Council Election Karnataka: ಸಿದ್ದು ಸೊಕ್ಕು, ಧಿಮಾಕಿನ ಮಾತಿಗೆ ಯಾರೂ ಬೆಲೆ ಕೊಡಲ್ಲ : ಬಿಎಸ್‌ವೈ

By Kannadaprabha NewsFirst Published Dec 5, 2021, 7:27 AM IST
Highlights
  • ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಪಕ್ಷ ನಾಯಕ ಎಂಬುದನ್ನೇ ಮರೆತಿದ್ದಾರೆ
  • ಸೊಕ್ಕಿನ, ಧಿಮಾಕಿನ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ. ಪರಿಷತ್‌ ಚುನಾವಣೆಯಲ್ಲಿ ಅವರಿಗೆ ಮತದಾರರು ಸೂಕ್ತ ಉತ್ತರ ನೀಡುತ್ತಾರೆ

  ದಾವಣಗೆರೆ (ಡಿ.05):  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ವಿಪಕ್ಷ ನಾಯಕ ಎಂಬುದನ್ನೇ ಮರೆತು, ಮತ್ತೊಬ್ಬರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇಂಥ ಸೊಕ್ಕಿನ, ಧಿಮಾಕಿನ ಮಾತಿಗೆ ಯಾರೂ ಬೆಲೆ ಕೊಡುವುದಿಲ್ಲ. ಪರಿಷತ್‌ ಚುನಾವಣೆಯಲ್ಲಿ (Election) ಅವರಿಗೆ ಮತದಾರರು ಸೂಕ್ತ ಉತ್ತರ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa)  ಹೇಳಿದರು.

ತಾಲೂಕಿನ ಆನಗೋಡು ಗ್ರಾಮದಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ ಜೆಡಿಎಸ್‌(JDS) ಬಿಜೆಪಿಯ (BJP) ಬಿ ಟೀಂ ಎಂಬ ಸಿದ್ದರಾಮಯ್ಯ(Siddaramaiah) ಹೇಳಿಕೆಗೆ ತೀವ್ರ ಕಿಡಿಕಾರಿದರು. ಮತದಾರರು ಜಾಗೃತರಾಗಿದ್ದಾರೆ. ಯಾವುದು ಸರಿ, ಯಾವುದು ತಪ್ಪು ಎಂದು ಮತದಾರರಿಗೂ ಗೊತ್ತಿದೆ. ಮೈಸೂರಿನಲ್ಲೇ ಸೋತಿರುವಂಥ ಸಿದ್ದರಾಮಯ್ಯ ಇಷ್ಟೊಂದು ಹಗುರವಾಗಿ ಬೇರೆಯವರ ಬಗ್ಗೆ ಮಾತನಾಡುವುದು ಶೋಭೆಯಲ್ಲ ಎಂದು ಕಿಡಿಕಾರಿದರು.

ತಾವೊಬ್ಬ ವಿಪಕ್ಷ ನಾಯಕ ಅನ್ನೋದನ್ನೇ ಮರೆತು ಸಿದ್ದರಾಮಯ್ಯ ಸೊಕ್ಕು, ಧಿಮಾಕಿನ ಮಾತುಗಳನ್ನಾಡುತ್ತಿದ್ದಾರೆ. ವಿಧಾನ ಪರಿಷತ್‌ ಚುನಾವಣೆ (MLC Election) ಫಲಿತಾಂಶ ಬಂದ ನಂತರ ಸಿದ್ದರಾಮಯ್ಯಗೆ (Siddaramaiah) ಅರಿವಾಗುತ್ತದೆ. ಇನ್ನಾದರೂ ಅವರು ಮತ್ತೊಬ್ಬರ ಬಗ್ಗೆ ಗೌರವಯುತವಾಗಿ ಮಾತನಾಡಲಿ. ಒಬ್ಬ ಮಾಜಿ ಸಿಎಂ ಹಾಗೂ ಹಾಲಿ ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯ ತಮ್ಮ ಸ್ಥಾನಮಾನದ ಬಗ್ಗೆ ಅರಿವಿಟ್ಟುಕೊಂಡು ಮಾತನಾಡಬೇಕು ಎಂದು ಹೇಳಿದರು.

