ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡ ತಯಾರಾಗಿದ್ದು, ರಾಜಕೀಯ ಪಕ್ಷಗಳು ತಾವು ಅಧಿಕಾರಕ್ಕೆ ಬರಲೇ ಬೇಕು ಎಂಬ ಉದ್ದೇಶದಿಂದ ಅಬ್ಬರದ ಪ್ರಚಾರಕ್ಕೆ ಇಳಿದಿವೆ. ಈ ಬಾರಿ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ಅಭ್ಯರ್ಥಿಗಳ ಪರ ಪ್ರಚಾರ ನಡೆಸಲೆಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಹಲವೆಡೆ ಭೇಟಿ ನೀಡಲಿದ್ದಾರೆ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ (ಏ.25): ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಖುದ್ದಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಕರಾವಳಿ ಭಾಗದ ಉತ್ತರಕನ್ನಡ ಜಿಲ್ಲೆಯಲ್ಲೂ ಕ್ಲೀನ್ ಸ್ವೀಪ್ ಮಾಡುವ ಉದ್ದೇಶದಿಂದ ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಎಂದೆನ್ನಲಾಗಿದೆ. ಆದ್ರೆ, ಇದೀಗ ಕಾರ್ಯಕ್ರಮ ನಿಗದಿಯಾಗಬೇಕಾದ ಸ್ಥಳವೇ ವಿವಾದಕ್ಕೆ ಕಾರಣವಾಗುತ್ತಿದ್ದು, ಮೋದಿ ಸಮಾವೇಶದ ವಿರುದ್ಧ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ಮಾಡಿಕೊಂಡಿದೆ. ಅಷ್ಟಕ್ಕೂ ಏನಿದು ವಿವಾದ..? ಈ ವಿವಾದದಿಂದ ಮೋದಿ ಕಾರ್ಯಕ್ರಮಕ್ಕೆ ತಡೆ ಬೀಳುತ್ತಾ..? ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ ನೋಡಿ..
undefined
ಮೋದಿ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲು ಹೊರಟಿದ್ದಾರೆ ಕಾಂಗ್ರೆಸ್ ನಾಯಕರು
ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಅಖಾಡ ತಯಾರಾಗಿದ್ದು, ರಾಜಕೀಯ ಪಕ್ಷಗಳು ತಾವು ಅಧಿಕಾರಕ್ಕೆ ಬರಲೇ ಬೇಕು ಎಂಬ ಉದ್ದೇಶದಿಂದ ಅಬ್ಬರದ ಪ್ರಚಾರಕ್ಕೆ ಇಳಿದಿವೆ. ಈ ಬಾರಿ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ಅಭ್ಯರ್ಥಿಗಳ ಪರ ಪ್ರಚಾರ ನಡೆಸಲೆಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಹಲವೆಡೆ ಭೇಟಿ ನೀಡಲಿದ್ದಾರೆ. ಉತ್ತರಕನ್ನಡ ಜಿಲ್ಲೆಗೂ ಪ್ರಧಾನಿ ನರೇಂದ್ರ ಮೋದಿ ಆಗಮಿಸಲು ಒಪ್ಪಿದ್ದು, ಸುರಕ್ಷತೆಯ ದೃಷ್ಠಿಯಿಂದ ಹಾಗೂ ಜನರ ಆಗಮನಕ್ಕೆ ವ್ಯವಸ್ಥೆಯಾಗಲೆಂದು ಅಂಕೋಲಾ ತಾಲೂಕಿನ ಹಟ್ಟಿಕೇರಿಯ ನೌಕಾನೆಲೆಯ ಜಾಗ ಸೇರಿದಂತೆ ಸುಮಾರು 4 ಜಾಗಗಳನ್ನು ಬಿಜೆಪಿ ಮುಖಂಡರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ರೈತರ ಕಣ್ಣೀರು ಒರೆಸಲು ಎಚ್‌ಡಿಕೆ ಸಿಎಂ ಆಗಬೇಕು: ಎಚ್‌ಡಿ ದೇವೇಗೌಡ
ನೌಕಾನೆಲೆಯ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಬಿಜೆಪಿ ಮುಖಂಡರು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಮುಖೇನ ಮನವಿ ಕೂಡಾ ಸಲ್ಲಿಸಿದ್ದಾರೆ. ಆದರೆ, ಈ ಸ್ಥಳದಲ್ಲಿ ಮೋದಿ ಕಾರ್ಯಕ್ರಮ ನಡೆಸಿದ್ರೆ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರುವ ಜತೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.
ಅಂಕೋಲಾದ ಹಟ್ಟಿಕೇರಿ ಗ್ರಾಮದ ಬಳಿ ನೌಕಾದಳವು ವಿವಾನ ನಿಲ್ದಾಣ ನಿರ್ಮಿಸಲು ವಶಪಡಿಸಿಕೊಂಡ ಜಾಗದಲ್ಲಿ ಮೋದಿಯವರ ಚುನಾವಣಾ ಪ್ರಚಾರ ಸಭೆ ನಡೆಸಲು ಅನುಮತಿ ಕೋರಿ ನೌಕಾದಳಕ್ಕೆ ಬಿಜೆಪಿ ನಾಯಕರು ಪತ್ರ ವ್ಯವಹಾರ ನಡೆಸಿದ್ದಾರೆ. ಆದ್ರೆ, ನೌಕಾನೆಲೆಯ ಜಾಗದಲ್ಲಿ ಚುನಾವಣಾ ಪ್ರಚಾರ ನಡೆಸುವುದು ನೀತಿ ಸಂಹಿತಿ ಉಲ್ಲಂಘನೆಯಲ್ಲದೇ, ದೇಶದ ಭದ್ರತಾ ದೃಷ್ಠಿಯಿಂದ ಕೂಡಾ ಇದು ಸರಿಯಲ್ಲ. ಅಧಿಕಾರ ದುರುಪಯೋಗ ಪಡಿಸುವುದು ಬಿಜೆಪಿಗೆ ಹೊಸತೇನಲ್ಲ. ಯಾವುದೇ ಕಾರಣಕ್ಕೂ ನೌಕಾನೆಲೆ ಜಾಗದಲ್ಲಿ ಸಮಾವೇಶ ನಡೆಸಲು ಅವಕಾಶ ಕೊಡಬಾರದು ಎಂದು ಪಟ್ಟು ಹಿಡಿದಿರುವ ಕಾಂಗ್ರೆಸ್, ಒಂದು ವೇಳೆ ಅವಕಾಶ ಮಾಡಿಕೊಟ್ಟಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡುವ ಜತೆ ಕೋರ್ಟ್ ನಲ್ಲಿ ದಾವೆ ಹೂಡಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.
ಅಂದಹಾಗೆ, ಪ್ರಧಾನಿ ನರೇಂದ್ರ ಮೋದಿರವರು ಮೇ 1 ಅಥವಾ 3 ನೇ ತಾರೀಕಿನಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದೆನ್ನಲಾಗಿದೆ. ಚುನಾವಣಾ ಪ್ರಚಾರಕ್ಕಾಗಿ ಕಾರವಾರ ಕ್ಷೇತ್ರಕ್ಕೆ ಆಗಮಿಸಲು ಒಪ್ಪಿಗೆ ಕೊಟ್ಟಿದ್ದಾರೆ ಎನ್ನಲಾಗಿದ್ದು, ಸುಮಾರು ಎಂಟು ವಿಧಾನಸಭಾ ಕ್ಷೇತ್ರದಿಂದ ಮೂರು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ಆದ್ರೆ, ಸೂಕ್ತ ಸ್ಥಳಕ್ಕಾಗಿ ಇತರ ಜಾಗವನ್ನು ನೋಡಿದರೂ, ಹಟ್ಟಿಕೇರಿ ಗ್ರಾಮದ ನೌಕಾನೆಲೆಯ ವ್ಯಾಪ್ತಿಯ ಜಾಗದಲ್ಲಿ ಸಮಾವೇಶ ನಡೆಸಲು ನೌಕಾದಳದ ಅನುಮತಿ ಕೇಳಲಾಗಿದೆ. ಆದರೆ, ನೌಕಾನೆಲೆಯ ಜಾಗದಲ್ಲಿ ಸಾರ್ವಜನಿಕರಿಗೇ ನಿರ್ಬಂಧವಿದೆ. ಇನ್ನು ರಾಜಕೀಯ ಕಾರ್ಯಕ್ರಮಕ್ಕೆ ಹೇಗೆ ಅವಕಾಶ ಕೊಡುತ್ತಾರೆ ಎನ್ನುವ ಆರೋಪ ಕಾಂಗ್ರೆಸ್ಸಿನದ್ದು.
