ಪಕ್ಷದ್ರೋಹಿ ಪಕ್ಷ ಬಿಡಲಿ: ಚಾಮುಂಡೇಶ್ವರಿ ಸೋಲಿನ ಬಗ್ಗೆ ಸಿದ್ದು ಸ್ಫೋಟಕ ಹೇಳಿಕೆ..!

By Suvarna News  |  First Published Dec 18, 2020, 4:51 PM IST

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2018ರ ಚುನಾವಣೆಯ ಸೋಲಿನ ನೋವುಗಳನ್ನು ಕಾರ್ಯಕರ್ತರ ಮುಂದೆ ತೋಡಿಕೊಂಡರು. ಅಲ್ಲದೇ ಇದೇ ವೇಳೆ  ಚಾಮುಂಡೇಶ್ವರಿ ಸೋಲಿನ ಬಗ್ಗೆ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.


ಮೈಸೂರು, (ಡಿ.18): ನಾನು ಇಷ್ಟೊಂದು ಕೆಟ್ಟದ್ದಾಗಿ ಸೋಲ್ತೀನಿ ಎಂದು ಭಾವಿಸಿರಲಿಲ್ಲ. ನನ್ನ ಸೋಲಿಗೆ ಜೆಡಿಎಸ್ ಮತ್ತು ಬಿಜೆಪಿ ಜತೆಗೆ ನಮ್ಮ ಪಕ್ಷದವರೂ ಕಾರಣ. ಪಕ್ಷ ವಿರೋಧಿಗಳು ಆತ್ಮಾವಲೋಕನ ಮಾಡಿಕೊಂಡು ಅವರಾಗಿಯೇ ಕಾಂಗ್ರೆಸ್​ನಿಂದ ಹೊರ ಹೋಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

"

Tap to resize

Latest Videos

ಶುಕ್ರವಾರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು ಸಿದ್ದರಾಮಯ್ಯ, ಕಳೆದ ನಾನು ಚುನಾವಣೆಯಲ್ಲಿ ಸೋತ ಮೇಲೆ ಕ್ಷೇತ್ರದ ಕಾರ್ಯಕರ್ತರ ಸಭೆ ಮಾಡಲು ಆಗಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ ನಿಜ. ಹಾಗೇ ನನಗೆ ಹೆಚ್ಚು ಮಾನಸಿಕ ವೇದನೆ ಕೊಟ್ಟ ಕ್ಷೇತ್ರವೂ ಹೌದು ಎಂದು ಭಾವುಕರಾದರು. 

"

ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಬಗ್ಗೆ ಗುಟ್ಟು ಬಿಚ್ಚಿಟ್ಟ ಸಿದ್ದು..!

ನಾನು ಬಾದಾಮಿಯಲ್ಲಿ ಗೆಲ್ಲದಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ನಾನು ಮತ್ತೆ ಚುನಾವಣೆಗೆ ನಿಲ್ಲುತ್ತೇನೋ, ಇಲ್ಲವೋ ಗೊತ್ತಿಲ್ಲ. ಆದ್ರೆ ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಮರ್ಮಾಘಾತ ಮಾತ್ರ ಸಹಿಸಿಕೊಳ್ಳಲು ಆಗ್ತಿಲ್ಲ ಎಂದರು

"

ಚುನಾವಣೆ ವೇಳೆ ನಾನು ಬಾದಾಮಿಗೆ ಹೋಗಲಿಲ್ಲ. ಆದ್ರೂ ಅಲ್ಲಿನ ಜನ ನನ್ನನ್ನು ಗೆಲ್ಲಿಸಿದ್ರು. ನೀವು ಸೋಲಿಸಿದ ಹಾಗೇ ಅವರೂ ಸೋಲಿಸಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ಈ ರಾಜ್ಯದ ಭವಿಷ್ಯ ಏನಾಗುತ್ತಿತ್ತು? ನಾನು ಗೆದಿದ್ದರೆ ಮತ್ತೊಮ್ಮೆ ಸಿಎಂ ಆಗುತ್ತಿದ್ದನೇನೋ . ಮತ್ತೆ ಸಿಎಂ ಆಗುವಂತಹ ಅವಕಾಶವೂ ಇತ್ತು. ಆದ್ರೆ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನು ಸೋಲಿಸಿದ್ರು ಎಂದು ಅಸಮಾಧಾನ ಹೊರಹಾಕಿದರು. 

