ಮಸ್ಕಿ, ಬಸವಕಲ್ಯಾಣ ಬೈ ಎಲೆಕ್ಷನ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ ಜೆಡಿಎಸ್...!

By Suvarna NewsFirst Published Nov 22, 2020, 4:00 PM IST
Highlights

ಮುಂಬರುವ ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆ ಕಣಕ್ಕೆ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಸದಿರಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಬೆಂಗಳೂರು, (ನ.22): ಮುಂಬರುವ ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವುದು ವ್ಯರ್ಥ. ಈಗಿನ ಪರಿಸ್ಥಿತಿ ಗಮನಿಸಿದರೆ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಬೇಡ ಅನ್ನಿಸುತ್ತದೆ ಎಂದರು.

"

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ವಾರ್ಡ್ ಕಚೇರಿ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಅವರು, 
ನಮಗೆ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮುಖ್ಯವಾಗಿದ್ದು ಈಗಿನ ಉಪಚುನಾವಣೆಯಲ್ಲಿ ಸ್ರ್ಪಸುವುದು ವ್ಯರ್ಥ. ಆದರೂ ಎರಡೂ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ನಾನು ಪಟ್ಟ ಹಿಂಸೆ ನನಗೇ ಗೊತ್ತು: ಬಿಜೆಪಿ, ಕಾಂಗ್ರೆಸ್ ಜತೆಗಿನ ಮೈತ್ರಿ ಅನುಭವ ಸ್ಮರಿಸಿಕೊಂಡ HDK

ಮಂಡ್ಯ, ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪ ಚುನಾವಣೆಗಳ ಸೋಲಿನ ಬಳಿಕ ನಮಗೆ ಮತ್ತಷ್ಟು ಸವಾಲು ಎದುರಾಗಿದೆ. ಕಾರ್ಯಕರ್ತರು ಹುರುಪಿನಿಂದ ಪಕ್ಷಕ್ಕೆ ಪುನಶ್ಚೇತನ ನೀಡಲು ಸಿದ್ದರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಚುನಾವಣೆಗಳಲ್ಲಿ ವ್ಯರ್ಥ ಕಸರತ್ತು ಹಾಕುವುದು ಸರಿಯಲ್ಲ, ಉಪ ಚುನಾವಣೆಗಳಲ್ಲಿ ಅಭ್ಯರ್ಥಿ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಪಕ್ಷ ಸಂಘಟನೆ ಚೆನ್ನಾಗಿಯೇ ಇದೆ. ಉಪ ಚುನಾವಣೆಗಳಲ್ಲಿ ಈಗ ಬಿಜೆಪಿಯ ವಿಧಾನವೇ ಬೇರೆ ಇದೆ. ಇಂಥ ಸಂದರ್ಭದಲ್ಲಿ ನಾವು ಉಪ ಚುನಾವಣೆ ಗೆಲ್ಲೋದು ಕಷ್ಟವೇ ಆಗಿದೆ. ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಹಣ ಹಾಗೂ ಅಧಿಕಾರ ಬಲದಿಂದ ಬಿಜೆಪಿ ಗೆಲುವು ಸಾಧಿಸಿದೆ ಎಂದು ಹೇಳಿದರು.
 

click me!