
ಬೆಂಗಳೂರು, (ಜೂನ್.18): ನಾಯಕತ್ವ ಬದಲಾವಣೆ ಕೂಗು ಬಲವಾಗಿದ್ದರಿಂದ ರಾಜ್ಯಕ್ಕೆ ಬಂದಿದ್ದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ದೆಹಲಿಗೆ ವಾಪಸ್ ಆಗಿದ್ದಾರೆ.
ಮೂರು ದಿನಗಳ ಕಾಲ ಸಚಿವರು, ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳ ಜತೆ ಸರಣಿ ಸಭೆ ಮಾಡಿ ಕೊನೆಗೆ ಒಂದು ಕಟ್ಟಪ್ಪಣೆ ಮಾಡಿ ತೆರಳಿದ್ದಾರೆ.
ಕೋರ್ ಕಮಿಟಿ ಸಭೆ ಅಂತ್ಯ: ಮೀಟಿಂಗ್‌ನಲ್ಲಿ ಚರ್ಚೆಯಾಗಿದ್ದನ್ನು ಬಿಚ್ಚಿಟ್ಟ ಸಚಿವ
ಪಕ್ಷದ ಹಾಗೂ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಖಡಕ್ ಸಂದೇಶ ಕೊಟ್ಟಿದ್ದಾರೆ. ಅಲ್ಲದೇ ನಾಯಕರುಗಳಿಗೆ ಕೆಲ ಸಲಹೆ ಸೂಚನೆಗಳನ್ನ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕರ ಅಭಿಪ್ರಾಯಗಳನ್ನ ಆಲಿಸಿರುವ ಅರುಣ್ ಸಿಂಗ್ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಸುಳಿವು ಸಹ ನೀಡಿಲ್ಲ. ಇದರಿಂದ ಬಿಎಸ್‌ವೈ ವಿರೋಧಿ ಬಣಕ್ಕೆ ಹಿನ್ನಡೆಯಾಗಿದೆ.
ವರದಿಯೊಂದಿಗೆ ದಿಲ್ಲಿಗೆ ಸಿಂಗ್
ಉಸ್ತುವಾರಿ ಅರುಣ್ ಸಿಂಗ್ ಎದುರು ಶಾಸಕರು ಸಚಿವ ಸಂಪುಟ ಪುನಾರಚನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಮಗೂ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಸಚಿವರ ವಿಚಾರದಲ್ಲಿ ಹಲವು ಶಾಸಕರಲ್ಲಿ ಆಕ್ಷೇಪಗಳಿವೆ. ಶಾಸಕರ ಕೆಲಸಗಳ ಬಗ್ಗೆ ನಿರ್ಲಕ್ಷ್ಯ. ಸಚಿವರಿಂದ ಅವರವರ ಇಲಾಖೆಯ ವರದಿ ಸಂಗ್ರಹ. ಶಾಸಕರ ಜೊತೆ ಚರ್ಚೆ ವೇಳೆಯೂ ಅಭಿಪ್ರಾಯ ಸಂಗ್ರಹ, ಸಚಿವರ ಕಾರ್ಯವೈಖರಿ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಈ ಎಲ್ಲಾ ವರದಿ ಮಾಡಿಕೊಂಡು ಅರುಣ್ ಸಿಂಗ್ ದಿಲ್ಲಿಗೆ ಹಾರಿದ್ದು, ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಮುಂದೆ ಇಡಲಿದ್ದಾರೆ. ಬಳಿಕ ಜೆ.ಪಿ. ನಡ್ಡಾ ಹಾಗೂ ಅಮಿತ್ ಶಾ ಯಾವ ನಿರ್ಣಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಒಟ್ಟಿನಲ್ಲಿ ನಾಯಕತ್ವ ಗೊಂದಲ ಇನ್ನೂ ಗೊಂದಲವಾಗಿಯೇ ಉಳಿದಿದ್ದು, ಸದ್ಯಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಸೇಫ್ ಆದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.