ಮುಂದಿನ ವಿಧಾನಸಭಾ ಚುನಾವಣೆಗೆ ರಾಜ್ಯದ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಲು ಹೆಚ್ಚು ಕಡಿಮೆ 12 ದಿನದಲ್ಲಿ 11 ಜನ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ದೊಡ್ಡಬಳ್ಳಾಪುರದಲ್ಲಿ ಬಿ.ಮುನೇಗೌಡರ ಹೆಸರು ಘೋಷಣೆ ಮಾಡುತ್ತೇವೆ.
ದೊಡ್ಡಬಳ್ಳಾಪುರ (ಡಿ.01): ಮುಂದಿನ ವಿಧಾನಸಭಾ ಚುನಾವಣೆಗೆ ರಾಜ್ಯದ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಲು ಹೆಚ್ಚು ಕಡಿಮೆ 12 ದಿನದಲ್ಲಿ 11 ಜನ ಅಭ್ಯರ್ಥಿ ಘೋಷಣೆ ಮಾಡಿದ್ದೇವೆ. ದೊಡ್ಡಬಳ್ಳಾಪುರದಲ್ಲಿ ಬಿ.ಮುನೇಗೌಡರ ಹೆಸರು ಘೋಷಣೆ ಮಾಡುತ್ತೇವೆ. ಆದರೆ ಇಲ್ಲಿ ಕೆಲ ಸಮಸ್ಯೆಗಳಿವೆ. ಅದನ್ನು ಪರಿಹಾರ ಮಾಡುತ್ತೇನೆ. ಈಗಾಗಲೇ ಪಟ್ಟಿಅಂತ್ಯವಾಗಿದೆ. ಅದರಲ್ಲಿ ದೊಡ್ಡಬಳ್ಳಾಪುರ ಅಭ್ಯರ್ಥಿ ಹೆಸರೂ ಕೂಡ ಇರಲಿದೆ. ದೊಡ್ಡಬಳ್ಳಾಪುರ ಗೆಲ್ಲೋದೆ ನಮ್ಮ ಗುರಿ ಎಂದರು.
ತಾಲೂಕಿನ ಮಧುರೆ ಶನಿಮಹಾತ್ಮ ದೇವಾಲಯಕ್ಕೆ ಭೇಟಿ ನೀಡಿದ ಎಚ್.ಡಿ.ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೊಡ್ಡಬಳ್ಳಾಪುರದಲ್ಲಿ ಘನತ್ಯಾಜ್ಯ ವಿಲೇವಾರಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಕಸವನ್ನು ಎಲ್ಲೆಂದರಲ್ಲಿ ಸುರಿಯುವ ಕೆಲಸ ನಡೆಯುತ್ತಿದೆ. ಮಂಡೂರಿನಲ್ಲಿ ಘನತ್ಯಾಜ್ಯ ತೆರವಿಗೆ 900ಕೋಟಿ ರುಪಾಯಿ ವ್ಯಯ ಆಗಿದೆ. ಹೀಗೇ ತ್ಯಾಜ್ಯ ವಿಲೇವಾರಿ ಮಾಡಿದರೆ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇಲ್ಲಿ ಕೆಲ ಮಾಫಿಯಾಗಳಿವೆ. ಕಸದ ಸಮಸ್ಯೆಯನ್ನು ಪರಿಹರಿಸಲು ಬಿಡಲ್ಲ. ನಮ್ಮ ಸರ್ಕಾರ ಬಂದ್ರೆ ಇದಕ್ಕೆ ಶಾಶ್ವತ ಪರಿಹಾರ ನೀಡುತ್ತೇವೆ ಎಂದರು.
