ಜನ ಬದುಕಿರುವುದೇ ಗ್ಯಾರಂಟಿಯಿಂದ: ಮಲ್ಲಿಕಾರ್ಜುನ ಖರ್ಗೆ

Published : Jul 20, 2025, 06:53 AM IST
Congress President Mallikarjun Kharge (File Photo/ANI)

ಸಾರಾಂಶ

ಸಾಮಾಜಿಕ ನ್ಯಾಯಕ್ಕೆ ನಾವು ಬದ್ಧ. ಕಾಂಗ್ರೆಸ್ ತನ್ನ ಮೂಲ ಐಡಿಯಾಲಜಿ ಬಿಡುವುದಿಲ್ಲ. ಜನ ಬದುಕಿದ್ದರೆ ಇಂಥ ಗ್ಯಾರಂಟಿಯಿಂದಲೇ ಹೊರತು, ಸುಳ್ಳು ಪ್ರಚಾರದಿಂದ ಅಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

ಮೈಸೂರು (ಜು.20): ಸಾಮಾಜಿಕ ನ್ಯಾಯಕ್ಕೆ ನಾವು ಬದ್ಧ. ಕಾಂಗ್ರೆಸ್ ತನ್ನ ಮೂಲ ಐಡಿಯಾಲಜಿ ಬಿಡುವುದಿಲ್ಲ. ಜನ ಬದುಕಿದ್ದರೆ ಇಂಥ ಗ್ಯಾರಂಟಿಯಿಂದಲೇ ಹೊರತು, ಸುಳ್ಳು ಪ್ರಚಾರದಿಂದ ಅಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಉದ್ಯೋಗ ಕೊಡುವುದಾಗಿ ಹೇಳಿದರು, ಕೊಟ್ರಾ? ಎಲ್ಲರಿಗೂ ₹2 ಕೋಟಿ ಕೊಡುವುದಾಗಿ ಹೇಳಿದರು ಕೊಟ್ರಾ? ರೈತರಿಗೆ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದರು, ಮಾಡಿದರೆ? ‌ಭ್ರಷ್ಟಾಚಾರ ಕಡಿಮೆ ಮಾಡಲಿಲ್ಲ. ಮೋದಿ ಸುಳ್ಳಿನ ಸರದಾರ ಎಂದು ಕಟುವಾಗಿ ಟೀಕಿಸಿದರು.

ರಾಜ್ಯದಲ್ಲಿ ಮಹಾರಾಜರ ಕಾಲದಲ್ಲಿ ಅಭಿವೃದ್ಧಿ ಆಯಿತು ಮೋದಿಯವರೇ, ನಿಮ್ಮ ಮತ್ತು ನಿಮ್ಮ ಶಿಷ್ಯರ ಕೊಡುಗೆ ಏನು ಎಂಬುದನ್ನು ತಿಳಿಸಿ. ಮುಂಜಾನೆಯಿಂದ ಸಂಜೆವರೆಗೆ ಟಿವಿಯಲಿ ಕಾಣಿಸಿಕೊಳ್ಳಬೇಕು. ಮಣಿಪುರದಲ್ಲಿ ಕೋಮು ಗಲಭೆ ಆಗುತ್ತಿದೆ. ಅವರನ್ನು ಭೇಟಿಯಾಗದ ನೀವು 42 ದೇಶಕ್ಕೆ ಹೋಗಿದ್ದೀರಿ. ಜನರಿಗೆ ಸಿದ್ದರಾಮಯ್ಯ ಮೊದಲ ಪ್ರಾಧಾನ್ಯತೆ ಕೊಡುತ್ತಾರೆ. ಆದರೆ ಬಿಜೆಪಿಯವರಿಗೆ ಟೀಕೆ ಮಾಡುವುದಷ್ಟೇ ಗೊತ್ತು. ಮಾಡುವುದು ಬರೀ ಭ್ರಷ್ಟಾಚಾರ. ಜನ ನೋಡುತ್ತಾರೆ. ನೀವು ಏನು ಮಾಡಿದ್ದೀರ ಅದು ಹೇಳಿ ಎಂದು ಅವರು ಪ್ರಶ್ನಿಸಿದರು.

