ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ದದ ಭ್ರಷ್ಟಾ ಚಾರ ಪ್ರಕರಣಗಳಲ್ಲಿ ಅಭಿಯೋಜನೆಗೆ (ಪ್ರಾಸಿಕ್ಯೂಷನ್) ಅನುಮತಿ ನೀಡಲು ರಾಜ್ಯಪಾಲರು ಭಾಷೆಮತ್ತು ಅಸ್ಪಷ್ಟ ಮಾಹಿತಿ ಎಂಬ ತಾಂತ್ರಿಕ ಕಾರಣಗಳನ್ನು ಲೋಕಾಯುಕ್ತ ಪೊಲೀಸರ ಮುಂದಿಟ್ಟಿರುವ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಸೆ.03): ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ದದ ಭ್ರಷ್ಟಾ ಚಾರ ಪ್ರಕರಣಗಳಲ್ಲಿ ಅಭಿಯೋಜನೆಗೆ (ಪ್ರಾಸಿಕ್ಯೂಷನ್) ಅನುಮತಿ ನೀಡಲು ರಾಜ್ಯಪಾಲರು ಭಾಷೆಮತ್ತು ಅಸ್ಪಷ್ಟ ಮಾಹಿತಿ ಎಂಬ ತಾಂತ್ರಿಕ ಕಾರಣಗಳನ್ನು ಲೋಕಾಯುಕ್ತ ಪೊಲೀಸರ ಮುಂದಿಟ್ಟಿರುವ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ. ಮುಡಾ ಅಕ್ರಮ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಿದ ನಂತರ ಬಿಜೆಪಿ, ಜೆಡಿಎಸ್ ನಾಯಕರ ಪ್ರಕರಣದಲ್ಲಿ ತಾಂತ್ರಿಕ ಕಾರಣ ಮುಂದಿಟ್ಟಿರುವುದು ಕುತೂಹಲ ಮೂಡಿಸಿದೆ.
undefined
ಗಣಿಗಾರಿಕೆಗೆ ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಬಿಜೆಪಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಅಕ್ರಮ ಆಸ್ತಿ ಸಂಪಾದನೆ ಪ್ರಕರಣಗಳ ಸಂಬಂಧ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಗಾಲಿ ಜನಾರ್ದನ ರೆಡ್ಡಿ ವಿರು ದದ ದಾಖಲೆಗಳನ್ನು ಕನ್ನಡದಿಂದ ಭಾಷಾಂತರಿಸಿ ಸಲ್ಲಿ ಸುವಂತೆ ಪೊಲೀಸರಿಗೆ ರಾಜ್ಯಪಾಲರು ಸೂಚಿಸಿದ್ದಾರೆ. ರಾಜ್ಯ ಉಪಾಧ್ಯಕ್ಷ ಮುರುಗೇಶ್ ನಿರಾಣಿ ವಿರುದ್ಧದ ಪ್ರಕರಣದಲ್ಲಿ ಮಾಹಿತಿ ಅಸ್ಪಷ್ಟ ಎಂದಿರುವ ರಾಜ್ಯಪಾಲರು, ಹೆಚ್ಚುವರಿ ಮಾಹಿತಿ ಪೊಲೀಸರಿಗೆ ಸೂಚಿಸಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿದ್ದ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಲು ರಾಜ್ಯಪಾಲರು ನೀಡುವಂತೆ ಎಂದು ಮೂಲಗಳು ಹೇಳಿವೆ.
ಸಿಎ ಸೈಟ್: ಮಲ್ಲಿಕಾರ್ಜುನ ಖರ್ಗೆ ಟ್ರಸ್ಟ್, ಎಂಬಿಪಾಗೆ ಗೌರ್ನರ್ ಬಿಸಿ!
ಸಾವಿರಕ್ಕೂ ಅಧಿಕ ಪುಟಗಳ ದಾಖಲೆಗಳು: ಆದಾಯ ಕ್ಕಿಂತಲೂ ಅಧಿಕ ಆಸ್ತಿ ಸಂಪಾದನೆ ಆರೋಪ ಸಂಬಂಧ 9 ವರ್ಷಗಳ ಹಿಂದೆ ಜನಾರ್ದನ ರೆಡ್ಡಿ ವಿರುದ್ಧಲೋಕಾಯುಕ್ತ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸಿದ್ದರು.ತನಿಖೆ ಪೂರ್ಣಗೊಳಿಸಿದ ಪೊಲೀಸರು, ಆರೋಪ ಪಟ್ಟಿ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಮೇ 31ರಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಪತ್ರ ಸ್ವೀಕರಿಸಿದ ರಾಜ್ಯಪಾಲರು, ಪ್ರಕರಣ ಸಂಬಂಧ ಕೆಲ ಸ್ಪಷ್ಟಿಕರಣ ಕೋರಿ ಜೂ.26 ಲೋಕಾ ಯುಕ್ತ ಪೊಲೀಸರಿಗೆ ಪತ್ರ ಕಳು ಹಿಸಿದ ರು.ಪೊಲೀಸರು ಉತ್ತರಿಸಿದ ಬಳಿಕ ಭಾಷಾ ಸಮಸ್ಯೆ ಉದ್ಭವಿಸಿದೆ. ಜನಾರ್ದನ ರೆಡ್ಡಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕನ್ನಡದಿಂದ ಇಂಗ್ಲೀಷ್‌ಗೆ ಭಾಷಾಂ ತರಿಸಿ ಸಲ್ಲಿಸುವಂತೆ ರಾಜ್ಯಪಾಲರು ಆ.28ರಂದು ಲೋಕಾಯುಕ್ತ ಪೊಲೀಸರಿಗೆ ಸೂಚಿಸಿದ್ದಾರೆ. ಹೀಗಾಗಿ ರೆಡ್ಡಿ ಅವರ ವಿರುದ್ದ ಸುಮಾರು ಒಂದು ಸಾವಿರಕ್ಕೂ ಅಧಿಕ ಪುಟಗಳ ದಾಖಲೆಗಳನ್ನು ಈಗ ಅಧಿಕೃತ ಭಾಷಾ ತಜ್ಞರ ಮೂಲಕ ತರ್ಜುಮೆ ಮಾಡುವ ಅನಿವಾರ್ಯತೆ ಪೊಲೀ ಸರಿಗೆ ಎದುರಾಗಿದೆ ಎಂದು ಲೋಕಾಯುಕ್ತದ ಮೂಲಗಳು 'ಕನ್ನಡಪ್ರಭ' ಮಾಹಿತಿ ನೀಡಿವೆ.