ಬೆಂಬಲ ಕೇಳಿದ್ದೇನೆ: ಪ್ರಧಾನಿ ಮೋದಿ (Prime Minister Narendra Modi)  ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ (HD Devegwoda) ಭೇಟಿಗೂ ವಿಧಾನ ಪರಿಷತ್‌ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ನಾನು ಬಹಿರಂಗವಾಗಿಯೇ ಜೆಡಿಎಸ್‌ (JDS) ಬೆಂಬಲ ಕೇಳಿದ್ದೇನೆ. ಜೆಡಿಎಸ್‌ ಸ್ಪರ್ಧಿಸದ ಕಡೆ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ ಎಂದು ಇದೇ ವೇಳೆ ಯಡಿಯೂರಪ್ಪ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಕೇಳಿದ್ದೇನೆ. ನೂರಕ್ಕೆ ನೂರರಷ್ಟುಜೆಡಿಎಸ್‌ ಅಭ್ಯರ್ಥಿಗಳು ಇಲ್ಲದ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಶೀಘ್ರವೇ ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆ: ಬಿಎಸ್‌ವೈ

 ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ (Cabinet) ನಿರೀಕ್ಷೆ ಇದ್ದು, ಯಾರನ್ನು ಸಚಿವರನ್ನಾಗಿ ಮಾಡಬೇಕು, ಬಿಡಬೇಕು ಎಂಬುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja Bommai) ಅವರ ವಿವೇಚನೆಗೆ ಬಿಟ್ಟದ್ದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ತಾಲೂಕಿನ ಆನಗೋಡು ಗ್ರಾಮದಲ್ಲಿ ಶನಿವಾರ ಚಿತ್ರದುರ್ಗ ವಿಪ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್‌.ನವೀನ ಪರ ಪ್ರಚಾರ ಸಭೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಚಿವ ಸಂಪುಟ ವಿಸ್ತರಣೆ ಸುಳಿವು ನೀಡಿದರು.

ಪ್ರಧಾನಿ ನರೇಂದ್ರ ಮೋದಿ (PM Modi) ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಭೇಟಿಗೂ, ವಿಧಾನ ಪರಿಷತ್‌ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ನಾನು ಬಹಿರಂಗವಾಗಿಯೇ ಜೆಡಿಎಸ್‌ ಬೆಂಬಲವನ್ನು ಕೇಳಿದ್ದೇನೆ. ಜೆಡಿಎಸ್‌ ಸ್ಪರ್ಧಿಸದ ಕಡೆ, ಜೆಡಿಎಸ್‌ ಅಭ್ಯರ್ಥಿಗಳು ಇಲ್ಲದ ಕಡೆ ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೂ(HD kumaraswamy) ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಕೇಳಿದ್ದೇನೆ. ನೂರಕ್ಕೆ ನೂರರಷ್ಟುಜೆಡಿಎಸ್‌ ಅಭ್ಯರ್ಥಿಗಳು ಎಲ್ಲಿ ಇಲ್ಲವೋ ಅಂತಹ ಕ್ಷೇತ್ರಗಳಲ್ಲಿ ಜೆಡಿಎಸ್‌ ಬಿಜೆಪಿಯನ್ನು ಬೆಂಬಲಿಸುವ ವಿಶ್ವಾಸವಿದೆ. ನರೇಂದ್ರ ಮೋದಿ-ದೇವೇಗೌರಡರ ಭೇಟಿಗೂ, ವಿಧಾನ ಪರಿಷತ್‌ ಚುನಾವಣೆಗೂ ಸಂಬಂಧವಿಲ್ಲ ಎಂದರು.

ರಾಜ್ಯದ 25 ವಿಧಾನ ಪರಿಷತ್‌ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಈ ಪೈಕಿ 23 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿದ್ದು, ಕೆ.ಎಸ್‌.ನವೀನ್‌ ಸೇರಿ 15 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಈ 15 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ನಾವು ವಿಧಾನ ಪರಿಷತ್‌ನಲ್ಲೂ ಯಾರನ್ನೂ ಅವಲಂಭಿಸಬೇಕಾಗುವುದಿಲ್ಲ ಎಂದರು.

ಚಿತ್ರದುರ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್‌.ನವೀನ್‌ ಎರಡು ಬಾರಿ ಸೋತಿರುವ ಬಗ್ಗೆ ಮತದಾರರಿಗೂ ಅನುಕಂಪವಿದೆ. ನವೀನ್‌ಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ, ಗೆಲ್ಲಿಸುತ್ತಾರೆಂಬ ವಿಶ್ವಾಸವಿದೆ. ಬೆಂಗಳೂರಿನಿಂದ ಹಣ ತೆಗೆದುಕೊಂಡು ಬಂದಿರುವ ಕಾಂಗ್ರೆಸ್‌ ಅಭ್ಯರ್ಥಿ ಇಲ್ಲಿ ಹಣ ಕಳೆದುಕೊಂಡು ಮತ್ತೆ ವಾಪಸ್‌ ಬೆಂಗಳೂರಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದರು.

click me!