* ಕಾಂಗ್ರೆಸ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ
* ಅಂಬೇಡ್ಕರ್ ಅಂತ್ಯಸಂಸ್ಕಾರ ಮಾಡಲು ದೆಹಲಿಯಲ್ಲಿ ಅವರು ಜಾಗ ಕೊಡಲಿಲ್ಲ
* ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರು ಕಾಂಗ್ರೆಸ್‌ನವರು
ಹಾಸನ(ಏ.24): ಹಾಸನ(Hassan) ಜಿಲ್ಲೆಯಲ್ಲಿ ಎರಡು ಆಯ್ಕೆಗಳು ಇವೆ. ಒಂದು ಜೆಡಿಎಸ್ ಅಥವಾ ಬಿಜೆಪಿ, ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತ ಆಗಿದೆ. ಜೆಡಿಎಸ್ ಹಾಗೂ ಬಿಜೆಪಿ ನಡುವೆ ಹಾಸನ ಜಿಲ್ಲೆಯಲ್ಲಿ ರಾಜಕಾರಣ ನಡೆಯುತ್ತಿದೆ. ಜೆಡಿಎಸ್ ಪಕ್ಷದವರು ಯಾವ ರೀತಿ ಅಂತ ಹೇಳಿದ್ರೆ, ನಾನು ಯಾರ ಬಗ್ಗೆ ಹೇಳ್ತಿನಿ ಅಂತ ನಿಮಗೆಲ್ಲ ಗೊತ್ತಿರುತ್ತೆ, ಒಬ್ಬ ದಲಿತ ಸಮಾಜದ ಬಂಧು ಅವರ ಮನೆಯೊಳಗೆ ಹೋಗಿರುವ ಒಂದು ನಿದರ್ಶನವೂ ನಮ್ಮ ಕಣ್ಮುಂದೆ ಇಲ್ಲ. ಇದನ್ನು ನಾನು ಬಹಳ ಪ್ರಾಮಾಣಿಕತೆಯಿಂದ ಹೇಳುತ್ತೇನೆ ಅಂತ ಹೇಳುವ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಬಿಜೆಪಿ ಶಾಸಕ ಪ್ರೀತಂ(Preetham Gowda) ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು(ಭಾನುವಾರ) ನಗರದಲ್ಲಿ ನಡೆದ ಶಾಸಕ ಎನ್.ಮಹೇಶ್(N Mahesh) ಅಭಿಮಾನಿಗಳು ಹಾಗೂ ಬೆಂಬಲಿಗರು ಬಿಜೆಪಿ(BJP) ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಪ್ರೀತಂಗೌಡ, ದೇವೇಗೌಡರ(HD Devegowda) ಕುಟುಂಬ ದಲಿತ(Dalit) ವಿರೋಧಿ ಕುಟುಂಬ ಎಂದು ಕುಟುಕಿದ್ದಾರೆ.
Karnataka Politics: ಹಾಸನಕ್ಕೆ ನಾನೇ ಸಿಎಂ, ಡಿಕೆಶಿ ದೊಡ್ಡ ಲೀಡರ್!
ದಲಿತ ಬಂಧುಗಳು ದೊಡ್ಡಗೌಡರ ಮನೆಗೆ ಹೋದ ವೇಳೆ ಅವರು ಮನೆಯಿಂದ ಹೊರಟ್ಟಿದ್ದರೆ, ದಲಿತ ಸಮಾಜದ ಬಂಧುಗಳನ್ನು ನೋಡಿದರೆ ಮತ್ತೆ ಮನೆಯೊಳಗೆ ಹೋಗಿ ಸ್ನಾನ ಮಾಡಿ ಬರುವ ಸಂಸ್ಕೃತಿಯನ್ನ ಒಗ್ಗೂಡಿಸಿಕೊಂಡಿದ್ದಾರೆ. ಅಂತಹ ನಾಯಕತ್ವ ಜೆಡಿಎಸ್(JDS) ಅವರದ್ದು, ಹಾಸನ ಜಿಲ್ಲೆಯಲ್ಲಿ ದಲಿತ ಸಮಾಜವನ್ನು ಯಾರು ಕೇವಲವಾಗಿ ನೋಡ್ತಾರೆ ಅಂದರೆ ಅದು ಜಾತ್ಯಾತೀತ ಜನತಾದಳದವರು ಅಂತ ಗಂಭೀರವಾಗಿ ಆರೋಪಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್(Congress) ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರೀತಂ ಗೌಡ ಅವರು, ಕಾಂಗ್ರೆಸ್ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಅಂಬೇಡ್ಕರ್(Ambedkar) ಅವರ ಅಂತ್ಯಸಂಸ್ಕಾರ ಮಾಡಲು ದೆಹಲಿಯಲ್ಲಿ ಅವರು ಜಾಗ ಕೊಡಲಿಲ್ಲ. ಅದೇ ಅವರ ಗಾಂಧಿ ಕುಟುಂಬಕ್ಕೆ ಒಬ್ಬರ ಅಂತ್ಯ ಸಂಸ್ಕಾರ ಮಾಡಲು ಮೂವತ್ತು ಎಕರೆ, ಐವತ್ತು ಎಕರೆ ಅವರ ತಾತನ ಮನೆ ಆಸ್ತಿ ಅನ್ನುವ ರೀತಿಯಲ್ಲಿ ಘಾಟ್‌ಗಳನ್ನು ಮಾಡಿಕೊಂಡಿದ್ದಾರೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದವರು ಕಾಂಗ್ರೆಸ್‌ನವರು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರು ಕಾಂಗ್ರೆಸ್‌ನವರು ಅಂತ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.
