ನಾನು ಹೇಳಿದಂತೆ ಯಶಸ್ವಿ ಆಗದಿದ್ರೆ ಜೆಡಿಎಸ್ ಪಕ್ಷ ವಿಸರ್ಜನೆ: ಕುಮಾರಸ್ವಾಮಿ ಶಪಥ..!

Published : Jan 31, 2021, 05:55 PM IST
ನಾನು ಹೇಳಿದಂತೆ ಯಶಸ್ವಿ ಆಗದಿದ್ರೆ ಜೆಡಿಎಸ್ ಪಕ್ಷ ವಿಸರ್ಜನೆ:  ಕುಮಾರಸ್ವಾಮಿ ಶಪಥ..!

ಸಾರಾಂಶ

ನಾನು ಹೇಳಿದಂತೆ ಯಶಸ್ವಿ ಆಗದಿದ್ರೆ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಶಪಥ ಮಾಡಿದ್ದಾರೆ.

ಬಾಗಲಕೋಟೆ, (ಜ.31): ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಬಾಗಲಕೋಟೆಯಲ್ಲಿ ಇಂದು (ಭಾನುವಾರ) ನಡೆದ ಜೆಡಿಎಸ್ ಸಂಘಟನಾ ಸಮಾವೇಶದಲ್ಲಿ ಹೊಸ ಶಪಥ ಮಾಡಿದ್ದಾರೆ.

ಹೌದು...ಜೆಡಿಎಸ್ ಪಕ್ಷಕ್ಕೆ  ಒಂದು ಬಾರಿ ಆಶೀರ್ವಾದ ಮಾಡಿ. ನಾನು ಹೇಳಿದಂತೆ ಯಶಸ್ವಿ ಆಗದೇ ಇದ್ರೆ ಜೆಡಿಎಸ್ ಪಕ್ಷವನ್ನು ಡಿಸಾಲ್ವ್( ವಿಸರ್ಜನೆ) ಮಾಡುತ್ತೇನೆ ಎಂದು ಶಪಥ ಮಾಡಿದರು.

ಕುಮಾರಸ್ವಾಮಿ ಯಾವ ಸೀಮೆ ಲೀಡರ್, ಗುರುವಿನ ವಿರುದ್ಧ ಮಾಜಿ ಶಿಷ್ಯ ವಾಗ್ದಾಳಿ

ಕಾಂಗ್ರೆಸ್, ಬಿಜೆಪಿ ಎಲ್ಲ ಪಕ್ಷಗಳಿಗೂ ಆಶೀರ್ವಾದ ಮಾಡಿದ್ದೀರಿ. ನನಗೆ ಸ್ವತಂತ್ರ್ಯವಾಗಿ  5 ವರ್ಷ ಅಧಿಕಾರ ಕೊಡಿ. ಇನ್ನೊಬ್ಬರ ಮನೆ ಬಾಗಿಲಿಗೆ ಹೋಗೊ ತರಹ ಮಾಡಬೇಡಿ. ಐದು ವರ್ಷದ ಸರ್ಕಾರ ಕೊಟ್ರೆ ಹಲವು ಯೋಜನೆಗಳನ್ನು ತರುತ್ತೇನೆ. ನಾನು ಯಶಸ್ವಿ ಆಗದೇ ಇದ್ರೆ ಜೆಡಿಎಸ್ ಪಕ್ಷವನ್ನು ಡಿಸಾಲ್ವ್( ವಿಸರ್ಜನೆ) ಮಾಡ್ತೀನಿ. ಪಕ್ಷವನ್ನು ವಿಸರ್ಜನೆ ಮಾಡಿ ಜನರಿಗೆ ಕ್ಷಮೆ ಕೇಳಿ, ನಿಮಗ್ಯಾರಿಗೂ ಮುಖ ತೋರಿಸಲ್ಲ.ನಿಮ್ಮ ಮುಂದೆ ಬರೋದಿಲ್ಲ. ಕೇವಲ ಅಧಿಕಾರಕ್ಕಾಗಿ ಈ ಮಾತು ಹೇಳುತ್ತಿಲ್ಲ ಎಂದು ಖಡಕ್ ಆಗಿ ಹೇಳಿದರು.

2006ರಲ್ಲಿ ಸಿಎಂ ಇದ್ದಾಗ 200 ಮಾಶಾಸನ ಇತ್ತು.  ಅದನ್ನ 500ರೂ. ಗೆ ಹೆಚ್ಚಿಸಿದೆ. 5-10ಕೆಜಿ ಅಕ್ಕಿ ಉಚಿತವಾಗಿ ಕೊಟ್ರೆ ಬಡವರಿಗೆ ಅನುಕೂಲ ಆಗುತ್ತೆ ಅಂತಾ ಅಧಿಕಾರಿಗಳ ಜೊತೆ ಚರ್ಚೆ ಮಾಡಿದೆ. 10 ಕೆಜಿ ಉಚಿತ ಕೊಟ್ರೆ 30 ರೂ. ಕೊಟ್ಟಂತಾಗುತ್ತೆ ಇದರಿಂದ ಏನು ಅನುಕೂಲ ಆಗುತ್ತೆ. ಕನಿಷ್ಠ 400-400 ರೂ. ಮಾಶಾಸನ ಮಾಡಿದ್ರೆ ಮತ್ತೊಂದಕ್ಕೆ ಅನುಕೂಲ ಆಗುತ್ತೆ. ಅದಕ್ಕೆ  ರೂ. 200  ಇದ್ದ ಮಾಶಾಸನವನ್ನು 500 ರೂಗೆ ಏರಿಸಿದೆ. ಇದನ್ನೆಲ್ಲೂ ಪುಕ್ಕಟೆ ಅಕ್ಕಿ ಕೊಟ್ಟೆ ಅಂತಾ ಜಾಗಟೆ ಹೊಡೆಯಲಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯಗೆ  ಟಾಂಗ್ ಕೊಟ್ಟರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!