ಮುಂಜಾನೆ 5.47ಕ್ಕೆ ರಾಷ್ಟ್ರಪತಿ ಆಡಳಿತ ಹಿಂಪಡೆತ!| ವಿಶೇಷ ಅಧಿಕಾರ ಬಳಸಿದ ರಾಷ್ಟ್ರಪತಿ ಆಳ್ವಿಕೆ ಹಿಂದಕ್ಕೆ ಪಡೆಯಲು ಶಿಫಾರಸು!
ಮುಂಬೈ[ನ.24]: ಮಹಾರಾಷ್ಟ್ರದಲ್ಲಿ ಶನಿವಾರ ಮುಂಜಾನೆ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೂ ಮುನ್ನ, ರಾಜ್ಯದ ಮೇಲೆ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಹಿಂದಕ್ಕೆ ಪಡೆಯಲಾಗಿತ್ತು. ಅಚ್ಚರಿ ವಿಷಯವೆಂದರೆ 12 ದಿನಗಳ ಹಿಂದೆ ಹೇರಲಾಗಿದ ರಾಷ್ಟ್ರಪತಿ ಆಳ್ವಿಕೆ ಹಿಂದಕ್ಕೆ ಪಡೆದಿದ್ದು ಶನಿವಾರ ಬೆಳಗಿನ ಜಾವ 5.47ಕ್ಕೆ.
ಅಜಿತ್ ಸೆಳೆದುಕೊಂಡ ಬಿಜೆಪಿ ಎದುರಿದೆ 'ಕಳಂಕ' ಅಳಿಸುವ ಹೊಣೆ!
ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಮುಂಜಾನೆ 5.47ಕ್ಕೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಿ, ರಾಷ್ಟ್ರಪತಿ ಆಡಳಿತ ಹಿಂಪಡೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂವಿಧಾನ 356ನೇ ವಿಧಿಯ 2ನೇ ಪರಿಚ್ಚೇದದಲ್ಲಿ ಹೇಳಲಾಗಿರುವ ಅಧಿಕಾರವನ್ನು ಬಳಸಿ ರಾಷ್ಟ್ರಪತಿ ಆಡಳಿತವನ್ನು ಹಿಂಪಡೆಯುವ ಘೋಷಣೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸಹಿ ಹಾಕಿದ್ದಾರೆ. ಇದಾದ ಬಳಿಕ ಫಡ್ನವೀಸ್ ಹಾಗೂ ಅಜಿತ್ ಪವಾರ್ ಪ್ರಮಾಣ ಸ್ವೀಕರಿಸಿದ್ದಾರೆ.
ವಿಶೇಷ ಅಧಿಕಾರ ಬಳಕೆ
ರಾಷ್ಟ್ರಪತಿಗಳ ಆಳ್ವಿಕೆಯನ್ನು ಮಹಾರಾಷ್ಟ್ರದಲ್ಲಿ ಏಕಾಏಕಿ ಹಿಂಪಡೆದ ಬಗ್ಗೆ ಕೆಲವು ಸಂದೇಹಗಳು ಸೃಷ್ಟಿಯಾಗಿವೆ. ‘ಆದರೆ ನಿರ್ಧಾರ ನಿಯಮಬದ್ಧವಾಗಿದೆ’ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೊಟ್ಟ ಹೊಡೆತಕ್ಕಿಂತ ದೊಡ್ಡ ಏಟು ತಿನ್ನುತ್ತಾ ಬಿಜೆಪಿ? NCP ಮುಂದಿನ ಆಯ್ಕೆ ಹೀಗಿದೆ
‘ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡುವ ಬಗ್ಗೆ ಕೇಂದ್ರ ಸಚಿವ ಸಂಪುಟ ಶಿಫಾರಸು ಮಾಡಿತ್ತು. ಆದರೆ ಹಿಂಪಡೆವ ಬಗ್ಗೆ ರಾಷ್ಟ್ರಪತಿಗೆ ಪ್ರಧಾನಿ ನೇರವಾಗಿ ಶಿಫಾರಸು ಮಾಡಿದ್ದಾರೆ. ಇದು ಸರಿಯೇ’ ಎಂಬ ಪ್ರಶ್ನೆ ಕೇಳಿಬಂದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರದ ಅಧಿಕಾರಿಗಳು, ‘ಮೊದಲು ಕೇಂದ್ರ ಸಚಿವ ಸಂಪುಟ ಸಭೆ ಸೇರಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುತ್ತದೆ. ಆಗ ಭಾರತ ಸರ್ಕಾರದ ನಿಯಮ 12ರ ಪ್ರಕಾರ ಸಂಪುಟವು ‘ರಾಷ್ಟ್ರಪತಿ ಆಳ್ವಿಕೆ’ ಹಿಂಪಡೆಯಲು ಶಿಫಾರಸು ಮಾಡುವ ಅಧಿಕಾರ ಪ್ರಧಾನಿಗಿದೆ ಎಂಬ ನಿರ್ಣಯವನ್ನೂ ಕೈಗೊಂಡಿರುತ್ತದೆ.
ಆ ಪ್ರಕಾರ ಆಳ್ವಿಕೆ ಹಿಂಪಡೆವ ಶಿಫಾರಸನ್ನು ರಾಷ್ಟ್ರಪತಿಗೆ ಪ್ರಧಾನಿ ಮಾಡಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು