ಪ್ರಧಾನಿ Narendra Modi ಜಗತ್ತು ಕಂಡ ಮಹಾನ್‌ ನಾಯಕ - ಶಾಸಕ ಆಯನೂರು ಮಂಜುನಾಥ

By Kannadaprabha NewsFirst Published Oct 2, 2022, 9:11 AM IST
Highlights

ಭಾರತ ಇಂದು ಹಲವಾರು ಸಾಧನೆಗಳಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣಕರ್ತರಾಗಿದ್ದಾರೆ ಎಂದು ವಿಧಾನ ಪರಿಷತ್ತು ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಅಯನೂರು ಮಂಜುನಾಥ ಹೇಳಿದರು.

ರಿಪ್ಪನ್‌ಪೇಟೆ (ಅ.2): ಭಾರತ ಹಲವಾರು ಸಾಧನೆಗಳಲ್ಲಿ ಇಂದು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣಕರ್ತರಾಗಿದ್ದಾರೆ ಎಂದು ವಿಧಾನ ಪರಿಷತ್ತು ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಅಯನೂರು ಮಂಜುನಾಥ ಹೇಳಿದರು.

ದಿಲ್ಲಿಯಲ್ಲಿ ಕುಳಿತು ಸ್ವೀಡನ್ನಲ್ಲಿ ಕಾರು ಓಡಿಸಿದ ಮೋದಿ!

ಹುಂಚದಲ್ಲಿ ಬಿಜೆಪಿ ರೈತ ಮೋರ್ಚಾ ಮತ್ತು ಬಿಜೆಪಿ ಮಹಾಶಕ್ತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾದ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಮಟ್ಟದ ಆಹ್ವಾನಿತ ತಂಡಗಳ ಪುರುಷರ ವಾಲಿಬಾಲ್‌ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಇಂದು ಪ್ರಪಂಚದ ಬೃಹತ್‌ ರಾಷ್ಟ್ರವಾದ ಅಮೆರಿಕ, ರಷ್ಯಾದಂತಹ ದೇಶದ ಚುಕ್ಕಾಣಿ ಹಿಡಿದಿರುವ ಆಡಳತಗಳು ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ- ಸೂಚನೆಗಳನ್ನು ಪಡೆದುಕೊಳ್ಳಲು ಬಯಸುತ್ತಿವೆ. ಇದರ ಮಹತ್ವ ತಿಳಿಯಬೇಕಿದೆ. ಇದು ನಮ್ಮ ದೇಶದ ಹೆಮ್ಮೆಯ ಸಂಗತಿ ಎಂದರು.

ಯುವಜನಾಂಗ ಕ್ರೀಡೆಯೊಂದಿಗೆ ಸಂಘಟನೆಗೊಳ್ಳಲು ಇಂದೊಂದು ಸುವರ್ಣಾವಕಾಶ. ಸೋಲು- ಗೆಲುವು ಮುಖ್ಯವಲ್ಲ. ಎಲ್ಲರೂ ಭಾಗವಹಿಸುವುದರೊಂದಿಗೆ ಸೋದರತ್ವ ಬೆಳಸುವಲ್ಲಿ ಕ್ರೀಡೆ ಉತ್ತಮ ವೇದಿಕೆಯಾಗಿದೆ ಎಂದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ ಅಧ್ಯಕ್ಷತೆ ವಹಿಸಿ, ಕಳೆದ 15 ದಿನಗಳ ಸೇವಾ ಪಾಕ್ಷಿಕ ಕಾರ್ಯಕ್ರಮದ ಅನ್ವಯ ದೇಶದ ಪ್ರಧಾನಿ ಮೋದಿ ಅವರ 72ನೇ ಜನ್ಮ ದಿನವನ್ನು ವಿವಿಧ ಜನಹಿತ ಕಾಯಕ್ರಮಗಳೊಂದಿಗೆ ಸಮಾಜ ಸೇವೆಗೆ ಮುಂದಾಗಿರುವುದಾಗಿದೆ ಎಂದರು.

5G Launch In India: ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ಸೇವೆ, ಲಿಸ್ಟ್‌ನಲ್ಲಿದ್ಯಾ ಬೆಂಗಳೂರು?

ರಾಜ್ಯ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ದಿನೇಶ್‌ ದೇವವೃಂದ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್‌, ತಾಲೂಕು ಬಿಜೆಪಿ ಅಧ್ಯಕ್ಷ ಗಣಪತಿ ಬೆಳಗೋಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಕಾರ್ಯದರ್ಶಿ ನಾಗಾರ್ಜುನ ಸ್ವಾಮಿ, ಜಂಬಳ್ಳಿ ಗಿರೀಶ್‌, ಕುಕ್ಕೆ ಪ್ರಶಾಂತ, ಗ್ರಾಪಂ ಅ. ಪಲ್ಲವಿ, ಎಚ್‌.ಆರ್‌. ತೀರ್ಥೇಶ್‌, ಎಚ್‌.ಆರ್‌. ರಾಘವೇಂದ್ರ, ನಾಗರಾಜ್‌, ಮೋಹನ್‌ ಶೆಟ್ಟಿ, ಎಂ.ಸುರೇಶ್‌ ಸಿಂಗ್‌, ವಿನ್ಸೆಂಟ್‌ ರೋಡ್ರಿಗಸ್‌, ಜಗದೀಶ್‌ ಈಸೂರು, ರಾಜಶ್ರೀ, ಸುರೇಶ್‌ಸ್ವಾಮಿ ರಾವ್‌, ನಾಗೇಂದ್ರ ಕಲ್ಲೂರು, ಉದುವೀರ, ಬಿ.ಕೆ.ಶ್ರೀನಾಥ, ಆಶಾ ಯದುವೀರ್‌ ಇದ್ದರು

click me!