ಕಾಂಗ್ರೆಸ್‌ನವರೇ ಮೊದಲು ತಮ್ಮ ಶಾಸಕರನ್ನು ಉಳಿಸಿಕೊಳ್ಳಲಿ: ನಿಖಿಲ್‌ ಕುಮಾರಸ್ವಾಮಿ

Kannadaprabha News   | Kannada Prabha
Published : Jul 06, 2025, 02:11 PM IST
nikhil kumaraswamy

ಸಾರಾಂಶ

ಜೆಡಿಎಸ್ ಶಾಸಕರು ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದವರೇ ಮೊದಲು ತಮ್ಮ ಕಾಂಗ್ರೆಸ್ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಯಾದಗಿರಿ (ಜು.06): ಜೆಡಿಎಸ್ ಶಾಸಕರು ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದವರೇ ಮೊದಲು ತಮ್ಮ ಕಾಂಗ್ರೆಸ್ ಶಾಸಕರನ್ನು ಉಳಿಸಿಕೊಳ್ಳಲಿ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. "ಜನರೊಂದಿಗೆ ಜನತಾದಳ- ಜೆಡಿಎಸ್‌ ಸದಸ್ಯತ್ವ ನೋಂದಣಿ ಅಭಿಯಾನ"ದ ಅಂಗವಾಗಿ ಶನಿವಾರ ಯಾದಗಿರಿಯ ಸಪ್ತಪದಿ ಕನ್ವೆನ್ಷನ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ, ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆಂಬ ಮದ್ದೂರು ಶಾಸಕ ಉದಯ್ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಶಾಸಕರೇ ಈಗ ಸಾರ್ವಜನಿಕ ವಲಯದಲ್ಲಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್ ಪಕ್ಷದ ಶಾಸಕರೆಲ್ಲರೂ ನಮ್ಮ ಕುಟುಂಬದ ಸದಸ್ಯರು ಇದ್ದ ಹಾಗೆ. ಎಲ್ಲ ಜೆಡಿಎಸ್ ಶಾಸಕರು ನಿರಂತರವಾಗಿ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಜೆಡಿಎಸ್‌ ಶಾಸಕರಿಗೆ ಬರುವ ಆಫರ್‌ಗಳನ್ನು ಶಾಸಕರು ನಮ್ಮ ಗಮನಕ್ಕೆ ತರುತ್ತಾರೆ ಎಂದ ನಿಖಿಲ್‌, ಕಾಂಗ್ರೆಸ್ ಮೊದಲು ತನ್ನನ್ನು, ಸರ್ಕಾರವನ್ನು ಹಾಗೂ ತಮ್ಮ ಶಾಸಕರನ್ನು ಉಳಿಸಿಕೊಳ್ಳಬೇಕಿದೆ. ಸರ್ಕಾರದ ಕುರ್ಚಿ ಭದ್ರಪಡಿಸಿಕೊಳ್ಳಬೇಕಿದೆ ಎಂದು ಟಾಂಗ್‌ ನೀಡಿದರು.

ಕಂದಕೂರ ಕುಟುಂಬ ದೇವೇಗೌಡರಿಗೆ ನಿಷ್ಠಾವಂತ: ಯಾದಗಿರಿಯ ಕಂದಕೂರ ಕುಟುಂಬ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರಿಗೆ ನಿಷ್ಠಾವಂತ ಕುಟುಂಬ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. ಯಾದಗಿರಿಯಲ್ಲಿ ನಡೆದ ಜನರೊಂದಿಗೆ ಜನತಾದಳ - ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಸಾಕಷ್ಟು ಕೇಸ್‌ಗಳನ್ನು ಎದುರಿಸಿ, ಕಾರ್ಯಕರ್ತರಿಗೆ ಧೈರ್ಯ ತುಂಬಿದವರು ದಿ. ಸದಾಶಿವರೆಡ್ಡಿ ಹಾಗೂ ದಿ. ನಾಗನಗೌಡ ಕಂದಕೂರು ಅವರು. 2018 ರಲ್ಲಿ ಮೊದಲ ಬಾರಿಗೆ ನಾಗನಗೌಡ ಕಂದಕೂರು ಅವರು ಮೊದಲ ಬಾರಿ ಶಾಸಕರಾದರು. ಎಚ್‌. ಡಿ. ಕುಮಾರಸ್ವಾಮಿ ಅವರಿಗೆ ಶರಣಗೌಡ ಕಂದಕೂರು ನನ್ನಂತೆ, ಮಗನಿದ್ದಂತೆಯೇ ಎಂದ ನಿಖಿಲ್‌, ಜೆಡಿಎಸ್ ಪಕ್ಷದಿಂದ ಸಾಕಷ್ಟು ಜನ ಶಾಸಕರಾಗಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಬಹುತೇಕ ಶಾಸಕರು, ಸಚಿವರಾದವರು ಜನತಾದಳದ ಔಟ್ಪುಟ್ ಗಳು ಎಂದರು.

ಅಧಿಕಾರ ಅಥವಾ ಹಣದ ಆಸೆಗೆ ಕೆಲವರು ಪಕ್ಷವನ್ನು ತ್ಯಜಿಸಿರಬಹುದು. ಆದರೆ, ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ಬೆಂಬಲವಾಗಿ ನಿಂತಿರುವುದು ಕಂದಕೂರು ಕುಟುಂಬ. ಮಧು ಬಂಗಾರಪ್ಪ ಅವರ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾಗಿದ್ದರು. ಅವರು ನಂತರ ಪಕ್ಷವನ್ನು ಬಿಟ್ಟು ಹೋದರು. ಆಗ ದೇವೆಗೌಡ ಅವರು ಶಾಸಕ ಶರಣಗೌಡ ಅವರನ್ನು ಕರೆಸಿದರು. ಆಗ ಯುವ ಜನತಾದಳ ರಾಜ್ಯಾಧ್ಯಕ್ಷರಾಗಿ ಶರಣಗೌಡ ಅವರನ್ನು ಮಾಡಲು ದೇವೇಗೌಡ ಅವರು ಚಿಂತನೆ ನಡೆಸಿದ್ದರಾದರೂ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಬೇಕಿದೆ, ಜೊತೆಗೆ ತಂದೆಯವರೂ ಸಹ ಶಾಸಕರಿದ್ದು, ಕ್ಷೇತ್ರದ ಜನರ ಸೇವೆ ಮಾಡಬೇಕಿದೆ, ಅಧ್ಯಕ್ಷ ಸ್ಥಾನ ಬೇಡ ಅಂದಿದ್ದರು. ಆಗ ನನ್ನ ಹೆಸರನ್ನು ಶರಣಗೌಡ ಕಂದಕೂರು ಅವರು ಸೂಚಿಸಿದ್ದರು. ಜೆಪಿ ಭವನದಲ್ಲಿ ನನ್ನನ್ನು ಕರೆಸಿ ಯುವ ಘಟಕದ ರಾಜ್ಯಾಧ್ಯಕ್ಷರನ್ನು ಮಾಡಿದ್ದರು ಎಂದು ನಿಖಿಲ್‌ ಸ್ಮರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