ಜೆಡಿಎಸ್ ಸ್ವತಂತ್ರ ಸರ್ಕಾರಕ್ಕೆ ಅವಕಾಶ ಕೊಡಿ: ಎಚ್.ಡಿ.ಕುಮಾರಸ್ವಾಮಿ
ಅಸ್ಪೃಶ್ಯತೆ: ವಿರೋಧಿಗಳ ಅಪಪ್ರಚಾರಕ್ಕೆ ತಿರುಗೇಟು: ನಾನು ಮಾತನಾಡಿರೋ ಕೆಲ ಮಾತನ್ನ ಸೋಶಿಯಲ್ ಮೀಡಿಯಾದಲ್ಲಿ ತಿರುಚಿ ಹೇಳಲಾಗ್ತಿದೆ. ಜನರ ದಾರಿ ತಪ್ಪಿಸೋ ಕೆಲಸ ಮಾಡ್ತಿದ್ದಾರೆ. ಯಾವುದೇ ವ್ಯಕ್ತಿ ನನನ್ನು ಭೇಟಿ ಮಾಡಲು ಬಂದ್ರೆ ಅಸ್ಪತ್ರೃಶ್ಯವಾಗಿ ನೋಡಿಲ್ಲ. ಒಮ್ಮೆ ಸಿಎಂ ಆಗಿದ್ದಾಗ ನಾನು ಕೆ.ಆರ್ ಪೇಟೆಗೆ ಭೇಟಿ ನೀಡಿದ್ದೆ. ಒಬ್ಬ ಬಾಲಕಿ ನನ್ನ ಕಾರು ತಡೆದು ಹೃದಯ ಕಾಯಿಲೆ ಇದೆ ಎಂದು ದುಃಖ ತೋಡಿಕೊಂದಿದ್ದಳು. ಚಿಕಿತ್ಸೆ ಕೊಡಿಸಿ ಅಂತ ಮನವಿ ಮಾಡಿದ್ದಳು. ಸಾ.ರಾ. ಮಹೇಶ್‌ಗೆ ಹೇಳಿ ಬೆಂಗಳೂರಿನಲ್ಲಿ ಚಿಕಿತ್ಸೆ ಕೊಡಿಸಿದೆ. ಆ ಬಾಲಕಿಗೆ ಸಿಎಂ ನಿವಾಸದಲ್ಲೇ ವಾಸ್ತವ್ಯಕ್ಕೇ ಅವಕಾಶ ಕಲ್ಪಿಸಿ ಚಿಕಿತ್ಸೆ ಕೊಡಿಸಿದ್ದೆ. ಯಾವ ಸಿಎಂ ಆ ರೀತಿ ಮಾಡಿದ್ದಾರೆ ಅಂತ ಟೀಕೆ ಮಾಡುವವರು ಹೇಳಲಿ ಎಂದು ಸವಾಲೆಸೆದರು.
ನಾನು ಎಲ್ಲರನ್ನೂ ಸಮಾನವಾಗಿ ಕಾಣುತ್ತೇನೆ ಎಂದು ಕೃತಿಯಲ್ಲಿ ತೋರಿಸಿದ್ದೇನೆ. ಮೊನ್ನೆ ಇಬ್ರಾಹಿಂ ಹುಬ್ಬಳ್ಳಿಯಲ್ಲಿ ನಾನು ಸಿಎಂ ಅಭ್ಯರ್ಥಿ ಆಗ್ತೀನಿ. ಕುಮಾರಸ್ವಾಮಿ ದೆಹಲಿಗೆ ಹೋಗುವ ಸಮಯ ಬಂದಿದೆ ಅಂತ ಹೇಳಿದ್ದಾರೆ. ಆದ್ರೆ ನಮ್ಮಲ್ಲಿ ಮುಸ್ಲಿಮರ ಬಗ್ಗೆ, ಅವರು ಪಾಕಿಸ್ತಾನದವರು, ಪಾಕಿಸ್ತಾನಕ್ಕೆ ಕಳಿಸಿ ಅಂತ ಕೆಲವರು ಚರ್ಚೆ ಮಾಡುತ್ತಿದ್ದಾರೆ. ಬಿಜೆಪಿಯವರು ಈ ರೀತಿ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದ್ದೆ. ಯಾಕೆ ಮುಸ್ಲಿಮರು ಸಿಎಂ ಆಗಬಾರದಾ? ಅವರೇನು ಅಸ್ಪೃಶ್ಯರ ಅಂತಾ ಪ್ರಶ್ನೆ ಮಾಡಿದೆ. ನಾನು ಕೊಟ್ಟಈ ಹೇಳಿಕೆ ಅಸ್ಪೃಶ್ಯತೆಯನ್ನು ಪೋಷಿಸುವ ಉದ್ದೇಶ ಇಟ್ಟುಕೊಂಡು ಹೇಳಿದ್ದಲ್ಲ. ನಾನು ಅಸ್ಪೃಶ್ಯತೆಗೆ ವಿರೋಧಿ. ಅದೆಲ್ಲವನ್ನೂ ಕೃತಿಯಲ್ಲಿ ತೋರಿಸಿದ್ದೇನೆ. ಸ್ವಾತಂತ್ರ್ಯ ಬಂದು ಇಷ್ಟುವರ್ಷವಾದ್ರೂ ಹೀಗೆ ಚರ್ಚೆಯಾಗ್ತಿದೆ ಎಂದರು.
