ಉತ್ತರ ಕರ್ನಾಟಕದವರನ್ನೇ ಸಿಎಂ ಮಾಡುವುದಾಗಿ ಮೋದಿ ಭರವಸೆ, ಬಿಜೆಪಿ ನಾಯಕ ಬಾಂಬ್

By Suvarna NewsFirst Published Oct 20, 2020, 3:02 PM IST
Highlights

ಬಿಎಸ್ ಯಡಿಯೂರಪ್ಪನವರನ್ನ ಸಿಎಂನಿಂದ ಬದಲಾವಣೆ ಮಾಡಬೇಕೆಂಬ ಕೂಗು ಮತ್ತೆ ಮುನ್ನೆಲೆಗೆ ಬಮದಿದ್ದು, ಉಪಚುನಾವಣೆ ಹೊತ್ತಲ್ಲಿ ಬಿಜೆಪಿ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಜಯಪುರ, (ಅ.20): ಬಿಎಸ್​ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬಹಳ ದಿನ ಇರೋದಿಲ್ಲ. ಉತ್ತರ ಕರ್ನಾಟಕದವರೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಬಾಂಬ್​ ಸಿಡಿಸಿದ್ದಾರೆ.

ವಿಜಯಪುರದಲ್ಲಿ ವಾರ್ಡ್3 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತ್ನಾಳ್, ಕೇಂದ್ರ ಸರ್ಕಾರದವರಿಗೂ ಯಡಿಯೂರಪ್ಪ ಸಾಕಾಗಿ ಹೋಗಿದ್ದಾರೆ. ಉತ್ತರ ಕರ್ನಾಟಕದವರೇ 100 ಶಾಸಕರನ್ನು ಗೆಲ್ಲಿಸಿ ಕಳುಹಿಸುತ್ತಾರೆ. ಉಳಿದ ಭಾಗದಲ್ಲಿ ಕೇವಲ 15 ಶಾಸಕರು ಬಿಜೆಪಿಯಿಂದ ಗೆದ್ದಿರ್ತಾರೆ. ಮೈಸೂರು, ಮಂಡ್ಯ, ಶಿವಮೊಗ್ಗ ಭಾಗದಲ್ಲಿ ಇವ್ರಿಗೆ ಯಾರೂ ಓಟು ಹಾಕಲ್ಲ. ಈ ಬಗ್ಗೆ ಪ್ರಧಾನಿ ಮೋದಿಗೂ ಮನವರಿಕೆಯಾಗಿದೆ. ಆದ್ರೂ ಆ ಭಾಗದವರೇ ಒಬ್ಬರು ಪಕ್ಕಾ ಸಿಎಂ ಆಗ್ತಾರೆ ಎಂದು ಬಹಿರಂಗವಾಗಿಯೇ ಅಸಮಧಾನ ವ್ಯಕ್ತಪಡಿಸಿದರು.

ಸಿಎಂ ಬದಲಾವಣೆ ವಿಚಾರ: ಯತ್ನಾಳ್ ಹೇಳಿಕೆ ಹಿಂದೆ RSS,ಸ್ಫೋಟಕ ಮಾಹತಿ ಬಿಚ್ಚಿಟ್ಟ ಮಾಜಿ ಸಚಿವ

ಮುಂದಿನ ಬಾರಿ ಉತ್ತರ ಕರ್ನಾಟಕದವರನ್ನೇ ರಾಜ್ಯದ ಸಿಎಂ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ನಮಗೆ ಭರವಸೆ ನೀಡಿದ್ದಾರೆ. ಈಗಾಗಲೇ ನನಗೂ ಹಾಗೂ ಸಿಎಂ ಬಿಎಸ್​ವೈ ಅವರಿಗೂ ಜಗಳ ಶುರುವಾಗಿದೆ. ನನ್ನ ಮತಕ್ಷೇತ್ರದ 125 ಕೋಟಿ ರೂ. ಅನುದಾನ ಕಡಿತ ಮಾಡಿದ್ರು. ಇನ್ನೇನು ಸಿಎಂ ಯಡಿಯೂರಪ್ಪ ಬಹಳ ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಯತ್ನಾಳ್ ಈ ರೀತಿ ಬಹಿರಂಗ ಹೇಳಿಕೆ ಕೊಡುತ್ತಿರುವುದು ಇದು ಮೊದಲಲ್ಲ. ಈ ಹಿಂದೆಯೂ ಸಹ ಯತ್ನಾಳ್ ಹಲವು ಬಾರಿ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಹುದು.

click me!