ನಾನು ಮಂತ್ರಿ ಸ್ಥಾನದ ಆಸೆ ಬಿಟ್ಟಾಯ್ತು: ಕೆ. ಎಸ್ ಈಶ್ವರಪ್ಪ

By Gowthami KFirst Published Feb 13, 2023, 1:26 PM IST
Highlights

ಮಂತ್ರಿ ಸ್ಥಾನದ ಆಸೆ ಬಿಟ್ಟಾಯ್ತು ಎಂದು ಮತ್ತೊಮ್ಮೆ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಸಷ್ಟಪಡಿಸಿದ್ದಾರೆ. ಸ್ಪಷ್ಟವಾಗಿ ಈಗಾಗಲೇ ಹೇಳಿದ್ದೇನೆ. ರಾಜ್ಯದ ಸಿಎಂ ಹಾಗೂ ಕೇಂದ್ರದ ನಾಯಕರು ಏನ್ ತೀರ್ಮಾನ ಮಾಡಿದ್ದಾರೆ ಅದೇ ಅಂತಿಮ ಎಂದಿದ್ದಾರೆ.

ಬೆಂಗಳೂರು (ಫೆ.13): ಮಂತ್ರಿ ಸ್ಥಾನದ ಆಸೆ ಬಿಟ್ಟಾಯ್ತು ಎಂದು ಮತ್ತೊಮ್ಮೆ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಸಷ್ಟಪಡಿಸಿದ್ದಾರೆ. ಸ್ಪಷ್ಟವಾಗಿ ಈಗಾಗಲೇ ಹೇಳಿದ್ದೇನೆ. ರಾಜ್ಯದ ಸಿಎಂ ಹಾಗೂ ಕೇಂದ್ರದ ನಾಯಕರು ಏನ್ ತೀರ್ಮಾನ ಮಾಡಿದ್ದಾರೆ ಅದೇ ಅಂತಿಮ ಎಂದಿದ್ದಾರೆ.

ಮೋದಿ ಪ್ರವಾಸಕ್ಕೆ ಕಾಂಗ್ರೆಸ್ ಟೀಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಕೆ.ಎಸ್‌ ಈಶ್ವರಪ್ಪ ಅವರು ಮೋದಿ ಈ ದೇಶದವರೇ , ಮೋದಿ ಕಂಡರೇ ಕಾಂಗ್ರೆಸ್ ಗೆ ಭಯ. ಮೋದಿ ರಾಜ್ಯಕ್ಕೆ ಬರಬಾರದಾ..? ಯಾವುದನ್ನು ಟೀಕೆ ಮಾಡಬೇಕು ಅನ್ನೋದು ಕಲ್ಪನೆ ಇಲ್ಲ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿನ ಯಾಕೆ ಕರೆಸ್ತಿಲ್ಲ..? ಮೊದಲು ರಾಹುಲ್ ಗಾಂಧಿನ ರಾಜ್ಯಕ್ಕೆ ಕರೆಸ್ತಿದ್ರು, ಇದೀಗ ಕರೆಸ್ತಿಲ್ಲ. ಯಾಕೆಂದರೆ ಅವರು ರಾಜ್ಯಕ್ಕೆ ಬಂದರೆ ಕಾಂಗ್ರೆಸ್ ಗೆ ಬರುವ ವೋಟ್ ಬರಲ್ಲ. ಹೀಗಾಗಿ ಅವರನ್ನು ಕರೆಸ್ತಿಲ್ಲ. ಮೋದಿ ವಿಶ್ವ ನಾಯಕ. ಅದಕ್ಕೆ ರಾಜ್ಯಕ್ಕೆ ಬರ್ತಾರೆ. ಅಬ್ದುಲ್ ನಜೀರ್ ಅವರನ್ನು ರಾಜ್ಯಪಾಲರಾಗಿ ಮಾಡಿದಕ್ಕೆ ಟೀಕೆ ಮಾಡ್ತಾರೆ. ಅದೆ ಎಷ್ಟು ದಿನ‌ ಟೀಕೆ ಮಾಡ್ತಾರೆ ನೋಡೋಣ. ಈಗ ವಿರೋಧ ಪಕ್ಷದಲ್ಲಿ ಇದಾರೆ. ಎಲೆಕ್ಷನ್ ಆದ್ಮೇಲೆ ಅದು ಇರಲ್ಲ ಎಂದರು.

Latest Videos

ಇನ್ನು ಆಯನೂರು ಮಂಜುನಾಥ್ ಶಿವಮೊಗ್ಗದಲ್ಲಿ ಪೋಸ್ಟರ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಈಶ್ವರಪ್ಪ, ಅವರವರ ಅಭಿಪ್ರಾಯ ಹೇಳ್ತಾರೆ. ಎಲ್ಲಾ ವ್ಯಕ್ತಿಗಳು ಅವರ ಅಭಿಪ್ರಾಯ ಹೇಳಬಹುದು. ಶಿವಮೊಗ್ಗದಲ್ಲಿ ಫಸ್ಟ್ ಕ್ಲಾಸ್ ಆಗಿ ಶಾಂತಿ ಇದೆ. ಶಾಂತಿ ಕೆಡಿಸಿದವರು ಇಂದು ಜೈಲಿನಲ್ಲಿ ಇದಾರೆ. ಇದು ವೈಯಕ್ತಿಕ ಅಭಿಪ್ರಾಯ ಇದೆ. ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದು, ಆಯನೂರು ಮಂಜುನಾಥ್ ಅವರ ಅಭಿಪ್ರಾಯ ಹೇಳಿದ್ದಾರೆ. ಅದನ್ನು ಇಷ್ಟೊಂದು ದೊಡ್ಡದಾಗಿ ಮಾಡುವ ಅವಶ್ಯಕತೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

click me!