ಲೋಕಸಭಾ ಚುನಾವಣೆಗೆ ಇಂದು ಅಧಿಕೃತ ಚಾಲನೆ: ಮೊದಲ ಹಂತದ ಚುನಾವಣೆಗೆ ಇಂದಿನಿಂದ ನಾಮಪತ್ರ

By Kannadaprabha NewsFirst Published Mar 20, 2024, 10:19 AM IST
Highlights

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣಾ ಹಬ್ಬಕ್ಕೆ ಬುಧವಾರ ಚಾಲನೆ ಸಿಗಲಿದೆ. ಮೊದಲ ಹಂತದಲ್ಲಿ ಏ.19ರಂದು ಚುನಾವಣೆ ನಡೆಯಲಿರುವ ದೇಶದ 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಬುಧವಾರದಿಂದ ಆರಂಭವಾಗಲಿದೆ.

ನವದೆಹಲಿ (ಮಾ.20): ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಚುನಾವಣಾ ಹಬ್ಬಕ್ಕೆ ಬುಧವಾರ ಚಾಲನೆ ಸಿಗಲಿದೆ. ಮೊದಲ ಹಂತದಲ್ಲಿ ಏ.19ರಂದು ಚುನಾವಣೆ ನಡೆಯಲಿರುವ ದೇಶದ 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಬುಧವಾರದಿಂದ ಆರಂಭವಾಗಲಿದೆ.

ಮೊದಲ ಹಂತದಲ್ಲಿ ಅರುಣಾಚಲಪ್ರದೇಶ, ಅಂಡಮಾನ್‌ ಮತ್ತು ನಿಕೋಬಾರ್‌, ಆಂಧ್ರಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ, ದೆಹಲಿ, ಗೋವಾ, ಗುಜರಾತ್‌, ಹಿಮಾಚಲಪ್ರದೇಶ, ಹರ್ಯಾಣ, ಕೇರಳ, ಲಕ್ಷದ್ವೀಪ, ಲಡಾಖ್‌, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್‌, ಪುದುಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್‌, ತೆಲಂಗಾಣ ಮತ್ತು ಉತ್ತರಾಖಂಡದ 102 ಕ್ಷೇತ್ರಗಳಲ್ಲಿ ಚುನಾವಣಾ ಪ್ರಕ್ರಿಯೆಗಳು ಬುಧವಾರದಿಂದ ಆರಂಭವಾಗಲಿದೆ.

ಹತ್ಯೆಯಾದ ಬಿಜೆಪಿ ನಾಯಕನ ಸ್ಮರಿಸಿ ಪ್ರಧಾನಿ ಮೋದಿ ಕಣ್ಣೀರು!

ಮಾ.27ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಮಾ.28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮಾ.30 ನಾಮಪತ್ರ ಹಿಂಪಡೆಯಲು ಕಡೆಯ ಅವಕಾಶ ಇರಲಿದ್ದು, ಏ.19ರಂದು ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಘೋಷಣೆಯಾಗಲಿದೆ. ಉಳಿದಂತೆ 2ನೇ ಹಂತ ಏ.26ಕ್ಕೆ, 3ನೇ ಹಂತ ಮೇ 7ಕ್ಕೆ, 4ನೇ ಹಂತ ಮೇ 13, 5ನೇ ಹಂತ ಮೇ 20, 6ನೇ ಹಂತ ಮೇ 25, 7ನೇ ಹಂತ ಜೂನ್‌ 1ರಂದು ನಡೆಯಲಿದೆ.

ಕೇಂದ್ರ ಸಚಿವ ಸ್ಥಾನಕ್ಕೆ ಪಶುಪತಿ ರಾಜೀನಾಮೆ: ಬಿಹಾರ ಲೋಕಸಭಾ ಚುನಾವಣೆ ಸೀಟು ಹಂಚಿಕೆಯಿಂದ ತಮ್ಮನ್ನು ದೂರವಿಟ್ಟು ತಮ್ಮ ಅಣ್ಣನ ಮಗ ಚಿರಾಗ್‌ ಪಾಸ್ವಾನ್‌ ಜೊತೆ ಬಿಜೆಪಿ ಮೈತ್ರಿಕೊಂಡ ಬೆನ್ನಲ್ಲೇ, ಆರ್‌ಎಲ್‌ಜಪಿ ನಾಯಕ ಪಶುಪತಿ ಕುಮಾರ್‌ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ಎನ್‌ಡಿಎ ಮೈತ್ರಿಕೂಟಕ್ಕೆ ನೀಡಿರುವ ಬೆಂಬಲವನ್ನೂ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. 

ಮುಸ್ಲಿಂರ ಬಹುಪತ್ನಿತ್ವ ನೋಡಿ ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್ ಅಖ್ತರ್

ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ, ಪಶುಪತಿ ಕುಮಾರ್‌ ಜೊತೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಈ ಬಾರಿ ಅದು ಪಶುಪತಿ ಅವರ ಸೋದರ, ಕೇಂದ್ರದ ಮಾಜಿ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಅವರ ಜೊತೆ ಮೈತ್ರಿಕೊಂಡು ಅವರ ಪಕ್ಷಕ್ಕೆ 5 ಸ್ಥಾನ ನೀಡಿದೆ. ಈ ಹಿನ್ನೆಲೆಯಲ್ಲಿ ತಮಗೆ ಎನ್‌ಡಿಎ ಮೈತ್ರಿಕೂಟ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

click me!