ಅಡಕೆ ಎಲೆಚುಕ್ಕೆ ರೋಗ ಮತ್ತು ಕೀಟದ ಬಾಧೆಯಿಂದಾಗುವ ಬೆಳೆ ಹಾನಿಗೆ ಪರಿಹಾರ ನೀಡಲು ತೋಟಗಾರಿಕೆ ಇಲಾಖೆಯಲ್ಲಿ ಯಾವುದೇ ಯೋಜನೆಯಿಲ್ಲ ಎಂದು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ಪ್ರತಾಪಸಿಂಹ ನಾಯಕ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಬೆಳ್ತಂಗಡಿ (ಫೆ.17): ಅಡಕೆ ಎಲೆಚುಕ್ಕೆ ರೋಗ ಮತ್ತು ಕೀಟದ ಬಾಧೆಯಿಂದಾಗುವ ಬೆಳೆ ಹಾನಿಗೆ ಪರಿಹಾರ ನೀಡಲು ತೋಟಗಾರಿಕೆ ಇಲಾಖೆಯಲ್ಲಿ ಯಾವುದೇ ಯೋಜನೆಯಿಲ್ಲ ಎಂದು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ಪ್ರತಾಪಸಿಂಹ ನಾಯಕ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಎಲೆ ಚುಕ್ಕಿ ಮತ್ತು ಹಳದಿ ರೋಗ ಬಾಧೆಯಿಂದಾಗಿ ಸಂಕಷ್ಟಕ್ಕೀಡಾಗಿರುವ ಅಡಕೆ ಬೆಳಗಾರರಿಗೆ ಸರ್ಕಾರ ಇದುವರೆಗೆ ನೀಡಿರುವ ಪರಿಹಾರದ ವಿವರಗಳನ್ನು ಕೇಳಿದಾಗ ಉತ್ತಿರಿಸಿದ ಸಚಿವರು ಯಾವುದೇ ಯೊಜನೆಗಳಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಚಿಕಮಗಳೂರು, ಶಿವಮೊಗ್ಗ, ಉತ್ತರಕನ್ನಡ, ದಕ್ಷಿಣ ಕನ್ನಡ, ಹಾಸನ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಅಡಕೆ ಎಲೆ ಚುಕ್ಕೆ ರೋಗದಿಂದ ಒಟ್ಟು 53,977 ಹೆಕ್ಟೇರ್ ಪ್ರದೇಶವು ಹಾನಿಗೀಡಾಗಿದ್ದು ಅಂದಾಜು 110181.12 ಲಕ್ಷ ರು. ಹಾನಿಗೀಡಾಗಿದೆ. ಅದನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಹಾಗೂ ಹಾನಿಗೀಡಾಗಿರುವ ಅಡಕೆ ತೋಟಗಳ ಪುನಶ್ಚೇತನಕ್ಕೆ ಇಲಾಖಾ ವತಿಯಿಂದ ಕ್ರಮಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಎಲೆಚುಕ್ಕೆ ಹಾಗೂ ಹಳದಿ ರೋಗದಿಂದ ಅಡಕೆ ಬೆಳೆ ಸಾಕಷ್ಟು ಹಾನಿಯಾಗಿರುವುದು ನಿಜ.
ಬರ ಪರಿಹಾರ ವಿತರಣೆಯಲ್ಲಿ ರೈತರಿಗೆ ಅನ್ಯಾಯವಾಗಬಾರದು: ಸಂಸದ ಪ್ರಜ್ವಲ್ ರೇವಣ್ಣ
ಈ ವಿಚಾರದಲ್ಲಿ ಇದುವರೆಗೆ ಪರಿಹಾರ ಕಲ್ಪಿಸಲು ಸಾಧ್ಯವಾಗಿಲ್ಲ. ಕೇವಲ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಸೀಮಿತವಾಗಿದೆ ಎಂದು ತಿಳಿಸಿದ್ದಾರೆ. ಇದರಿಂದಾಗಿ 562.33 ಕೋಟಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ ಎಂದರು. ಎಲೆಚುಕ್ಕಿ, ಹಳದಿ ರೋಗದ ಪರಿಹಾರಕ್ಕಾಗಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ. ಅಲ್ಲದೆ ರೈತರಲ್ಲಿ ವಿಶ್ವಾಸ ತುಂಬಿಸುವ ದೃಷ್ಟಿಯಿಂದ ಪ್ಯಾಕೇಜ್ ಘೋಷಿಸಬೇಕು ಎಂದು ಪ್ರತಾಪಸಿಂಹ ನಾಯಕ್ ಆಗ್ರಹಿಸಿದ್ದಾರೆ.