ಕುಮಾರಸ್ವಾಮಿ ವಿರುದ್ಧ ತರ್ಜುಮೆ ಸಮಸ್ಯೆ: ಅದೇ ರೀತಿ 2007ರಲ್ಲಿ ಸಿಎಂ ಆಗಿದ್ದಾಗ ಸಂಡೂರು ತಾಲೂಕಿನಲ್ಲಿ 550 ಎಕರೆ ಭೂಮಿಯನ್ನು ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಅಕ್ರಮ ಗಣಿ ಗುತ್ತಿಗೆ ನೀಡಿದ ಪ್ರಕರಣ ಸಂಬಂಧ ಕುಮಾರಸ್ವಾಮಿ ವಿರುದ್ಧ ತನಿಖೆ ಮುಕ್ತಾಯಗೊಳಿಸಿದ್ದ ಲೋಕಾಯುಕ್ತ ಎಸ್‌ಐಟಿ ಪೊಲೀಸರು, 2023ರ ನವೆಂಬರ್‌ನಲ್ಲಿ ಆರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದರು. ಆದರೆ ಈ ಪ್ರಕರಣದಲ್ಲಿ ಸಹ ಎರಡು ಬಾರಿ ಸ್ಪಷ್ಟಿಕರಣ ಕೇಳಿದ ರಾಜ್ಯಪಾಲರು, ರೆಡ್ಡಿ ಬಳಿಕ ಕುಮಾರಸ್ವಾಮಿ ಪ್ರಕರಣದಲ್ಲಿ ಭಾಷಾ ತೊಡಕನ್ನು ಕೊಟ್ಟಿದ್ದಾರೆ. ಆ.29ರಂದು ಕುಮಾರಸ್ವಾಮಿ ವಿರುದ್ಧ ಪ್ರಕರಣದ ದಾಖಲೆಗಳನ್ನು ಕನ್ನಡದಿಂದ ಇಂಗ್ಲೀಷ್ ತರ್ಜುಮೆ ಮಾಡಿ ಸಲ್ಲಿಸುವಂತೆ ಲೋಕಾಯುಕ್ತ ಎಸ್ ಐಟಿಗೆ ರಾಜ್ಯಪಾಲರು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್: ಇನ್ನೂ 1 ವಾರ ಸಿಎಂ ಸಿದ್ದರಾಮಯ್ಯ ನಿರಾಳ
ಜೊಲ್ಲೆ-ನಿರಾಣಿ ನಿರಾಳ?: ಶಶಿಕಲಾ ಜೊಲ್ಲೆ ಸಚಿವೆಯಾಗಿದ್ದಾಗ ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ಗುತ್ತಿಗೆ ನೀಡಲು ಕಿಕ್ ಬ್ಯಾಕ್ ಪಡೆದಿದ್ದಾರೆಂದು ಆರೋ ಪಿಸಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಅದರನ್ವಯ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಎಫ್ ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲು ಪ್ರಾಸಿಕ್ಯೂಷ ನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಲೋಕಾ ಯುಕ್ತ ಪೊಲೀಸರು ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಇನ್ನು ವಿಶ್ವ ಬಂಡಾವಳ ಹೂಡಿಕೆದಾರರ ಸಮಾವೇಶದ ಕಿರು ಚಿತ್ರವೊಂದರ ವಿಡಿಯೋ ಚಿತ್ರೀಕರಣಕ್ಕೆ 4.5 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿ ಮಾಜಿ ಸಚಿವ ನಿರಾಣಿ ವಿರುದ್ಧ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆಗೆ ಪ್ರಾಸಿಕ್ಯೂಷನ್ ಒಪ್ಪಿಗೆ ಕೋರಿ ರಾಜ್ಯ ಪಾಲರಿಗೆ ಲೋಕಾಯುಕ್ತ ಮನವಿ ಮಾಡಿತ್ತು. ಆದರೆ ಈ ಬಗ್ಗೆ ಮಾಹಿತಿ ಕೋರಿದ್ದ ರಾಜ್ಯಪಾಲರಿಗೆ ಸ್ಪಷ್ಟಿಕರಣ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.