"

2006ರ ಉಪ ಚುನಾವಣೆಯಲ್ಲಿನ ಗೆಲುವಿನ ಋಣ ತೀರಿಸೋಕೆ ಬಂದಿದ್ದೆ. ಅದು ನನ್ನ ಕೊನೆ ಚುನಾವಣೆ ಅಂದುಕೊಂಡು ಸ್ಪರ್ಧಿಸಿದ್ದೆ. ಆದ್ರೆ ಜನರು ನನ್ನನ್ನು ತಿರಸ್ಕಾರ ಮಾಡಿಬಿಟ್ಟರು. ಯಾವ ಕಾರಣಕ್ಕೆ ತಿರಸ್ಕರಿಸಿದ್ರು ಅಂತ ನೀವೇ ಒಮ್ಮೆ ಯೋಚನೆ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದರು.

 ಪಕ್ಷ ದ್ರೋಹಿಗಳು ಬಿಟ್ಟು ಹೋಗ್ಬೇಕು..
ನನ್ನ ಸೋಲಿಗೆ ಸ್ವಪಕ್ಷದ ಕೆಲವರೂ ಕಾರಣ. ಯಾರು ಪಕ್ಷದ ವಿರುದ್ಧ ಕೆಲಸ ಮಾಡುತ್ತಾರೋ ಅವರಂಥ ಖಳನಾಯಕರು ಇಲ್ಲ. ಪಕ್ಷ ತಾಯಿ ಸಮಾನ, ಅಂತಹ ತಾಯಿಯನ್ನು ಬಿಟ್ಟು ಪಕ್ಷ ದ್ರೋಹಿಗಳು ಹೋಗಬೇಕು. ಇಲ್ಲಿ ಯಾರೂ ಪಕ್ಷಗಳಿಗೆ ಅನಿವಾರ್ಯವಲ್ಲ, ವ್ಯಕ್ತಿಗಳಿಗೆ ಪಕ್ಷ ಅನಿವಾರ್ಯ ಎಂದು ಕಿಡಿಕಾರಿದರು.

"

ಚಾಮುಂಡೇಶ್ವರಿಯಲ್ಲಿ ಯಾರಾದರೂ ಒಬ್ಬ ಪರ್ಯಾಯ ಲೀಡರ್ ಹುಟ್ಟಿಕೊಳ್ಳುತ್ತಾರೆ. ಅದರ ಬಗ್ಗೆ ನೀವು ಯೋಚನೆ ಮಾಡಬೇಡಿ. ನಾನಾಗಲಿ, ಮತ್ತೊಬ್ಬನಾಗಲಿ ಇದ್ದೇ ಇರ್ತಾರೆ. ಚಾಮುಂಡೇಶ್ವರಿಯಲ್ಲಿ ಎಂಎಲ್‌ಎ ಆಗಲು ಸಾಕಷ್ಟು ಜನ ಅರ್ಹರಿದ್ದಾರೆ. ಕಳೆದ ಬಾರಿ ಆ ನರಸೇಗೌಡನಿಗೆ ಗೆಲ್ತೀಯಾ ನಿಂತ್ಕೋ ಅಂದೆ. ಅವನೇ ನಿಲ್ಲಲಿಲ್ಲ. ಇಲ್ಲಿ ನಾಯಕತ್ವಕ್ಕೆ ಕೊರತೆ ಆಗಲ್ಲ. ಮೊದಲು ನೀವು ಗ್ರಾಪಂ ಚುನಾವಣೆಯಲ್ಲಿ ನಮ್ಮ‌ ಪಕ್ಷದ ಬೆಂಬಲಿತರನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

click me!