಶಿ, ಮೊಯ್ಲಿ ಅವರಿಗೆ ಇತಿಹಾಸ ಗೊತ್ತಿಲ್ಲವೇ? ಅಥವಾ ಅವರು ಸೋಲಿನ ಹತಾಶೆಯಲ್ಲಿ ಹೇಳುತಿದ್ದಾರೆಯೋ ತಿಳಿಯುತ್ತಿಲ್ಲ. ನಾಲ್ಕು ರಾಜ್ಯದಲ್ಲಿ ಅವರು ಸೋತಿದ್ದಾರೆ. ಇದರಿಂದಾಗಿ ಅಪ್ರಬುದ್ಧರಾಗಿ ಮಾತನಾಡುತಿದ್ದಾರೆ. ಮೊಯ್ಲಿ ಅವರು ಪುಸ್ತಕ ಬರೆಯುವವರು. ಇದನ್ನು ಮಾತನಾಡಿದ್ದು ಆಶ್ಚರ್ಯ ತಂದಿದ್ದು, ಅವರು ಇನ್ನೂ ಚೆನ್ನಾಗಿ ಓದಿಕೊಳ್ಳಬೇಕು ಎಂದು ತಿರಗೇಟು ನೀಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿ ಇರಲಿಲ್ಲ ಎಂದು ಕಾಂಗ್ರೆಸ್ಸಿನವರೇ ಹೇಳಿದ್ದಾರೆ.
ಶೀಘ್ರವೇ ಸಿದ್ದು ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನ: ಮಾಜಿ ಸಚಿವ ಮುರಗೇಶ್ ನಿರಾಣಿ
ಆದರೆ, ದೇಶ ಇಬ್ಭಾಗ ಮಾಡಿದ್ದು ಬಿಜೆಪಿ ಎನ್ನುತ್ತಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮಹಾಸಭಾ ಇರಲಿಲ್ಲ ಎನ್ನುತ್ತಾರೆ. ಇದೀಗ ಮಹಾಸಭಾ ದೇಶ ಒಡೆಯಿತು ಎನ್ನುತ್ತಾರೆ. ಪ್ರತ್ಯೇಕ ರಾಷ್ಟ್ರ ಮಾಡುವುದಾದರೆ, ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಜನರು ಹೋಗಬೇಕು ಎಂದಿದ್ದು ಗೊತ್ತಿದೆ. ಅದನ್ನು ಹೇಳಿದ್ದು ಹಿಂದೂ ಮಹಾಸಭಾ. ಅದನ್ನು ಬಿಟ್ಟರೆ ಹಿಂದೂ ಮಹಾಸಭಾ ದೇಶ ವಿಭಜನೆಯ ಮಾತು ಹೇಳಿಲ್ಲ. ಇದು ಮೊಯ್ಲಿ ಅವರ ತಪ್ಪು ಕಲ್ಪನೆ ಎಂದರು. ಕತಾರ್‌ನಲ್ಲಿ ರಾಮಮಂದಿರ ನಿರ್ಮಾಣವಾಗಿದ್ದು, ಭಾರತ ದೇಶ ಹಾಗೂ ಸಂಸ್ಕೃತಿಯ ಮಹತ್ವ ತೋರಿಸುತ್ತದೆ. ಮೋದಿ ಹೇಳಿದ್ದಕ್ಕೆ ಅಲ್ಲಿಯ ರಾಜ ಒಪ್ಪಿ, ಜಾಗ ಕೊಟ್ಟರು. ರಾಮನ ಆರಾಧನೆಗೆ ಅವಕಾಶ ಕೊಟ್ಟರು ಎಂದರು.
ಮಹದಾಯಿಗೆ ಕೇಂದ್ರ ಅನುಮತಿ ನಿರಾಕರಿಸಿಲ್ಲ: ಮಹದಾಯಿ ಯೋಜನೆಗೆ ಕೇಂದ್ರ ಅರಣ್ಯ ಸಚಿವರು ಅನುಮತಿ ನಿರಾಕರಿಸಿಲ್ಲ. ಮಹದಾಯಿ ಯೋಜನೆ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವುದರಿಂದ ಈ ವಿಚಾರದಲ್ಲಿ ತರಾತುರಿ ಮಾಡುವಂತಿಲ್ಲ. ನಾವು ತರಾತುರಿ ಹೆಜ್ಜೆ ಇಟ್ಟರೆ ಕೋರ್ಟ್‌ನಿಂದ ತಡೆಯಾಜ್ಞೆ ಬರುವ ಸಾಧ್ಯತೆ ಇದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಕೊಬ್ಬರಿ ಖರೀದಿಯಲ್ಲಿ ಅಕ್ರಮ: ತನಿಖೆಗೆ ಸಂಸದ ಪ್ರಜ್ವಲ್ ರೇವಣ್ಣ ಆಗ್ರಹ
ಸುದ್ದಿಗಾರರ ಜತೆಗೆ ಮಾತನಾಡಿ, ಮಹದಾಯಿ ವಿಚಾರದಲ್ಲಿ ಜಾಗರೂಕತೆಯಿಂದ ಹೆಜ್ಜೆ ಇಡಬೇಕಿದೆ. ಮಹದಾಯಿಗೆ ಸಂಬಂಧಿಸಿ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಪ್ರಾಮಾಣಿಕವಾಗಿ ಮಾಡಿದೆ. ತನ್ನ ಕೈಯಲ್ಲಿದ್ದ ಕಡತವನ್ನು ಕ್ಲಿಯರ್ ಮಾಡಿದೆ. ಆದರೆ, ಹುಲಿ ಕಾರಿಡಾರ್ ಮತ್ತು ದಟ್ಟ ಅರಣ್ಯ ಇರುವುದರಿಂದ ಸುಪ್ರೀಂ ಕೋರ್ಟ್ ಸಮರ್ಪಕ ವರದಿ, ಮಾಹಿತಿ ಕೇಳಿದೆ. ಹೀಗಾಗಿ ಹದ್ದಿನ ಕಣ್ಣಿಟ್ಟು, ಕೂಲಂಕಷ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕೆ ನಾವು ಮುಂದಾಗುತ್ತಿದ್ದೇವೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.