‘ಇನ್ನೂ 20 ವರ್ಷ ಕಾಂಗ್ರೆಸಿನವರು ಅಂಗಿ ಗೂಟಕ್ಕೆ ಹಾಕಬೇಕು’

By Suvarna NewsFirst Published Jan 5, 2020, 2:07 PM IST
Highlights

ಮುಂದಿನ 20 ವರ್ಷಗಳವರೆಗೂ ಕಾಂಗ್ರೆಸಿನವರು ತಮ್ಮ ಅಂಗಿ ಗೂಟಕ್ಕೆ ಹಾಕಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಜನರು ಕಾಂಗ್ರೆಸ್ ನಂಬಲ್ಲ ಎಂದರು.

ಗದಗ [ಜ.05] : ನಾನಿವತ್ತು ಭವಿಷ್ಯ ಹೇಳುತ್ತೇನೆ. ಇನ್ನೂ 20 ವರ್ಷ ಕಾಂಗ್ರೆಸಿನವರು ಅಂಗಿಯನ್ನು ಗೂಟಕ್ಕೆ ಹಾಕಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. 

ಗದಗ್ ನಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೊಳ ಕಾಂಗ್ರೆಸ್ ಮುಖಂಡರು ಅಂಗಿ ಹಾಕೊಂಡು ಹೊರಗಡೆ ಬರಲು ಆಗಲ್ಲ. ಯಾಕಂದ್ರೆ ದೇಶದಲ್ಲಿ ಜನರು ಬಿಜೆಪಿಗೆ ಅಷ್ಟೋಂದು ಮತ ಕೊಟ್ಟಿದ್ದಾರೆ. ಮೋದಿಯವರ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು  ಹೇಳಿದರು. 

ಯಾರು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗಿಲ್ಲ. ಕಾಂಗ್ರೆಸಿನವರು ಗೊಂದಲ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರೆಲ್ಲಾ ಹತಾಶರಾಗಿದ್ದಾರೆ. ಕಾಂಗ್ರೆಸ್ ಮುಖಂಡರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದರು. 

ಕಾಂಗ್ರೆಸಿಗರು ದಲಿತರನ್ನು, ಅಲ್ಪ ಸಂಖ್ಯಾತರನ್ನು ಭಯದ ವಾತಾವರಣದಲ್ಲಿ ಇರಿಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಇನ್ನು ಮುಂದೆ ನಡೆಯಲ್ಲ. ಯಾಕೆಂದರೆ ದೇಶದಲ್ಲಿ  ವಿದ್ಯಾವಂತರ ಸಂಖ್ಯೆ ಹೆಚ್ಚಾಗಿದೆ ಎಂದರು. 

ಎಚ್ಚರಿಕೆಯಿಂದ ಮಾತಾಡಿದ್ರೆ ಒಳ್ಳೇದು : ಬಿಜೆಪಿ ಶಾಸಕನ ಮಾತಿಗೆ ಈಶ್ವರಪ್ಪ ರಿಯಾಕ್ಷನ್..

ಇದು 18 ಶತಮಾನ ಅಲ್ಲ. ಜನರ ಮನಸ್ಸಲ್ಲಿ ತಪ್ಪು ಭಾವನೆ ಬೀರಲು ಸಾಧ್ಯವಿಲ್ಲ ಯಾಕೆಂದರೆ ಇದು 21 ನೇ ಶತಮಾನ. 70 ವರ್ಷಗಳ ಕಾಲ ಪಕ್ಷ ಒಂದು ದೇಶದಲ್ಲಿ ಆಡಳಿತ ಮಾಡಿ ಏನು ಮಾಡಿದೆ ಎಂದು ಎಲ್ಲರಿಗೂ ಗೊತ್ತಿದೆ. ವಿದ್ಯಾವಂತರು ಇತಿಹಾಸ ಓದಿದ್ದಾರೆ ಎಂದು ಗದಗ ನಲ್ಲಿ ಗೋವಿಂದ ಕಾರಜೋಳ ಹೇಳಿದರು.

click me!