
ನವದೆಹಲಿ: ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಧಾನಿ ಕೂರುವ ಸ್ಥಳವನ್ನು ಆಕ್ರಮಿಸಿಕೊಂಡಿದ್ದ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಸದಸ್ಯರು, ಸ್ಪೀಕರ್ ಮುಂದಿನ ಟೇಬಲ್ ಮೇಲೇರಿ ಪೇಪರ್ ಹರಿದಿದ್ದಲ್ಲದೇ, ‘ಮೋದಿಗೆ ನಾವು ಏನು ಮಾಡ್ಬೋದು ನೋಡೋಣ’ ಎಂಬ ಬೆದರಿಕೆಯ ಸ್ವರೂಪದ ಮಾತುಗಳನ್ನು ಆಡಿದ್ದರು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರ ಮತ್ತು ಲೋಕಸಭಾ ಕಾರ್ಯಾಲಯದ ಮೂಲಗಳು ಇಂಥ ಬೆಳವಣಿಗೆ ನಡೆದಿದ್ದರ ಬಗ್ಗೆ ಬೆಳಕು ಚೆಲ್ಲಿವೆ.
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಲೋಕಸಭೆಯಲ್ಲಿ ಯಾರೊಬ್ಬರೂ ಕೈ ಎತ್ತುವ ಪ್ರಶ್ನೆಯೇ ಇಲ್ಲ. ಅಂತಹ ಕೆಲಸವನ್ನು ಯಾರೂ ಮಾಡುವುದಿಲ್ಲ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರ ಅನುಪಸ್ಥಿತಿಯನ್ನು ಸಮರ್ಥಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿರುವ ಲೋಕಸಭಾ ಸ್ಪೀಕರ್ ಅವರು ಈ ರೀತಿಯ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಸಂಬಂಧ ಕಾಂಗ್ರೆಸ್ ಮಹಿಳಾ ಸಂಸದರ ಜತೆಗೂಡಿ ಸ್ಪೀಕರ್ ಅವರಿಗೆ ಪತ್ರವನ್ನೂ ಪ್ರಿಯಾಂಕಾ ಬರೆದಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಅವರು ಲೋಕಸಭೆಯಲ್ಲಿ 11 ಮಹಿಳಾ ಸಂಸದರು ಇದ್ದು, ಅವರೆಲ್ಲಾ ಗಂಭೀರ ಸ್ವಭಾವದವರು. ಮೋದಿ ಅವರ ಮೇಲೆ ಹಲ್ಲೆ ಯತ್ನ ನಡೆದಿದೆ ಎಂಬ ಹೇಳಿಕೆಯನ್ನು ಸ್ಪೀಕರ್ ಅವರು ನೀಡಬಾರದಿತ್ತು. ಅವರಿಗೆ ಸರ್ಕಾರದ ಕಡೆಯಿಂದ ಒತ್ತಡವಿದೆ. ಸದನಕ್ಕೆ ಬರುವ ಧೈರ್ಯ ಮೋದಿ ಅವರಿಗೆ ಇಲ್ಲದ ಕಾರಣ ಸ್ಪೀಕರ್ ಅವರು ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಇದು ತಪ್ಪು ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರ ಜನವಿರೋಧಿ ನೀತಿಗಳ ವಿರುದ್ಧ ನಿರಂತರವಾಗಿ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದ ಕಾರಣ ನಮ್ಮನ್ನು ವಿನಾಕಾರಣ ಗುರಿಯಾಗಿಸಿಕೊಳ್ಳಲಾಗಿದೆ. ಮೋದಿ ಅವರು ಸದನಕ್ಕೆ ಗೈರು ಹಾಜರಾಗುತ್ತಿರುವುದಕ್ಕೆ ನಾವು ಕಾರಣ ಅಲ್ಲ. ಭಯದಿಂದ ಆ ರೀತಿ ಮಾಡುತ್ತಿದ್ದಾರೆ ಎಂದು ದೂರಿದರು.
ಮೋದಿ ಅವರತ್ತ ಕಾಂಗ್ರೆಸ್ ಸದಸ್ಯರು ನುಗ್ಗಿ ‘ಅನಿರೀಕ್ಷಿತ ಕೃತ್ಯ’ ಎಸಗುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸದನಕ್ಕೆ ಬಾರದಂತೆ ಅವರಿಗೆ ಸೂಚನೆ ನೀಡಿದ್ದೆ ಎಂದು ಸ್ಪೀಕರ್ ಅವರು ಕಳೆದ ವಾರ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.