ಮೋದಿಜೀ, ಇಂದು ಬರ ಪರಿಹಾರ ಬಗ್ಗೆ ಮಾತಾಡಿ: ಸಿದ್ದರಾಮಯ್ಯ ಸವಾಲು

By Kannadaprabha NewsFirst Published Apr 14, 2024, 11:18 AM IST
Highlights

ಈ ಬಾರಿಯಾದರೂ ಮತದಾರರಿಗೆ ಕಳೆದ 10 ವರ್ಷಗಳ ತಮ್ಮ ಸಾಧನೆಯನ್ನು ತಿಳಿಸಬೇಕು. ಅದನ್ನು ಬಿಟ್ಟು ಹಿಂದು-ಮುಸ್ಲಿಂ, ಭಾರತ-ಪಾಕಿಸ್ತಾನ, ಮಂದಿರ-ಮಸೀದಿ ಎಂಬ ಹಳೇ ಟೇಪ್ ರೆಕಾರ್ಡರ್ ಪ್ಲೇ ಮಾಡಬೇಡಿ. ನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲಿನ ಆರೋಪಗಳಿಗೆ ಉತ್ತರ ನೀಡಬೇಕು. ಚುನಾವಣಾ ಪ್ರಣಾಳಿಕೆಯನ್ನು ಇನ್ನೂ ಬಿಡುಗಡೆ ಮಾಡದೇ ಇರುವುದು ಮತದಾರರ ಬಗೆಗಿನ ನಿಮ್ಮ ನಿರ್ಲಕ್ಷ್ಯ, ಪ್ರಜಾಪ್ರಭುತ್ವದ ಬಗ್ಗೆ ನಿಮ್ಮ ತಿರಸ್ಕಾರ ಅಲ್ಲವೇ ಎಂದು ಪ್ರಧಾನಿ ಮೋದಿ ಅವರಿಗೆ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ 

ಬೆಂಗಳೂರು(ಏ.14):  ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಭಾನುವಾರ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರ ಬರಗಾಲದಲ್ಲಿ ನೆರವಾಗದಿರುವುದು, ತೆರಿಗೆ ಪಾಲನ್ನು ನೀಡದಿರುವುದು, ವಿಶೇಷ ನೆರವಿನ ಭರವಸೆ ಈಡೇರಿಸದ ಬಗ್ಗೆ ಭಾಷಣದಲ್ಲಿ ಉತ್ತರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಪತ್ರಿಕಾ ಹೇಳಿಕೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿರುವ ಸಿದ್ದರಾಮಯ್ಯ, ಬರ ಬಂದಾಗ ಬಾರದ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಬರುವುದನ್ನು ತಪ್ಪಿಸುವುದಿಲ್ಲ. ಅವರಿಗೆ ಪ್ರಶ್ನೆ ಕೇಳುವ ಸಲುವಾಗಿಯೇ ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯಕ್ಕೆ ಎದುರಾಗಿರುವ ಬರಗಾಲದ ಕಷ್ಟಗಳಿಗೆ ಮೋದಿ ನೆರವಾಗುತ್ತಾರಾ? ವಿಶೇಷ ನೆರವು ನೀಡುವ ಭರವಸೆಯನ್ನು ಈಡೇರಿಸುತ್ತಾರಾ ಎಂಬ ಪ್ರಶ್ನೆಗಳಿಗೆ ಮೋದಿ ಚುನಾವಣಾ ಪ್ರಚಾರ ಭಾಷಣದಲ್ಲಿ ಉತ್ತರಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಲೋಕಸಭೇಲಿ ಕಾವೇರಿ ಬಗ್ಗೆ ಮಾತನಾಡಲು ಎನ್‌ಡಿಎ ಗೆಲ್ಲಬೇಕು: ದೇವೇಗೌಡ

ಈ ಬಾರಿಯಾದರೂ ಮತದಾರರಿಗೆ ಕಳೆದ 10 ವರ್ಷಗಳ ತಮ್ಮ ಸಾಧನೆಯನ್ನು ತಿಳಿಸಬೇಕು. ಅದನ್ನು ಬಿಟ್ಟು ಹಿಂದು-ಮುಸ್ಲಿಂ, ಭಾರತ-ಪಾಕಿಸ್ತಾನ, ಮಂದಿರ-ಮಸೀದಿ ಎಂಬ ಹಳೇ ಟೇಪ್ ರೆಕಾರ್ಡರ್ ಪ್ಲೇ ಮಾಡಬೇಡಿ. ನಿರುದ್ಯೋಗ, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮೇಲಿನ ಆರೋಪಗಳಿಗೆ ಉತ್ತರ ನೀಡಬೇಕು. ಚುನಾವಣಾ ಪ್ರಣಾಳಿಕೆಯನ್ನು ಇನ್ನೂ ಬಿಡುಗಡೆ ಮಾಡದೇ ಇರುವುದು ಮತದಾರರ ಬಗೆಗಿನ ನಿಮ್ಮ ನಿರ್ಲಕ್ಷ್ಯ, ಪ್ರಜಾಪ್ರಭುತ್ವದ ಬಗ್ಗೆ ನಿಮ್ಮ ತಿರಸ್ಕಾರ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ನೆಲ, ಜಲ, ಭಾಷೆ ಬಗ್ಗೆ ಮಾತನಾಡಿದರೆ ದೇಶದ್ರೋಹದ ಪಟ್ಟ ಕಟ್ಟುತ್ತೀರಿ. ಕನ್ನಡದ ಮೇಲೆ ಹಿಂದಿ ಹೇರುವ ಹುನ್ನಾರವನ್ನು ಪ್ರತಿಭಟಿಸಿದರೆ, ಕನ್ನಡಕ್ಕೆ ಧ್ವಜ ಕೇಳಿದರೆ, ನಮ್ಮ ರಾಜ್ಯದ ಮಕ್ಕಳಿಗೆ ಮಾತೃಭಾಷೆಯಲ್ಲಿ ಕೇಂದ್ರ ಸರ್ಕಾರದ ಸ್ವಾಮ್ಯದ ಸಂಸ್ಥೆಗಳ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶ ಕೇಳಿದರೆ ದೇಶದ್ರೋಹ ಎನ್ನುತ್ತೀರಿ. ವಿಶ್ವ ಗುರು ಎಂದು ಕರೆಸಿಕೊಳ್ಳುವ ನೀವು ವಿಶ್ವ ಮಾನವ ರಾಗುವುದು ಯಾವಾಗ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರು ಮತ್ತು ದಕ್ಷಿಣ ಕನ್ನಡ ಕ್ಷೇತ್ರಗಳಲ್ಲಿ ಚುನಾ ವಣಾ ಪ್ರಚಾರ ಭಾಷಣ ಮಾಡುತ್ತಿದ್ದೀರಿ. ಆದರೆ, ಆ ಎರಡೂ ಕ್ಷೇತ್ರಗಳಲ್ಲಿ ನಿಮ್ಮ ಇಬ್ಬರು ಶಿಷ್ಯರಿಗೆ ಟಿಕೆಟ್ ನಿರಾಕರಿಸಿ ಬೇರೆಯವರಿಗೆ ನೀಡಿದ್ದೀರಿ. ಈ ಟಿಕೆಟ್ ನಿರಾಕರಣೆಯ ನಿಜವಾದ ಕಾರಣದ ಬಗ್ಗೆ ನೀವೇ ಸ್ಪಷ್ಟ ಪಡಿಸಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

click me!