ಬಿಜೆಪಿಯೊಂದಿಗೆ ಮತ್ತೊಂದು ಪಕ್ಷದ ಮೈತ್ರಿ ..?

By Web DeskFirst Published Nov 17, 2018, 11:09 AM IST
Highlights

ದೇಶದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ವಿವಿಧ ಪಕ್ಷಗಳು ಗೆಲುವಿಗಾಗಿ ಶ್ರಮಿಸುತ್ತಿದ್ದು, ಸರ್ಕಾರ ರಚನೆಗಾಗಿ ಕಸರತ್ತು ನಡೆಸುತ್ತಿವೆ. ಇದೇ ವೇಳೆ ಚತ್ತೀಸ್ ಗಢದಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಯಾವತಿ ಹೇಳಿದ್ದಾರೆ. 

ಚತ್ತೀಸ್ ಗಢ:  ಬಹುಜನ ಸಮಾಜವಾದಿ ಪಕ್ಷದ ಮುಖಂಡೆ  ಮಾಯಾವತಿ ಯಾವುದೇ ಪಕ್ಷದೊಂದಿಗಿನ ಚುನಾವಣಾ ಪೂರ್ವ ಮೈತ್ರಿಯನ್ನು ತಿರಸ್ಕರಿಸಿದ್ದಾರೆ.  

ಚತ್ತೀಸ್ ಗಡದಲ್ಲಿ ಸದ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಈಗಾಗಲೇ ಇಲ್ಲಿ ಅಜಿತ್ ಜೋಗಿ ಅವರೊಂದಿಗೆ  ಮೈತ್ರಿ ಮಾಡಿಕೊಂಡಿದ್ದು ಬಹುಮತ ಪಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 

ನಮ್ಮ ಮೈತ್ರಿಯ ಮೇಲೆ ಸಂಪೂರ್ಣ ವಿಶ್ವಾಸವಿದ್ದು ,  ಅದು ಹೇಗೆ ಬಿಜೆಪಿಯೊಂದಿಗೆ  ಮೖತ್ರಿ ಮಾಡಿಕೊಳ್ಳಲು ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ. 

ಅಲ್ಲದೇ ಈಗಾಗಲೇ ಒಂದು ಹಂತದ ಚುನಾವಣೆ ನಡೆದಿದ್ದು ಇನ್ನೊಂದು ಹಂತ ಚುನಾವಣೆ ಬಾಕಿ ಇದೆ. ಈ ವೇಳೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳವುದು ಸಾಧ್ಯವೇ ಎಂದಿರುವ ಅವರು ಇದೊಂದು ಅಸಂಬದ್ದ ಪ್ರಶ್ನೆ ಎಂದು ಹೇಳಿದ್ದಾರೆ. 

ಒಂದು ವೇಳೆ ನಮಗೆ ಸರ್ಕಾರ ರಚನೆ ಮಾಡಲು ಸಾಧ್ಯವಾಗದಿದ್ದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಾಗಿ ಹೇಳಿದ್ದಾರೆ.

ಚತ್ತೀಸ್ ಗಢದಲ್ಲಿ ಒಟ್ಟು ಹಂತದ ಚುನಾವಣೆ ನಡೆಯುತ್ತಿದೆ. ನವೆಂಬರ್ 12 ರಂದು ಒಂದು ಹಂತದ ಚುನಾವಣೆ ಮುಕ್ತಾಯವಾಗಿದ್ದು, ಇನ್ನೊಂದು ಹಂತದ ಚುನಾವಣೆ ನವೆಂಬರ್ 20 ರಂದು ನಡೆಯುತ್ತಿದೆ.  

click me!