ಮುಂಬರುವ ಎಲೆಕ್ಷನ್‌ನಲ್ಲಿ ಕುಮಾರಸ್ವಾಮಿ ಯಾವ ಕ್ಷೇತ್ರದಿಂದ ಸ್ಪರ್ಧೆ?: ಎಚ್‌ಡಿಕೆ ಹೇಳಿದ್ದಿಷ್ಟು

By Kannadaprabha News  |  First Published Jun 20, 2022, 3:00 AM IST

*  ಚನ್ನಪಟ್ಟಣದಿಂದಲೇ ಮುಂದಿನ ಸಲವೂ ಸ್ಪರ್ಧೆ
*  ಮಾಗಡಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದೆಲ್ಲ ಸುಳ್ಳು
*  ದೇವೇಗೌಡರ ಕುಟುಂಬದೊಂದಿಗೆ ಚನ್ನಪಟ್ಟಣ ತಾಲೂಕಿನ ಜನತೆ ಹೊಂದಿರುವ ಅವಿನಾಭಾವ ಸಂಬಂಧ 


ಚನ್ನಪಟ್ಟಣ(ಜೂ.20): ಮುಂದಿನ ವಿಧಾನಸಭೆ ಚುನಾವಣೆಯನ್ನು ಚನ್ನಪಟ್ಟಣದಿಂದಲೇ ಸ್ಪರ್ಧಿಸುವುದಾಗಿ ತಿಳಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಗಡಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬುದೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಭೈರಾಪುರದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ನಾನು ಯಾವುದೇ ಕ್ಷೇತ್ರಕ್ಕೆ ಹೋಗುವುದಿಲ್ಲ. ಚನ್ನಪಟ್ಟಣದಿಂದಲೇ ಸ್ಪರ್ಧಿಸುತ್ತೇನೆ. ಮಾಗಡಿ ಕ್ಷೇತ್ರಕ್ಕೆ ಹೋಗುತ್ತೇನೆ ಎಂಬುದು ಸುಳ್ಳು. ಅಲ್ಲಿಂದ ಈಗ ಗೆದ್ದಿರುವ ನಮ್ಮ ಪಕ್ಷದ ಅಭ್ಯರ್ಥಿಯೇ ಸ್ಪರ್ಧೆ ಮಾಡಲಿದ್ದಾರೆ. ಹಾಗೂ ಮತ್ತೆ ಅವರೇ ಗೆದ್ದು ಶಾಸಕರಾಗಲಿದ್ದಾರೆ ಎಂದರು. 

Tap to resize

Latest Videos

ರಾಷ್ಟ್ರಪತಿ ಚುನಾವಣೆಗೆ ದೇವೇಗೌಡ್ರು ಸ್ಪರ್ಧಿಸುತ್ತಾರಾ? ಎಲ್ಲಾ ಗೊಂದಲಗಳಿಗೆ HDK ತೆರೆ

ರಾಜ್ಯಾದ್ಯಂತ ಪಕ್ಷದ ಸಂಘಟನೆ ಕೈಗೊಂಡಿದ್ದ ಕಾರಣ ಕೆಲಕಾಲ ಚನ್ನಪಟ್ಟಣಕ್ಕೆ ಬರಲಿಲ್ಲ. ಇಡೀ ಜಿಲ್ಲೆಯೇ ನನ್ನ ಕರ್ಮಭೂಮಿ. ರಾಮನಗರದಿಂದ ನಾನು ಸ್ಪರ್ಧೆ ಮಾಡುತ್ತಿದ್ದವನು ಅನಿವಾರ್ಯ ಕಾರಣದಿಂದ ಚನ್ನಪಟ್ಟಣಕ್ಕೆ ಬರಬೇಕಾಯಿತು. ದೇವೇಗೌಡರ ಕುಟುಂಬದೊಂದಿಗೆ ಈ ತಾಲೂಕಿನ ಜನತೆ ಹೊಂದಿರುವ ಅವಿನಾಭಾವ ಸಂಬಂಧ ಇದಕ್ಕೆ ಕಾರಣ ಎಂದರು.
 

click me!