ಜೆಡಿಎಸ್‌ ಸದೃಢಗೊಳಿಸಲು ಪಂಚರತ್ನ ಪ್ರವಾಸ: ನಿಖಿಲ್ ಕುಮಾರಸ್ವಾಮಿ

By Govindaraj S  |  First Published Sep 11, 2022, 7:32 AM IST

ಜೆಡಿಎಸ್‌ ಪಕ್ಷವು ಪಂಚರತ್ನ ಪ್ರವಾಸ ಕೈಗೊಂಡು ಪಕ್ಷವನ್ನ ಸದೃಢಗೊಳಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅಧ್ಯಕ್ಷ ಸಿ.ಎಂ ಇಬ್ರಾಹಿಂ ನೇತೃತ್ವದಲ್ಲಿ ಪ್ರವಾಸ ಕೈಗೊಳ್ಳಲಿದ್ದೇವೆ ಎಂದು ರಾಜ್ಯ ಜೆಡಿಎಸ್‌ ಯುವ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು.


ಕುಣಿಗಲ್‌ (ಸೆ.11): ಜೆಡಿಎಸ್‌ ಪಕ್ಷವು ಪಂಚರತ್ನ ಪ್ರವಾಸ ಕೈಗೊಂಡು ಪಕ್ಷವನ್ನ ಸದೃಢಗೊಳಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅಧ್ಯಕ್ಷ ಸಿ.ಎಂ ಇಬ್ರಾಹಿಂ ನೇತೃತ್ವದಲ್ಲಿ ಪ್ರವಾಸ ಕೈಗೊಳ್ಳಲಿದ್ದೇವೆ ಎಂದು ರಾಜ್ಯ ಜೆಡಿಎಸ್‌ ಯುವ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಹುತ್ರಿದುರ್ಗ ಹೋಬಳಿ ಅಂಚೆಪಾಳ್ಯ ಕ್ರಾಸಿನಲ್ಲಿ ನೂತನವಾಗಿ ಎ.ಬಿ ಚಾಯ್ಸ್‌ ಎಂಬ ನೂತನ ಹೋಟೆಲ್‌ ಉದ್ಘಾಟಿಸಿ ನೆರೆದಿದ್ದ ಅಸಂಖ್ಯಾತ ಜೆಡಿಎಸ್‌ ಪಕ್ಷದ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದರು. 

ತುಮಕೂರು ಜಿಲ್ಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ 60 ವರ್ಷದ ರಾಜಕೀಯ ಹಿನ್ನೆಲೆಯುಳ್ಳ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿ ಎಚ್‌.ಡಿ ದೇವೇಗೌಡರನ್ನು ಕರೆತಂದು ರಾಜಕೀಯ ಷಡ್ಯಂತ್ರದಿಂದ ಸೋಲಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಪಕ್ಷ ಗೆಲ್ಲುವಂತೆ ಕಾರ್ಯಕರ್ತರು ದುಡಿದು ಸರಿಯಾದ ಪಾಠ ಕಲಿಸಬೇಕು. ರಾಜ್ಯದ 224 ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಪ್ರವಾಸ ಕೈಗೊಳ್ಳಲು ಕಷ್ಟವಾಗಿದ್ದು, ಅವರಿಗೆ ಆರೋಗ್ಯ ಸಂಬಂಧಿ ಕಾಯಿಲೆ ಇದ್ದರೂ ಸಹ ಪಕ್ಷವನ್ನು ಸದೃಢಗೊಳಿಸಲು ಯಾವುದೇ ಜಾತಿ, ಧರ್ಮ ನೋಡದೆ ದುಡಿಯುತ್ತಿದ್ದಾರೆ.

