ಅರುಣಾಚಲ ಪ್ರದೇಶ: 3ನೇ ಬಾರಿ ಸಿಎಂ ಆಗಿ ಪೆಮಾ ಖಂಡು ಶಪಥ

By Kannadaprabha NewsFirst Published Jun 14, 2024, 7:24 AM IST
Highlights

ಪೆಮಾ ಖಂಡು ಜತೆಗೆ ಉಪ ಮುಖ್ಯಮಂತ್ರಿ ಚೌನಾ ಮೇ, ಮಾಜಿ ವಿಧಾನಸಭಾ ಸ್ಪೀಕರ್ ಪಿಡಿ ಸೋನಾ, ಬಿಜೆಪಿ ರಾಜ್ಯಾಧ್ಯಕ್ಷ ಬಿಯೂರಾಮ್ ವಾಹ್ಗೆ ಮತ್ತು ಮಾಜಿ ಸಿಎಂ ಕಲಿಖೋ ಪುಲ್ ಅವರ ವಿಧವೆ ದಸಾಂಗ್ಲು ಪುಲ್‌ ಸೇರಿದಂತೆ ಹನ್ನೊಂದು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
 

ಇಟಾನಗರ(ಜೂ.14):  ಬಿಜೆಪಿ ನಾಯಕ ಪೆಮಾ ಖಂಡು, ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಮೂರನೇ ಅವಧಿಗೆ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ಇಲ್ಲಿನ ದೋರ್ಜಿ ಖಂಡು ರಾಜ್ಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ, ಆರೋಗ್ಯ ಮಂತ್ರಿ ಜೆ.ಪಿ. ನಡ್ಡಾ, ಅಸ್ಸಾಂ ಮುಖ್ಯಮಂತ್ರಿ ಹೀಮಂತ್‌ ಬಿಸ್ವಾ ಶರ್ಮಾ, ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್‌ ಸೇರಿ ಇತರೆ ಗಣ್ಯರ ಸಮ್ಮುಖದಲ್ಲಿ ಶಪಥ ಸ್ವೀಕರಿಸಿದರು.

Latest Videos

46 ಸ್ಥಾನ ಗೆದ್ದು ಅರುಣಾಚಲದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬಿಜೆಪಿ, ಮೋದಿ ಅಭಿನಂದನೆ!

ಇವರ ಜತೆಗೆ ಉಪ ಮುಖ್ಯಮಂತ್ರಿ ಚೌನಾ ಮೇ, ಮಾಜಿ ವಿಧಾನಸಭಾ ಸ್ಪೀಕರ್ ಪಿಡಿ ಸೋನಾ, ಬಿಜೆಪಿ ರಾಜ್ಯಾಧ್ಯಕ್ಷ ಬಿಯೂರಾಮ್ ವಾಹ್ಗೆ ಮತ್ತು ಮಾಜಿ ಸಿಎಂ ಕಲಿಖೋ ಪುಲ್ ಅವರ ವಿಧವೆ ದಸಾಂಗ್ಲು ಪುಲ್‌ ಸೇರಿದಂತೆ ಹನ್ನೊಂದು ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಅರುಣಾಚಲ ಪ್ರದೇಶದಲ್ಲಿ ಬಿಜೆಪಿ 60 ಸ್ಥಾನಗಳಲ್ಲಿ 46 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡಿದೆ.

click me!