ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹತ್ಯೆ ಯತ್ನ ಬೆನ್ನಲ್ಲೇ ಇದೀಗ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮೇಲೆ ಹಲ್ಲೆಗೆ ಸಂಚು ನಡೆದಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಯಾರು..? ಏನು...? ಈ ಕೆಳಗಿನಂತಿದೆ.
ಚಿಕ್ಕಬಳ್ಳಾಪುರ,[ಡಿ.01]: ಒಂದು ಕಡೆ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದರ ಮಧ್ಯೆ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಮೆಲೆ ಹಲ್ಲೆಗೆ ಸಂಚು ಮಾಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ತನ್ವೀರ್ ಸೇಠ್ ಮರ್ಡರ್ ಯತ್ನ; ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಪಾಷಾ!
ಈ ಬಗ್ಗೆ ಸ್ವತಃ ಡಾ.ಕೆ. ಸುಧಾಕರ್ ಅವರೇ ಮಾಹಿತಿ ನೀಡಿದ್ದಾರೆ. ನನ್ನ ಮೇಲೆ ದೈಹಿಕ ಹಲ್ಲೆಗೆ ಸಂಚು ನಡೆದಿದೆ. ನಮ್ಮ ಪಕ್ಷದ ಮುಖಂಡರಾದ ಚಕ್ರಪಾಣಿಯವರು ಹೇಳಿದ್ರು ಎಂದು ತಿಳಿಸಿದರು.
ನಿನ್ನೆ [ಶನಿವಾರ] ರಾತ್ರಿ ಕೂಡಾ ಹಲ್ಲೆಗೆ ಸಂಚು ಮಾಡಿದ್ರಂತೆ. ಇದರ ಬಗ್ಗೆ ಐಜಿ, ಡಿಐಜಿ ಜೊತೆ ಮಾತಾಡ್ತೇನೆ. ದೈಹಿಕ ಹಲ್ಲೆ ಬಾಲಿಶತನದ್ದು, ಅಮಾನವೀಯ. ದ್ವೇಷ, ಹಲ್ಲೆ ಮನುಷ್ಯನ ಲಕ್ಷಣ ಅಲ್ಲ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಪ್ರತಿಷ್ಠೆಯ ಕಣವಾದ ಚಿಕ್ಕಬಳ್ಳಾಪುರ ಉಪಚುನಾವಣೆ
ಹಲ್ಲೆ ಸಂಚು ಯಾರು ಮಾಡ್ತಿರೋದು ಅಂತ ಈಗ ಬೇಡ. ಇವತ್ತು ಇದರ ಬಗ್ಗೆ ಚರ್ಚಿಸಿ ದೂರು ಕೊಡ್ತೇವೆ. ಗೃಹ ಇಲಾಖೆ ತನಿಖೆ ಮಾಡಲಿದ್ದು, ತನಿಖೆ ಬಳಿಕ ಯಾರು ಅಂತ ಗೊತ್ತಾಗುತ್ತೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ಸುಧಾಕರ್ ರಾಜೀನಾಮೆ ನೀಡಿ ಅನರ್ಹರಾಗಿದ್ದು, ಇದೀಗ ಚಿಕ್ಕಬಳ್ಳಾಪುರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದೇ ಡಿಸೆಂಬರ್ 5ಕ್ಕೆ ಮತನಾದನ ನಡೆಯಲಿದ್ದು, ಡಿ.9ಕ್ಕೆ ಫಲಿತಾಂಶ ಪ್ರಕಟವಾಗಲಿದೆ.