ಬೆಳೆಹಾನಿ ಪರಿಹಾರವಾಗಿ ಬರೀ 2 ಸಾವಿರ ರು. ನೀಡುವುದು ಖಂಡನೀಯ: ರಾಜ್ಯ ಸರ್ಕಾರ ರೈತರು ಬೆಳೆ ಹಾನಿ ಮಾಡಿಕೊಂಡಿದ್ದಕ್ಕೆ ಕೇವಲ ರು. 2 ಸಾವಿರ ಪರಿಹಾರ ನೀಡುತ್ತಿರುವುದು ಖಂಡನೀಯ ಎಂದು ಮಹದಾಯಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ವೀರಭಸಪ್ಪ ಹೂಗಾರ ಹೇಳಿದರು. ಅವರು ಇಲ್ಲಿ 3122ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿದರು. ಪ್ರಸಕ್ತ ವರ್ಷ ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಬಾರದೇ ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಿ ಹೋಗಿವೆ.
ಈ ಸಮಯದಲ್ಲಿ ರಾಜ್ಯ ಸರ್ಕಾರ ರೈತ ಸಮುದಾಯದ ಸಹಾಯಕ್ಕೆ ಬಂದು ಬೆಳೆ ಹಾನಿ ಮಾಡಿಕೊಂಡ ರೈತರ ಪ್ರತಿ ಎಕರೆಗೆ ರು. 50 ಸಾವಿರ ಪರಿಹಾರ ನೀಡುವುದು ಬಿಟ್ಟು, ಕೇಂದ್ರ ಸರ್ಕಾರ ತನ್ನ ಪಾಲಿನ ಬೆಳೆ ಹಾನಿ ಪರಿಹಾರ ನೀಡಿಲ್ಲವೆಂದು ರೈತರಿಗೆ ಕೇವಲ 2 ಸಾವಿರ ಪರಿಹಾರ ನೀಡಿ ರೈತರನ್ನು ಅವಮಾನಿಸಿದೆ. ಆದ್ದರಿಂದ ಸರ್ಕಾರ ಈ 2 ಸಾವಿರ ಪರಿಹಾರ ನೀಡುವ ಅವಶ್ಯಕತೆ ಇಲ್ಲ. ರೈತರೇ ಬೇಕಾದರೆ ಸರ್ಕಾರಕ್ಕೆ 2 ಸಾವಿರ ಪರಿಹಾರ ನೀಡುತ್ತವೆ ಎಂದು ಸವಾಲು ಹಾಕಿದರು. ಸರ್ಕಾರಕ್ಕೆ ಇನ್ನು ಕಾಲ ಮಿಂಚಿಲ್ಲ, ರೈತರಿಗೆ ಪ್ರತಿ 1 ಎಕರೆಗೆ ರು. 50 ಸಾವಿರ ಪರಿಹಾರ ನೀಡಬೇಕು,
ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಆಧಾರದಲ್ಲಿ ಬಿಜೆಪಿ ಮತ ಯಾಚನೆ: ಶೋಭಾ ಕರಂದ್ಲಾಜೆ
ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ಬೆಳೆ ವಿಮೆ ಬಿಡುಗಡೆ ಮಾಡದಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ರೈತರು ರಾಜ್ಯ ಸರ್ಕಾರಕ್ಕೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಸಿ.ಎಸ್. ಪಾಟೀಲ, ಎಸ್.ಬಿ. ಜೋಗಣ್ಣವರ, ಎ.ಪಿ. ಪಾಟೀಲ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಶಿವಪ್ಪ ಸಾತಣ್ಣವರ, ಅರ್ಜುನ ಮಾನೆ, ಶಂಕ್ರಪ್ಪ ಜಾಧವ, ಮಲ್ಲೇಶ ಅಬ್ಬಿಗೇರಿ, ವಾಸು ಚವಾಣ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ಯಲ್ಲಪ್ಪ ಚಲವಣ್ಣವರ ಇದ್ದರು.