ಸಿದ್ದರಾಮಯ್ಯ ಹೇಳಿಕೆ ಏಕೆ ಚರ್ಚೆಯಾಗಲ್ಲ?: ಮೊನ್ನೆ ಸಿದ್ದರಾಮಯ್ಯ ಕೂಡ ಅವರೇನು ಅಸ್ಪೃಶ್ಯರ ಅಂತ ಒಂದು ಹೇಳಿದ್ದಾರೆ. ನನಗೂ ಯಾರೋ ಆ ವಿಡಿಯೋ ತೋರಿಸಿದರು. ಸಿದ್ದರಾಮಯ್ಶ ಹೇಳಿಕೆ ಬಗ್ಗೆ ಯಾಕೆ ಚರ್ಚೆ ಮಾಡಿಲ್ಲ. ನನ್ನ ಹೇಳಿಕೆ ಬಗ್ಗೆ ದೊಡ್ಡ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಇದನ್ನು ನೋಡಿದರೆ ತಿಳಿಯುತ್ತೆ, ಪಿತೂರಿ ಅಂತ. ಕಳೆದ 75 ವರ್ಷಗಳಿಂದ ದಲಿತರನ್ನು ಶೋಷಣೆ ಮಾಡಿದ ಜನ ನನ್ನ ಹೇಳಿಕೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ನನ್ನ ಬಳಿ ಕಷ್ಟಹೇಳಿಕೊಳ್ಳಲು ಬರುವ ಹೆಚ್ಚು ಜನ ಶೋಷಿತ ಜನರೇ. ಅಂತಹ ಜನಕ್ಕೆ ಆರ್ಥಿಕ ಮತ್ತು ಶೈಕ್ಷಣಿಕ ಚೈತನ್ಯ ಕಲಿಸುವುದೇ ನನ್ನ ಉದ್ದೇಶ. ಅದಕ್ಕೆ ಪಂಚರತ್ನ ಕಾರ್ಯಕ್ರಮ ರೂಪಿಸಿದ್ದೇನೆ ಎಂದರು.
ಅಪಪ್ರಚಾರಕ್ಕೆ ಸೊಪ್ಪು ಹಾಕಲ್ಲ: ರಾಜಕೀಯವಾಗಿ ರಾಷ್ಟ್ರೀಯ ಪಕ್ಷಗಳು ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿವೆ. ದುರ್ಬಳಕೆ ಮಾಡಿಕೊಳ್ಳುವವರು ಬಿಜೆಪಿಯಂತವರು. ಇದಕ್ಕೆ ನಾನು ಹೆದರಲ್ಲ. ಅಪಪ್ರಚಾರಕ್ಕೆ ಸೊಪ್ಪು ಹಾಕಲ್ಲ. ಕೆಲವರಿಗೆ ಸುಳ್ಳು ಹಬ್ಬಿಸೋದೆ ಕೆಲಸ ಎಂದರು.
Pancharatna Rathayatra: ಸ್ವಂತ ಬಲದ ಸರ್ಕಾರಕ್ಕೆ ಆಶೀರ್ವದಿಸಿ: ಎಚ್.ಡಿ.ಕುಮಾರಸ್ವಾಮಿ
3 ತಿಂಗಳಲ್ಲಿ ಮಾಡ್ತಾರಾ: ಸಚಿವ ಡಾ.ಕೆ.ಸುಧಾಕರ್ ನೆಲಮಂಗಲವನ್ನು ಸ್ಯಾಟಲೈಟ್ ಸಿಟಿ ಮಾಡುವ ವಿಚಾರವಾಗಿ ಜನತಾ ದರ್ಶನ ಕಾರ‍್ಯಕ್ರಮದಲ್ಲಿ ಹೇಳಿರುವುದು ನಗು ತರಿಸುವಂತಿದೆ. ಕಳೆದ ಮೂರೂವರೆ ವರ್ಷದಲ್ಲಿ ಮಾಡದವರು, ಇನ್ನು 3 ತಿಂಗಳಲ್ಲಿ ಮಾಡ್ತಾರಾ ಎಂಬುದು ಜನರ ಪ್ರಶ್ನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. 2006ರಲ್ಲಿ ಮೂರು ಸ್ಯಾಟಲೈಟ್ ನಗರ ಮಾಡಲು ಮುಂದಾದೆ. ಬಿಡದಿಯಲ್ಲಿ ಸ್ಯಾಟಲೈಟ್ ಟೌನ್ ಮಾಡುವಾಗ ಕಾಂಗ್ರೆಸ್‌ನವರು ವಿರೋಧಿಸಿದರು. ಈಗ ಬೆಂಗಳೂರು ಏನು ಮಾಡಿದ್ದಾರೆ ಎಂಬುದು ಗೊತ್ತಿಲ್ಲವೇ. ನೆಲಮಂಗಲ ಈಗಾಗಲೇ ಸಾಕಷ್ಟು ಬೆಳದಿದೆ. ಬೆಂಗಳೂರಿಗೂ ಸೇರಿಕೊಂಡಿದೆ. ಇನ್ಯಾವಾಗ ಇವರು ಸ್ಯಾಟಲೈಟ್ ಟೌನ್ ಮಾಡೋದು. ಬಹುಶಃ ಅವರು ಮುಂದಿನ ಚುನಾವಣೆ ಮುಗಿದ ಮೇಲೆ ಮಾಡಬಹುದೇನೋ ಎಂದು ವ್ಯಂಗ್ಯವಾಡಿದರು.