ಶ್ರೀರಾಮುಲು ಅವರ ಆರೋಗ್ಯ ಇಲಾಖೆ ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಖಾತೆಯನ್ನು ಕಿತ್ತುಕೊಳ್ಳಲಾಗಿದೆ. ಆದ್ರೆ, ಇದು ಯಡಿಯೂರಪ್ಪನವರ ಏಕಮುಖ ತೀರ್ಮಾನ ಅಲ್ಲ ಎಂದು ತಿಳಿದುಬಂದಿದೆ.
ಬೆಂಗಳೂರು, (ಅ.12): ಸಚಿವ ಸಂಪುಟ ಪುನರ್ ವಿಸ್ತರಣೆಗೂ ಮುನ್ನವೇ ಸಿಎಂ ಯಡಿಯೂರಪ್ಪ ಅವರು ಶ್ರೀರಾಮುಲು ಬಳಿ ಇದ್ದ ಆರೋಗ್ಯ ಖಾತೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯನ್ನು ವಾಪಸ್ ಪಡೆದಿದ್ದಾರೆ.
undefined
ಈ ಎರಡೂ ಖಾತೆಯ ಬದಲಿಗೆ ಡಿಸಿಎಂ ಗೋವಿಂದ ಕಾರಜೋಳ ಅವರ ಬಳಿಯಿದ್ದ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ಶ್ರೀರಾಮುಲುಗೆ ಕೊಟ್ಟಿದ್ದಾರೆ.
ಇದರಿಂದ ಬೇಸರಗೊಂಡಿರುವ ಶ್ರೀರಾಮುಲು, ಕೊರೋನಾದಂತಃ ಸಂದಿಗ್ಧ ಸಮಯದಲ್ಲಿ, ಅದರಲ್ಲೂ ಸಂಪುಟ ವಿಸ್ತರಣೆಗೂ ಮುನ್ನವೇ ಆರೋಗ್ಯ ಖಾತೆ ಕಿತ್ತುಕೊಂಡಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ. ತಾನು ಸರಿಯಾಗಿ ಕೆಲಸ ಮಾಡಿಲ್ಲ ಎಂಬ ಸಂದೇಶ ಹೋಗಲಿದೆ, ಇದು ತನ್ನ ಪಾಲಿಗೆ ಕಳಂಕ ಎಂದು ಶ್ರೀರಾಮುಲು ತಮ್ಮ ಆಪ್ತ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಇಲಾಖೆ ಖಾತೆ ಕಿತ್ತುಕೊಂಡ ಬೆನ್ನಲ್ಲೇ ಶ್ರೀರಾಮುಲುಗೆ ಮತ್ತೊಂದು ಶಾಕ್ ಕೊಟ್ಟ ಬಿಎಸ್‌ವೈ
ಯಡಿಯೂರಪ್ಪನವರ ಏಕಮುಖ ತೀರ್ಮಾನ ಅಲ್ಲ
ಹೌದು...ಶ್ರೀರಾಮುಲು ಅವರ ಖಾತೆ ಬದಲಾವಣೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಏಕಮುಖ ತೀರ್ಮಾನವಲ್ಲ ಎಂದು ಮೂಲಗಳು ಹೇಳುತ್ತಿವೆ.
ಹೈಕಮಾಂಡ್ ಗಮನಕ್ಕೂ ತರಲಾಗಿದ್ದು. ಕಳೆದ ಮೂರ್ನಾಲ್ಕು ದಿನದ ಹಿಂದೆ ಶ್ರೀರಾಮಲು ಖಾತೆ ಬದಲಾವಣೆ ಬಗ್ಗೆ ಹೈಕಮಾಂಡ್ ಪ್ರತಿನಿಧಿ ಜೊತೆ ಸಿಎಂ ಚರ್ಚೆ ಮಾಡಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಒಬ್ಬರಿಗೆ ನೀಡೋಣ. ಇನ್ನು ಹಿಂದುಳಿದ ವರ್ಗ ಮತ್ತು ಸಮಾಜ ಕಲ್ಯಾಣ ಒಬ್ಬರ ಬಳಿ ಇರಲಿ ಎಂದು ಬಿಎಸ್‌ವೈ, ಹೈಕಮಾಂಡ್ ಪ್ರತಿನಿಧಿ ಬಳಿ ಚರ್ಚೆ ಮಾಡಿದ್ದಾರೆ. ಅಲ್ಲದೇ ಖಾತೆ ಬದಲಾವಣೆ ಬಗ್ಗೆ ರಾಮುಲು ಗಮನಕ್ಕೂ ಇತ್ತು. ಕಾರಜೋಳ ಜೊತೆಯೂ ಸಿಎಂ ಚರ್ಚೆ ಮಾಡಿದ್ದರು ಎನ್ನಲಾಗಿದೆ.
ಶ್ರೀರಾಮುಲು ಖಾತೆ ಬದಲಾವಣೆ: ಡಾ.ಸುಧಾಕರ್ ಹೆಗಲಿಗೆ ಮತ್ತೊಂದು ಜವಾಬ್ದಾರಿ..!
ಇದೇ ಖಾತೆ ಬಯಸಿದ್ದ ರಾಮುಲು
ಯೆಸ್...ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡು ಬಿಎಸ್‌ವೈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂಪುಟ ರಚನೆ ವೇಳೆ ಶ್ರೀರಾಮುಲು ಅವರಿಗೆ ಆರೋಗ್ಯ ಇಲಾಖೆ ಖಾತೆ ನೀಡಲಾಗಿತ್ತು. ಆದ್ರೆ, ಇದಕ್ಕೆ ಶ್ರೀರಾಮುಲು ಆರೋಗ್ಯ ಖಾತೆ ಬದಲು ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಿ ಎಂದು ಬಿಎಸ್‌ವೈಗೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.