Tap to resize

Latest Videos

Tumakuru: ದೇಶದ ಸಮಗ್ರತೆಗಾಗಿ ಭಾರತ್‌ ಜೋಡೋ ಪಾದಯಾತ್ರೆ: ಮಾಜಿ ಶಾಸಕ ಷಡಕ್ಷರಿ

ಮಾಜಿ ಮಂತ್ರಿ ಡಿ. ನಾಗರಾಜಯ್ಯ ಮಾತನಾಡಿ, ಜೆಡಿಎಸ್‌ ಪಕ್ಷವು ಸದೃಢವಾಗಿದ್ದು ಕಾರ್ಯಕರ್ತರು ಹಗಲಿರುಳು ಪಕ್ಷದ ಗೆಲುವಿಗೆ ದುಡಿದು 2023ಕ್ಕೆ ಎಚ್‌.ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಡಾ. ರವಿ ನಾಗರಾಜಯ್ಯ ಮಾತನಾಡಿ, ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡದೆ ಪದವಿ ಕಾಲೇಜಿನಲ್ಲಿ ಚುನಾವಣೆ ಮುಗಿಯುವವರೆಗೂ ಪ್ರತಿ ವಿದ್ಯಾರ್ಥಿಗೆ ಐದುನೂರು ರುಪಾಯಿ ಸಹಾಯಧನ ನೀಡುತ್ತೇನೆ ಎಂದು ಹೇಳುತ್ತಾ, ಕ್ಷೇತ್ರದ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡದೆ ದ್ರೋಹವೆಸಿಗಿದ್ದಾರೆ. 

ಈ ಕ್ಷೇತ್ರದಿಂದ ಮಾಜಿ ಮಂತ್ರಿಗಳಾದ ಹುಚ್ಚ ಮಾಸ್ತಿ ಗೌಡ, ವೈ.ಕೆ ರಾಮಯ್ಯ, ಲಕ್ಕಪ್ಪ, ನಿಂಗಪ್ಪ ಮಾಯಣ್ಣ, ಡಿ ನಾಗರಾಜಯ್ಯ ಸೇರಿದಂತೆ ಅನೇಕರು ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದು ಅಂಚೆಪಾಳ್ಯ ಕೈಗಾರಿಕಾ ಪ್ರದೇಶದಲ್ಲಿ 500 ಕಾರ್ಖಾನೆಗಳಿದ್ದು ಶಾಸಕರು ಯಾವುದೇ ಅಭಿವೃದ್ಧಿಪರ ಕೆಲಸ ಮಾಡದೆ ನಿರುದ್ಯೋಗ ಯುವಕರನ್ನು, ರೈತರನ್ನ ಯಾಮಾರಿಸಲು ಯತ್ನ ಮಾಡುತ್ತಿದ್ದಾರೆ. ಕ್ಷೇತ್ರದ ಜನರು ಶಾಸಕ ರಂಗನಾಥ್‌ಗೆ ಸರಿಯಾದ ಬುದ್ದಿ ಕಲಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಬಿ.ಎನ್‌ ಜಗದೀಶ್‌, ಕೆಎಲ್‌ ಹರೀಶ್‌, ತರೀಕೆರೆ ಪ್ರಕಾಶ್‌ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿ ಬೈಕ್‌ ರಾರ‍ಯಲಿ ನಡೆಸುವ ಮೂಲಕ ಕುಣಿಗಲ್‌ ಪಟ್ಟಣ, ಸಂತೆ ಮಾವುತ್ತೂರು, ಹುಲಿಯೂರುದುರ್ಗ, ಯಡಿಯೂರು, ಭಾಗದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿಯ ಜನಸ್ಪಂದನ ಸಮಾವೇಶಕ್ಕೆ ಬಂದಿದ್ದ ವ್ಯಕ್ತಿ ಸಾವು

ಮಂಡ್ಯದಲ್ಲಿ ರೈತರು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡಾಗ ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿ ಬೇಕಾಯಿತು. ರೈತರ ಬದುಕು ಹಸನಾಗಲು ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕು. ಕುಣಿಗಲ್‌ ಕ್ಷೇತ್ರದಿಂದ ಮಾಜಿ ಮಂತ್ರಿ ಡಿ. ನಾಗರಾಜಯ್ಯ ಗೆಲುವು ಶತಸಿದ್ಧ. ನೂರು ಕ್ಷೇತ್ರದಲ್ಲಿ ಪಕ್ಷದ ಸಂಘಟನೆಗಾಗಿ ಪಂಚರತ್ನ ರಥ ಯಾತ್ರೆ ಕೈಗೊಳ್ಳುವ ಮೂಲಕ ಪಕ್ಷದ ಸಾಧನೆ, ಸಿದ್ಧಾಂತ ಅಭಿವೃದ್ಧಿ ಕಾರ್ಯಗಳನ್ನು ನಾಡಿನಾದ್ಯಂತ ಕೈಗೊಳ್ಳಲಾಗುವುದು.
-ನಿಖಿಲ್‌ ಕುಮಾರಸ್ವಾಮಿ ಜೆಡಿಎಸ್‌ ಯುವ ಅಧ್ಯಕ್ಷ

click me!