ಭಾರತೀಯ ಜನತಾ ಪಾರ್ಟಿ ದಲಿತ ಸಮಾಜದ ಬಂಧುಗಳನ್ನು ಸಮಾನತೆಯಿಂದ ನೋಡುತ್ತದೆ. ಹಾಸನ ಜಿಲ್ಲೆಯಲ್ಲಿ ನಮ್ಮನ್ನೆಲ್ಲ ಕಾಪಾಡುವವರು ಯಾರೂ ಎಂಬ ಪ್ರಶ್ನೆಯಿತ್ತು, ನಿಮ್ಮ ಹಳ್ಳಿಗೆ ಹೋಗಿ ಧೈರ್ಯವಾಗಿ ಹೇಳಿ ನರೇಂದ್ರ ಮೋದಿ, ಅಮಿತ್ ಶಾ ಇದ್ದಾರೆ ಅಂತ ತಿಳಿಸಿದ್ದಾರೆ.
400 ಹೋತ ಬಲಿಕೊಟ್ಟು ದೇವಿಗೆ ಹರಕೆ ತೀರಿಸಿದ ಬಿಜೆಪಿ ಶಾಸಕ ಪ್ರೀತಂಗೌಡ
ಹಾಸನ: ಶಾಸಕ ಪ್ರೀತಂ ಜೆ.ಗೌಡ(Preetham Gowda) ಅವರು ಬುಧವಾರ ಹಾಸನದ ಶಕ್ತಿ ದೇವತೆ ಪುರದಮ್ಮನಿಗೆ ಮೇಕೆ(Goat) ಬಲಿ ಕೊಟ್ಟು ಹರಕೆ ತೀರಿಸಿದ್ದರು. ಉದ್ದೂರು ರಿಂಗ್ ರಸ್ತೆ ಬಳಿ ಸಾವಿರಾರು ಜನರಿಗೆ ಬಾಡೂಟದ ಔತಣವನ್ನೂ ಏರ್ಪಡಿಸಿದ್ದರು.
Legislative Council; 'ನಿಂಬೆಹಣ್ಣನ್ನು ನಿಂಬೆ ಹಣ್ಣಿನಿಂದಲೇ ತೆಗೆಯಬೇಕು' ಪ್ರೀತಂ ಪಾಠ!
ಏ.07 ರಂದು ಹರಕೆ ತೀರಿಸುವ ಹಿನ್ನೆಲೆಯಲ್ಲಿ ದೇವಿಗೆ(Puradamma Devi) ವಿಶೇಷ ಅಲಂಕಾರ ಮಾಡಲಾಗಿತ್ತು. ಕುಟುಂಬ ಸಮೇತರಾಗಿ ಆಗಮಿಸಿದ್ದ ಶಾಸಕರು, ತಾವು ಈ ಹಿಂದೆ ಸಂಕಲ್ಪ ಮಾಡಿಕೊಂಡಂತೆ ಪೂಜೆ ಸಲ್ಲಿಸಿ ಹೋತವನ್ನು ಹರಕೆಯಾಗಿ ನೀಡಿದರು. ನಂತರ 400 ಹೋತಗಳನ್ನು ಬಲಿ ಕೊಡಲಾಗಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ್ದ ಅವರು, ತಾವು ಈ ಹಿಂದೆ ಕ್ಷೇತ್ರದ ಜನರ ಹಿತದೃಷ್ಟಿಯಿಂದ ದೇವಿಯಲ್ಲಿ ಹರಕೆ ಹೊತ್ತಿದ್ದೆ. ಇದೀಗ ಪುರದಮ್ಮನ ಕೃಪೆಯಿಂದ ಅಂದುಕೊಂಡತೆ ಒಳ್ಳೆಯದೇ ಆಗುತ್ತಿದೆ. ಹಾಗಾಗಿ ಬಂದು ಹರಕೆ ತೀರಿಸಿದ್ದೇನೆ ಎಂದರು. ತಾಯಿ ಏನು ಕೇಳಿದರೂ ಇಲ್ಲ ಎಂದಿಲ್ಲ. ಹಳೆಯ ಹರಕೆಯನ್ನು ಪೂರೈಸಿದ್ದೇನೆ. ಹೊಸದನ್ನು ಕೊಟ್ಟರೆ ಮತ್ತೊಮ್ಮೆ ಪ್ರಸಾದ ಕೊಡುತ್ತೇನೆ. ದೇವರ(God) ಸೇವೆ ಮಾಡುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ್ದರು.