ಸೋಲಿನ ಹೊಣೆ ಯಾರು ಹೊರಬೇಕಿಲ್ಲ: ಸಚಿವ ಸತೀಶ ಜಾರಕಿಹೊಳಿ

Published : Dec 04, 2023, 04:10 AM IST
ಸೋಲಿನ ಹೊಣೆ ಯಾರು ಹೊರಬೇಕಿಲ್ಲ: ಸಚಿವ ಸತೀಶ ಜಾರಕಿಹೊಳಿ

ಸಾರಾಂಶ

ಈ ಚುನಾವಣೆಗಳಲ್ಲಿ ವೋಟ್ ಬ್ಯಾಂಕ್ ಹೆಚ್ಚಾಗಿರಬಹುದು. ಅದು ಲೋಕಸಭಾ ಚುನಾವಣೆವರೆಗೆ ಇಂಟ್ಯಾಕ್ಟ್ ಆಗಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ಫಲಿತಾಂಶವನ್ನು ಸಮರ್ಥಿಸಿಕೊಂಡರು. ಲೋಕಸಭೆ, ವಿಧಾನಸಭೆಗೆ ಮತದಾರನ ಮೆಂಟ್ಯಾಲಿಟಿ ಬೇರೆ ಇರುತ್ತದೆ. ಒಂದಕ್ಕೊಂದು ಹೋಲಿಕೆ ಮಾಡಲು ಆಗಲ್ಲ ಎಂದ ಸಚಿವ ಸತೀಶ ಜಾರಕಿಹೊಳಿ 

ಬಾಗಲಕೋಟೆ(ಡಿ.04): ಇವತ್ತಿನ ಫಲಿತಾಂಶ ಸಮನಾಗಿ ಬರಬೇಕಿತ್ತು. ಛತ್ತಿಸಗಡದಲ್ಲಿ ನಾವು ಗೆಲ್ಲಬೇಕಿತ್ತು. ಒಂದರಲ್ಲಿ ಮುನ್ನೆಡೆ ಇದ್ದೇವು. ಆದರೆ ಮತದಾರರ ನಿರ್ಧಾರವೇ ಪೈನಲ್. ಅದನ್ನು ನಾವು ಒಪ್ಪುತ್ತೇವೆ. ಸೋಲಿನ ಹೊಣೆ ಯಾರು ಹೊರಬೇಕಿಲ್ಲ. ಎಲ್ಲರೂ ಪ್ರಾಮಾಣಿಕರಾಗಿ ಕೆಲಸ ಮಾಡಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಂಚರಾಜ್ಯ ಚುನಾವಣಾ ಪಲಿತಾಂಶವು ಬರುವ ಲೋಕಸಭೆಯ ಚುನಾವಣೆಗೆ ದಿಕ್ಸೂಚಿ ಆಗುತ್ತದೆಯೇ ಎಂಬ ಪ್ರಶ್ನೆಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ಚುನಾವಣೆಗಳಲ್ಲಿ ವೋಟ್ ಬ್ಯಾಂಕ್ ಹೆಚ್ಚಾಗಿರಬಹುದು. ಅದು ಲೋಕಸಭಾ ಚುನಾವಣೆವರೆಗೆ ಇಂಟ್ಯಾಕ್ಟ್ ಆಗಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ಫಲಿತಾಂಶವನ್ನು ಸಮರ್ಥಿಸಿಕೊಂಡರು. ಲೋಕಸಭೆ, ವಿಧಾನಸಭೆಗೆ ಮತದಾರನ ಮೆಂಟ್ಯಾಲಿಟಿ ಬೇರೆ ಇರುತ್ತದೆ. ಒಂದಕ್ಕೊಂದು ಹೋಲಿಕೆ ಮಾಡಲು ಆಗಲ್ಲ ಎಂದರು.

ಬಿಜೆಪಿ ಸ್ಟ್ರೋಕ್‌ಗೆ ಛತ್ತೀಸಘಡದಲ್ಲಿ ಕಾಂಗ್ರೆಸ್ ಧೂಳೀಪಟ, ಬುಡಕಟ್ಟು ನಾಯಕನಿಗೆ ಸಿಎಂ ಪಟ್ಟ?

ಸೋಲಿನ ಹೊಣೆ ಯಾರು ಹೊರಬೇಕಿಲ್ಲ:

ಪ್ರಣಾಳಿಕೆ ಪ್ರಕಾರ ಮಧ್ಯಪ್ರದೇಶ ನಮ್ಮ ಕೈ ವಶ ಆಗುತ್ತದೆ ಅನ್ನೋ ಆಶಯ ಇತ್ತು. ಆದರೆ ಅಲ್ಲಿಯ ಜನರ ತೀರ್ಮಾನ ಸ್ವಾಗತಿಸುತ್ತೇವೆ. ಕಾಂಗ್ರೆಸ್ ಊಹಿಸಿದಷ್ಟು ಫಲಿತಾಂಶ ಸಿಕ್ಕಿಲ. ಹೆಚ್ಚಿನ ಫಲಿತಾಂಶ ಪಡೆಯಲಿಕ್ಕೆ ನಾವು ಜನರನ್ನು ಮುಟ್ಟಲಿಕ್ಕೆ ಸಾಧ್ಯವಾಗಿಲ್ಲ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಜನರಿಗೆ ತಲುಪಿತ್ತು. ಬಿಜೆಪಿಯ ಭ್ರಷ್ಟಾಚಾರ ಜನತೆಗೆ ಮನವರಿಕೆ ಆಗಿತ್ತು. ಆದರೆ, ಇಂದು ಫಲಿತಾಂಶ ಹೊರಬಿದ್ದ ರಾಜ್ಯಗಳಲ್ಲಿ ನಮ್ಮ ಪ್ರಣಾಳಿಕೆ ಕೆಳಹಂತದ ಜನರಿಗೆ ತಲುಪಿಲ್ಲ. ಆದರೆ, ಕಳೆದ ಚುನಾವಣೆ ನೋಡಿದರೆ ಈ ಭಾರೀ ಮತಗಳ ಸಂಖ್ಯೆ ಹೆಚ್ಚಿದೆ, ಅದು ಸಂತೋಷದ ವಿಷಯ ಎಂದರು.

ರಾಜ್ಯದ ಗ್ಯಾರಂಟಿಗಳು ಅಲ್ಲಿ ಕಲಸ ಮಾಡಲಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಒಂದೊಂದು ರಾಜ್ಯಕ್ಕೆ ಒಂದು ತರ ಬೇರೆ ಇರುತ್ತದೆ. ಹೇಳಕ್ಕಾಗಲ್ಲ. ಭೌಗೋಳಿಕವಾಗಿ ಭಾಷೆ ಆಧರಿಸಿ ಎಲೆಕ್ಷನ್ ಆಗುತ್ತದೆ. ರಾಜ್ಯದಲ್ಲಿ ಆಗಿದ್ದು ಬೇರೆ, ಇದನ್ನೇ ಬೇರೆ ಕಡೆ ಹೋಲಿಕೆ ಮಾಡಲು ಆಗಲ್ಲ. ಸ್ಥಳೀಯ ರಾಜಕಾರಣವೇ ಬೇರೆ ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!