ಯಾವುದೇ ಚುನಾವಣೆ ನಡೆದರೂ ಬಿಜೆಪಿಗೆ ಗೆಲುವು ನಿಶ್ಚಿತ: ಕೆ.ಎಸ್‌.ಈಶ್ವರಪ್ಪ

By Kannadaprabha News  |  First Published Dec 7, 2022, 8:52 AM IST

ದೇಶದಲ್ಲಿ ಯಾವುದೇ ಚುನಾವಣೆ ನಡೆದರು ಬಿಜೆಪಿಯೇ ಗೆಲ್ಲುವುದು ನಿಶ್ಚಿತ. ಚುನಾವಣೆ ಮೊದಲೇ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಅನೇಕ ಸಮೀಕ್ಷೆಗಳು ಹೇಳಿದೆ. ಕರ್ನಾಟಕದಲ್ಲೂ ಬಹುಮತದಿಂದ ಅಧಿಕಾರ ಮಾಡುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.


ಶಿವಮೊಗ್ಗ (ಡಿ.7) : ದೇಶದಲ್ಲಿ ಯಾವುದೇ ಚುನಾವಣೆ ನಡೆದರು ಬಿಜೆಪಿಯೇ ಗೆಲ್ಲುವುದು ನಿಶ್ಚಿತ. ಚುನಾವಣೆ ಮೊದಲೇ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಅನೇಕ ಸಮೀಕ್ಷೆಗಳು ಹೇಳಿದೆ. ಕರ್ನಾಟಕದಲ್ಲೂ ಬಹುಮತದಿಂದ ಅಧಿಕಾರ ಮಾಡುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್‌ ಎಲ್ಲಿದೆ. ಹಾಗೋ, ಹೀಗೋ ಕರ್ನಾಟಕದಲ್ಲಿ ಕಾಂಗ್ರೆಸ್‌ ಇತ್ತು. ಇಲ್ಲಿ ಕಾಂಗ್ರೆಸ್‌ನ ಇಬ್ಬರು ನಾಯಕರು ಪೈಲ್ವಾನರಂತೆ ಹೊಡೆದಾಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಇನ್ನು ಕ್ಷೇತ್ರ ಯಾವುದೆಂದು ಗೊತ್ತಿಲ್ಲ. ಮಾರ್ಯಾದೆ ಉಳಿಸಿಕೊಳ್ಳಲು 224 ಕ್ಷೇತ್ರವು ನನ್ನದೇ ಎಂದು ಹೇಳುತ್ತಾರೆ. ಹಾಗಾದರೆ ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೆ ನಿಲ್ಲುತ್ತಿಲ್ಲ. ಕಾಂಗ್ರೆಸ್‌ ನಾಯಕರಿಗೆ ಕ್ಷೇತ್ರ ಯಾವುದು ಎಂದು ಗೊತ್ತಿಲ್ಲ ಎಂದರೆ ಹೇಗೆ? ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ವಿಪಕ್ಷ ನಾಯಕನ ಸ್ಥಾನದಲ್ಲೂ ಇರಲ್ಲ ಎಂದು ವ್ಯಂಗ್ಯವಾಡಿದರು.

Tap to resize

Latest Videos

ಬಿಜೆಪಿ ಸಂಘಟನಾತ್ಮಕವಾಗಿ ಮನೆ ಮನೆಗೆ ಭೇಡಿ ನೀಡಿದೆ. ನಮ್ಮೆಲ್ಲ ಪೇಜ್‌ ಪ್ರಮುಖರು ಮತದಾರರನ್ನು ಭೇಟಿಯಾಗಿದ್ದಾರೆ. ಸಂಪೂರ್ಣ ಬಹುಮತ ಬರುವುದು ನಿಶ್ಚಿತ ಎಂದರು.

ಜನಾರ್ದನ ರೆಡ್ಡಿ ರಾಜಕೀಯ ಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರು ಸ್ವತಂತ್ರರು ಅವರು ಹೊಸ ಪಕ್ಷ ಕಟ್ಟುತ್ತಾರೋ ಬಿಡುತ್ತಾರೋ ಗೊತ್ತಿಲ್ಲ. ಗಂಗಾವತಿಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸುವುದರ ಬಗ್ಗೆ ಮಾತುಕತೆ ನಡೆದಿದೆ ಎಂದು ಮಾಧ್ಯಮಗಳು ಹೇಳುತ್ತಿವೆ. ಅದರ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದರು.

ಬೀದಿಯಲ್ಲಿರುವ ನಾಯಿಯೂ ಜೆಡಿಎಸ್‌ಗೆ ಹೋಗಲ್ಲ: ಈಶ್ವರಪ್ಪ

ಸಂಪುಟ ವಿಸ್ತರಣೆ ಬಗ್ಗೆ ಕೂಡ ನನಗೆ ಏನು ತಿಳಿಯದು. ಅದು ಕೇಂದ್ರದ ನಾಯಕರ ನಿರ್ಧಾರಕ್ಕೆ ಬಿಟ್ಟವಿಚಾರ. ಚುನಾವಣೆಗೆ ಇನ್ನು ಕೇವಲ 4 ತಿಂಗಳು ಇರುವಾಗ ಕೇಂದ್ರದ ನಾಯಕರು ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತಕ್ಕೆ ಬರಲು ಎಲ್ಲಾ ತಂತ್ರಗಾರಿಕೆಯನ್ನು ಮಾಡುತ್ತಾರೆ ಎಂದರು.

ಮಹಾರಾಷ್ಟ್ರದ ಕೆಲವು ನಾಯಕರಿಗೆ ಮಾಡಲು ಉದ್ಯೋಗ ಇಲ್ಲ. ಅವರಿಗೆ ರಾಜ್ಯದ ಒಂದು ಹನಿ ನೀರು ಮತ್ತು ಭೂಮಿ ಯಾವುದು ಸಿಗಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರದ ಜನ ಅಣ್ಣ ತಮ್ಮಂದಿರಂತೆ ಇದ್ದಾರೆ. ಕೆಲವು ರಾಜಕಾರಣಿಗಳು ಗೊಂದಲ ಮೂಡಿಸುತ್ತಿದ್ದು, ಎರಡು ಕಡೆಯ ಜನ ಅವರಿಗೆ ಛೀಮಾರಿ ಹಾಕುತ್ತಿದ್ದಾರೆ. ನಮ್ಮ ಕರ್ನಾಟಕಕ್ಕೆ ಸೇರ ಬನ್ನಿ ಎಂದು ನಾನು ಹೇಳಿ ಮತ್ತೊಂದು ವಿವಾದ ಸೃಷ್ಟಿಮಾಡಲ್ಲ ಎಂದರು. Karnataka Assembly Election: ಕೈ ಅಭ್ಯರ್ಥಿ ಘೋಷಿಸಿದ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ!

click me!