
ಬೆಂಗಳೂರು (ಅ.16): ನಮ್ಮದೇ ಒರಿಜಿನಲ್ ಜೆಡಿಎಸ್ ಪಕ್ಷವಾಗಿದೆ. ನಾನು ಒರಿಜಿನಲ್ ಜೆಡಿಎಸ್ ನ ರಾಜ್ಯ ಅಧ್ಯಕ್ಷನಾಗಿದ್ದೇನೆ. ನನ್ನನ್ನು ಯಾರು ಪಕ್ಷದಿಂದ ತೆಗೆಯಲು ಸಾಧ್ಯವಿಲ್ಲ. ನನ್ನನ್ನು ತೆಗೆಯಬೇಕಾದ್ರೆ 2/3 ನಲ್ಲಿ ಸಭೆ ಮಾಡಿ ತೆಗೆಯಬೇಕು. ಬಿಜೆಪಿ ಜೊತೆ ಮೈತ್ರಿಗೆ ಒರಿಜಿನಲ್ ಜೆಡಿಎಸ್ ಬೆಂಬಲ ಇಲ್ಲ. ಎನ್‌ಡಿಎ ಸೋಲಿಸಲು ಇಂಡಿ ಮೈತ್ರಿಕೂಟಕ್ಕೆ ಬೆಂಬಲ ನೀಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಜೆಡಿಎಸ್ ಚಿಂತನ ಮಂಥನ ಸಭೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿದ ಅವರು, ನಮ್ಮದೇ ಒರಿಜಿನಲ್ ಜೆಡಿಎಸ್ ಪಕ್ಷವಾಗಿದೆ. ನಾನು ಒರಿಜಿನಲ್ ಜೆಡಿಎಸ್ ನ ರಾಜ್ಯ ಅಧ್ಯಕ್ಷನಾಗಿದ್ದೇನೆ. ನನ್ನನ್ನು ಯಾರು ಪಕ್ಷದಿಂದ ತೆಗೆಯಲು ಸಾಧ್ಯವಿಲ್ಲ. ಒಂದು ವೇಳೆ ನನ್ನನ್ನು ಪಕ್ಷದಿಂದ ತೆಗೆಯಬೇಕಾದ್ರೆ 2/3 ನಲ್ಲಿ ಸಭೆ ಮಾಡಿ ತೆಗೆಯಬೇಕು. ಇನ್ನು ಬಿಜೆಪಿ ಜೊತೆ ಮೈತ್ರಿಗೆ ಒರಿಜಿನಲ್ ಜೆಡಿಎಸ್ ಬೆಂಬಲ ಇಲ್ಲ ಎಂದು ಹೇಳಿದರು.
ದೇಶದಲ್ಲಿ ಮೋದಿ ಆಯ್ಕೆ ಮಾಡಿದ್ರೆ ಉಳಿತೀರಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ: ಮಹಾಲಿಂಗೇಶ್ವರ ಸ್ವಾಮೀಜಿ ಭವಿಷ್ಯ!
ಮುಂದುವರೆದು, ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಸೋಲಿಸಬೇಕಾದರೆ, ಕಾಂಗ್ರೆಸ್ ಪಕ್ಷ ನಮ್ಮೆಲ್ಲರನ್ನ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಕಾಂಗ್ರೆಸ್ ಗೆ ಬೆಂಬಲ ಕೊಡೊಕೆ ರೆಡಿ ಅಂತ ಸಂದೇಶ ನೀಡಿದರು. ಇಂಡಿ (INDIA) ಒಕ್ಕೂಟಕ್ಕೆ ಬೆಂಬಲ ಕೊಡ್ತೀನಿ. ಇಂದಿನ ಸಭೆ ನಿರ್ಣಯ ದೇವೆಡಗೌಡರಿಗೆ ತಿಳಿಸೋಕೆ ಒಂದು ಕೋರ್ ಕಮಿಟಿ ರಚನೆ ಮಾಡಲಾಗಿದೆ. ಈ ಕಮಿಟಿಯೂ ದೇವೇಗೌಡರನ್ನ ಭೇಟಿಯಾಗಿ ಸಭೆ ಮಾಹಿತಿ ನೀಡಲಿದೆ ಎಂದು ತಿಳಿಸಿದರು.
ದೇಶದಲ್ಲಿ ಮೋದಿ ಆಯ್ಕೆ ಮಾಡಿದ್ರೆ ಉಳಿತೀರಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ: ಮಹಾಲಿಂಗೇಶ್ವರ ಸ್ವಾಮೀಜಿ ಭವಿಷ್ಯ!
ಬಿಜೆಪಿಯೊಂದಿಗೆ ಲೋಕಸಭಾ ಚುನಾವಣೆ ವೇಳೆ ಮೈತ್ರಿ ಮಾಡಿಕೊಳ್ಳಬೇಡಿ ಅಂತ ದೇವೇಗೌಡರಿಗೆ ಮನವಿ ಮಾಡಲಾಗುತ್ತದೆ. ನಮ್ಮ ಮಾತಿನ್ನು ಧಿಕ್ಕರಿಸಿ ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸಿದರೆ ಮುಂದಿನ ನಿರ್ಧಾರ ನಾವು ತೆಗೆದುಕೊಳ್ಳುತ್ತೇವೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಉಚ್ಚಾಟನೆ ಮಾಡೋಕೆ ಕಾಲ ಪಕ್ವ ಆಗಿಲ್ಲ. ನಮ್ಮ ನಿರ್ಣಯವನ್ನ ವಿರೋಧ ಮಾಡಿದರೆ ಏನು ಆಗುತ್ತೆ ಅಂತ ಮುಂದೆ ಕಾದು ನೋಡಿ. ನಾನು ಜೆಡಿಎಸ್ ಪಕ್ಷ ಬಿಡೊಲ್ಲ. ಪಕ್ಷದಲ್ಲಿ ಇದ್ದು ಅಧಿಕಾರ ಚಲಾವಣೆ ಮಾಡ್ತೀನಿ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.