
ಶಿರಸಿ(ಜ.11): ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಮುಖ್ಯಸ್ಥರ ಭೇಟಿ ಮಾಡಲಿದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಸಂಗ್ರಾಮಕ್ಕೆ ನಮ್ಮ ಟೀಂ ಈಗಿನಿಂದಲೇ ಸಿದ್ಧಗೊಳ್ಳುತ್ತಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ನಗರದಲ್ಲಿ ಬುಧವಾರ ತಮ್ಮ ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ದಕ್ಷಿಣ ಭಾರತದಲ್ಲಿ ಯಾರಿಗೂ ಸಿಗದಷ್ಟು ಬಹುಮತದಿಂದ ಇಲ್ಲಿಯ ಜನತೆ ಬಿಜೆಪಿಯನ್ನು ಆರಿಸಿದ್ದು, ಈ ಬಾರಿ ಆ ದಾಖಲೆಯನ್ನೂ ಬಿಜೆಪಿ ಅಭ್ಯರ್ಥಿ ಮೀರಲಿದ್ದಾರೆ ಎಂದು ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ 2024: ಟಿಕೆಟ್ ಕೈತಪ್ಪುವ ಭೀತಿ, ನಾಗಸಾಧು ಭೇಟಿಯಾದ ಅನಂತ್ ಕುಮಾರ್ ಹೆಗಡೆ..!
ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಈ ಬಾರಿಯೂ ಬಿಜೆಪಿ ಭರ್ಜರಿ ವಿಜಯ ಸಾಧಿಸಲಿದೆ. ಗೆಲುವು ಬಿಜೆಪಿಯದೇ ಎಂದು ಕಾಂಗ್ರೆಸ್‌ನವರಿಗೂ ಸ್ಪಷ್ಟವಾಗಿದ್ದು, ಅವರು ಹತಾಶರಾಗಿದ್ದಾರೆ. ಪ್ರಬಲ ಬಾಲರ್ ವಿರುದ್ಧ ಸಿಕ್ಸರ್ ಬಾರಿಸಿದರಷ್ಟೇ ಬ್ಯಾಟ್ಸ್‌ಮನ್, ಪ್ರೇಕ್ಷಕರಿಗೂ ಖುಷಿ. ಕಾಂಗ್ರೆಸ್ ಪ್ರತಿರೋಧ ಪ್ರಬಲವಿದ್ದಷ್ಟೂ ಬಿಜೆಪಿ ಅಭ್ಯರ್ಥಿ ಬಲಯುತ ಗೆಲುವು ಸಾಧಿಸಲಿದ್ದಾನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.