ಉಳ್ಳಾಲದಲ್ಲಿ ಮುಸ್ಲಿಂ ವರ್ಸಸ್ ಮುಸ್ಲಿಂ ಎಲೆಕ್ಷನ್ ಗುದ್ದಾಟ: ಖಾದರ್ ವಿರುದ್ಧ ಮುಗಿಬಿದ್ದ ಎಸ್‌ಡಿಪಿಐ
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನಾಯಕರು, ನಾವು ನೌಕಾನೆಲೆಯ ಅಧಿಕಾರಿಗಳ ಅನುಮತಿ ಪಡೆದೇ ಕಾರ್ಯಕ್ರಮ ಮಾಡುತ್ತೇವೆ. ನೌಕಾನೆಲೆಯ ಜಾಗವಲ್ಲದೇ ಇನ್ನೂ ಕೆಲವು ಜಾಗವನ್ನು ಗುರುತಿಸಲಾಗಿದೆ. ನೂರು ಎಕರೆಗೂ ಹೆಚ್ಚು ಜಾಗ ಹೊಂದಿರುವ ಸ್ಥಳ ಹಾಗೂ ವಾಹನಗಳು ತಂಗಲು ಸೂಕ್ತ ವ್ಯವಸ್ಥೆ ಇರುವ ಪ್ರದೇಶ ಇದಾಗಿದೆ. ನಾವು ಅನುಮತಿ ಪಡೆದೇ ಕಾರ್ಯಕ್ರಮ ಮಾಡುತ್ತೇವೆ. ಕಾಂಗ್ರೆಸ್ ಗೆ ಮೋದಿ ಭಯ ಇರೋದರಿಂದಲೇ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿದ್ದಾರೆ ಅಂತಾರೆ ಬಿಜೆಪಿ ಮುಖಂಡ ನಾಗರಾಜ ನಾಯಕ ತಿಳಿಸಿದ್ದಾರೆ.
ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಮೊದಲೇ ಹಲವು ವಿಘ್ನಗಳು ಎದುರಾಗಿದೆ. ಸದ್ಯಕ್ಕೆ ನೌಕಾದಳವು ಸಹ ಈವರೆಗೂ ಕಾರ್ಯಕ್ರಮ ನಡೆಸಲು ಅನುಮತಿ ನೀಡಿಲ್ಲ. ಹೀಗಾಗಿ ಸೂಕ್ತ ಸ್ಥಳ ಸಿಗದೇ ಇದ್ದಲ್ಲಿ ಕಾರ್ಯಕ್ರಮ ಬೇರೆಡೆ ಮಾಡಲು ಬಿಜೆಪಿ ನಾಯಕರು ಪ್ರಯತ್ನ ಯೋಜನೆ ಹಾಕಿಕೊಂಡಿದ್ದಾರೆ. ಆದರೆ, ಭದ್ರತೆಯ ದೃಷ್ಠಿಯಿಂದ ಕಾರ್ಯಕ್ರಮ ರದ್ದಾಗುವ ಸಾಧ್ಯತೆಗಳೂ ಕೂಡಾ ಇವೆ. ಹೀಗಾಗಿ ಜಿಲ್ಲೆಯಲ್ಲಿ ಮೋದಿ ಹವಾ ಸೃಷ್ಠಿಸಲು ಹೋದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಅಡ್ಡಗಾಲಿಟ್ಟಿದ್ದು, ಜಿಲ್ಲೆಗೆ ಮೋದಿಯನ್ನು ಕರೆಯಿಸಿಕೊಳ್ಳಲು ಬಿಜೆಪಿಯವರು ಸಫಲರಾಗುತ್ತಾರಾ ? ಎಂದು ಕಾದು ನೋಡಬೇಕಷ್ಟೇ.