ಅಹಂಕಾರ ಕಡಿಮೆ ಆಗಬೇಕು: ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. 400ಕ್ಕಿಂತ ಹೆಚ್ಚು ಸ್ಥಾನ ಗಳಿಸುವುದಾಗಿ ಹೇಳಿದರು. ಆದರೆ ಏನಾಯಿತು? ಕಾಂಗ್ರೆಸ್‌ಮತ್ತು ಬಿಜೆಪಿಗೆ ಕೇವಲ ಶೇ. 2 ಪರ್ಸೆಂಟ್‌ ಸ್ಥಾನ ವ್ಯತ್ಯಾಸ. ಅಹಂಕಾರ ಇದ್ದವರು ಎಷ್ಟು ಮೇಲೆ ಹೋದರೂ ಕೆಳಗೆ ಬೀಳಲೇಬೇಕು. ನಮ್ಮ ಪಕ್ಷದ ದೇಶದ ಮೂಲೆ ಮೂಲೆಯಲ್ಲಿಯೂ ಇದೆ ಎಂದರು. ಕಾಂಗ್ರೆಸ್‌ ನಲ್ಲಿ ಕೆಲಸ ಮಾಡುವ ಜನ ಇದ್ದಾರೆ. ಮೋದಿ ಪಕ್ಷದಲ್ಲಿ ಟೀಕಿಸುವವರು ಇದ್ದಾರೆ. ಗ್ಯಾರಂಟಿ ಯೋಜನೆಯಿಂದ ಬಾಡಿಗೆದಾರರೂ ಮಾಲೀಕರಾದರು. ದೇಶದ ಅಭಿವೃದ್ಧಿ ಹೊಂದಬೇಕಾದರೆ ದೊಡ್ಡ ದೊಡ್ಡ ಕಾರ್ಖಾನೆ ಇರಬೇಕು. ಆಗ ಉದ್ಯೋಗ ಲಭಿಸುತ್ತದೆ. ಆದರೆ ಬಿಜೆಪಿಗೆ ಆ ಜ್ಞಾನವೇ ಇಲ್ಲ. ಏಕೆಂದರೆ ಬಡವರ ಬಗ್ಗೆ ಅವರಿಗೆ ಆಸಕ್ತಿಯೇ ಇಲ್ಲ ಎಂದು ಕುಟುಕಿದರು.

ಸಂವಿಧಾನ ಬದಲಿಸಲು ಬಿಡಲ್ಲ: ಈ ದೇಶದ ಜನ ಸಂವಿಧಾನ ಬದಲಾಯಿಸಲು ಬಿಡಲ್ಲ. ನಿಮ್ಮ ತಾತ ಬಂದರೂ ಅದು ಸಾಧ್ಯವಿಲ್ಲ. ನೀವು ಸಂವಿಧಾನದಿಂದಲೇ ಪ್ರಧಾನಿ ಆಗಿರುವುದು. ಆದರೆ ಈಗ ಅದನ್ನೇ ಕೊಲ್ಲಲು ಮುಂದಾಗಿದ್ದೀರಿ ಎಂದು ಟೀಕಿಸಿದರು.

ಸಹನೆ ಕಳೆದುಕೊಂಡ ಖರ್ಗೆ: ಮಧ್ಯಾಹ್ನ 2 ಗಂಟೆ ಆಗಿತ್ತು. ಅನೇಕಾರು ಸಾರ್ವಜನಿಕರು, ಮಹಿಳೆಯರು ಊಟಕ್ಕಾಗಿ ಗುಂಪು ಗುಂಪಾಗಿ ಎದ್ದು ಹೋಗಲು ಆರಂಭಿಸಿದರು. ಕೆಲವರು ಕೂಗುತ್ತ ಎದ್ದು ಹೋದರು. ಆಗ ಸಹನೆ ಕಳೆದುಕೊಂಡ ಮಲ್ಲಿಕಾರ್ಜುನ ಖರ್ಗೆ ಅವರು, ಇರಬೇಕು ಅನ್ನಿಸಿದರೆ ಇರಿ, ನಿಮಗೆ ಬೇಕಿದ್ದರೆ ಕೇಳಿ, ಇಲ್ಲವೇ ಹೊರಗೆ ಹೋಗಿ ಎಂದು ಕಿಡಿ ಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