ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ತಲಾ 13 ಎಂಪಿ ಸೀಟು: ಮೋದಿ ಸ್ಥಾನಕ್ಕೆ ಯಾರು?

Published : Aug 12, 2022, 06:49 AM IST
ಕರ್ನಾಟಕದಲ್ಲಿ ಬಿಜೆಪಿ, ಕಾಂಗ್ರೆಸ್‌ಗೆ ತಲಾ 13 ಎಂಪಿ ಸೀಟು: ಮೋದಿ ಸ್ಥಾನಕ್ಕೆ ಯಾರು?

ಸಾರಾಂಶ

‘ಇಂಡಿಯಾ ಟುಡೇ ಮೂಡ್‌ ಆಫ್‌ ದ ನೇಶನ್‌’ ಸರ್ವೇ 

ನವದೆಹಲಿ(ಆ.12): ಈಗ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎಗೆ 286 ಸ್ಥಾನ ಬರಲಿದ್ದು, ಸರಳ ಬಹುಮತ ಗಳಿಸಲಿದೆ ಎಂದು ‘ಇಂಡಿಯಾ ಟುಡೇ ಮೂಡ್‌ ಆಫ್‌ ದ ನೇಶನ್‌’ ಸರ್ವೇ ತಿಳಿಸಿದೆ. ಜೊತೆಗೆ ಕರ್ನಾಟಕದಲ್ಲಿ ಎನ್‌ಡಿಎ 13, ಮಹಾಗಠಬಂಧನ 13 ಮತ್ತು ಇತರರು 2 ಸ್ಥಾನ ಪಡೆಯಲಿದ್ದಾರೆ ಎಂದು ಹೇಳಿದೆ. ‘ಸಿ ವೋಟರ್‌’ ಸಹಯೋಗದಲ್ಲಿ ಆಗಸ್ಟ್‌ 10ಕ್ಕೆ ‘ಇಂಡಿಯಾ ಟುಡೇ’ ಈ ಸಮೀಕ್ಷೆ ನಡೆಸಿದೆ. ಸಮೀಕ್ಷೆ ಅನ್ವಯ, ಯುಪಿಎ 146 ಹಾಗೂ ಇತರರು 111 ಸ್ಥಾನ ಗಳಿಸಲಿದ್ದಾರೆ. ಎನ್‌ಡಿಎ ಶೇ.41, ಕಾಂಗ್ರೆಸ್‌ ನೇತೃತ್ವದ ಯುಪಿಎ ಶೇ.28 ಹಾಗೂ ಇತರರು ಶೇ.31ರಷ್ಟುಮತ ಪಡೆಯಲಿದ್ದಾರೆ ಎಂದು ಅದು ಭವಿಷ್ಯ ನುಡಿದಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 353 (ಬಿಜೆಪಿ 303), ಯುಪಿಎ 92 (ಕಾಂಗ್ರೆಸ್‌ 52) ಹಾಗೂ ಇತರರು 97 ಸ್ಥಾನದಲ್ಲಿ ಗೆದ್ದಿದ್ದರು.

‘ಈ ಸಂಖ್ಯೆಗಳಿಗೆ ಹೋಲಿಸಿದರೆ ಎನ್‌ಡಿಎ ಬಲ ಕುಸಿಯಲಿದೆ. ಆದರೂ ಅಧಿಕಾರಕ್ಕೆ ಬರಲು ಅದಕ್ಕೆ ಯಾವುದೇ ತೊಂದರೆಯಿಲ್ಲ. ಯುಪಿಎ ಹಾಗೂ ಇತರರ ಬಲ ಏರಲಿದೆ ಎಂಬುದು ವ್ಯಕ್ತವಾಗುತ್ತದೆ. ಆದರೆ ಚುನಾವಣೆಗೆ ಇನ್ನೂ 2 ವರ್ಷ (2024) ಇರುವ ಕಾರಣ ಆಗ ಪರಿಸ್ಥಿತಿ ಇನ್ನೂ ಬದಲಾಗಬಹುದಾಗಿದೆ’ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಬಿಹಾರದಲ್ಲಿ ಅಚ್ಚರಿಯ ಬೆಳವಣಿಗೆ, ನಿತೀಶ್‌ಗೆ ‘ಮಹಾಗಠಬಂಧನ’ ಆಫರ್!

ಪ್ರಧಾನಿ ಹುದ್ದೆಗೆ ಯಾರು ಸೂಕ್ತ?:

ಇನ್ನು ಪ್ರಧಾನಿ ಹುದ್ದೆಗೆ ಯಾರು ಸೂಕ್ತ ಎಂಬ ವಿಷಯದಲ್ಲಿ ಶೇ.53ರಷ್ಟುಜನರು ನರೇಂದ್ರ ಮೋದಿ, ಶೇ.9ರಷ್ಟುಜನರು ರಾಹುಲ್‌ ಗಾಂಧಿ, ಶೇ.6ರಷ್ಟುಜನರು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮತ್ತು ಶೇ.5ರಷ್ಟುಜನರು ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಬೆಂಬಲಿಸಿದ್ದಾರೆ.

ಮೋದಿ ಸ್ಥಾನಕ್ಕೆ ಯಾರು?:

ಪ್ರಧಾನಿ ಮೋದಿ ಸ್ಥಾನ ತುಂಬಲು ಯಾರು ಎಂಬ ಪ್ರಶ್ನೆಗೆ ಶೇ.25ರಷ್ಟುಜನರು ಅಮಿತ್‌ ಶಾ, ಶೇ.24ರಷ್ಟುಜನರು ಯೋಗಿ ಆದಿತ್ಯನಾಥ್‌ ಮತ್ತು ಶೇ.15ರಷ್ಟುಜನರು ನಿತಿನ್‌ ಗಡ್ಕರಿ ಅವರ ಹೆಸರನ್ನು ಸೂಚಿಸಿದ್ದಾರೆ.

ಗಠಬಂಧನ್‌ಗೆ ‘ತವರೂರಲ್ಲೇ’ ಆಘಾತ: ಯಾವ ಪಕ್ಷಕ್ಕೆ ಏನು ಸಂದೇಶ?

ಜನಪ್ರಿಯ ಸಿಎಂ:

ಇನ್ನು ಜನಪ್ರಿಯ ಮುಖ್ಯಮಂತ್ರಿಗಳ ಪೈಕಿ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ (ಶೇ.40), ದೆಹಲಿ ಸಿಎಂ ಕೇಜ್ರಿವಾಲ್‌ (ಶೇ.22) ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (ಶೇ.09)ರಷ್ಟುಮತ ಪಡೆದಿದ್ದಾರೆ.

ನ್‌ಡಿಎಗೆ 286, ಯುಪಿಎಗೆ 146 ಸ್ಥಾನ

ಮೈತ್ರಿಕೂಟ ಸ್ಥಾನ % ಮತ
ಎನ್‌ಡಿಎ 286 ಶೇ.41
ಮಹಾಘಠಬಂಧನ 146 ಶೇ.28
ಇತರರು 111 ಶೇ.31
ಕರ್ನಾಟಕ 
ಎನ್‌ಡಿಎ 13
ಮಹಾಘಠಬಂಧನ 13
ಇತರರು 02
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